Thursday, January 23, 2025

ಬಸವೇಶ್ವರ ಕೃಷಿ ಪತ್ತಿನ ಬ್ಯಾಂಕ್‌ನಲ್ಲಿ ಗೋಲ್‌ಮಾಲ್

ಬೆಳಗಾವಿ :  ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಮತೇನಟ್ಟಿ ಗ್ರಾಮದ ಬಸವೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಬ್ಯಾಂಕ್‌ನಲ್ಲಿ‌ ಭಾರೀ ಗೋಲ್‌ಮಾಲ್ ನಡೆದಿದೆ. ಬ್ಯಾಂಕಿನ ಮಾಜಿ ಅಧ್ಯಕ್ಷ ಭೀಮಪ್ಪ‌ ಜರಳಿ ರೈತರ ಹೆಸರಿನಲ್ಲಿ ನಕಲಿ ಸಹಿ ಮಾಡಿ ಲಕ್ಷ ಲಕ್ಷ ಸಾಲ‌ವನ್ನು ಲಪಟಾಯಿಸಿದ ಆರೋಪವನ್ನು ರೈತರು ಮಾಡಿದ್ದಾರೆ. ಬ್ಯಾಂಕ್ ಆಡಳಿತ ಮಂಡಳಿ ಸದಸ್ಯರ ಚುನಾವಣೆ ನಂತರ ಹೊಸ ಸದಸ್ಯರು ಬಂದಾಗ ಈ ಅವ್ಯವಹಾರ ಬೆಳಕಿಗೆ ಬಂದಿದೆ. 277 ಒಟ್ಟು ಖಾತೆಗಳ ಪೈಕಿ 223 ಜನರ ಹೆಸರಿನಲ್ಲಿ ಭೀಮಪ್ಪ ದುಡ್ಡು ಹೊಡೆದಿದ್ದಾರೆ ಎನ್ನಲಾಗಿದೆ. ಒಟ್ಟು 83.48 ಲಕ್ಷ ಬೆಳೆ ಸಾಲ, 29 ಲಕ್ಷ ಬಿಡಿಪಿ ಸಾಲ ಸೇರಿಸಿ ಒಟ್ಟು 1 ಕೋಟಿ 13 ಲಕ್ಷದ ಅವ್ಯವಹಾರ ಈ ಬ್ಯಾಂಕಿನಲ್ಲಿ ನಡೆದಿದೆ. ನಮಗೆ ಹಣ ವಾಪಸ್ ನೀಡಿ ಅಥವಾ ಸಾಲ‌ ಮನ್ನಾ ಮಾಡಿ ಅಂತಾ ರೈತರು ಚಡಪಡಿಸುತ್ತಿದ್ದಾರೆ.

ಇನ್ನು ಬ್ಯಾಂಕಿನ್ ನೂತ‌ನ‌ ಅಧ್ಯಕ್ಷ ಮಾತನಾಡಿ ಮಾಜಿ ಅಧ್ಯಕ್ಷ ಭೀಮಪ್ಪ‌ ವಿರುದ್ಧ ಅಕ್ರಮದ ಆರೋಪ‌ ಮಾಡಿದರು.‌ಅನೇಕ‌ ರೈತರ ಖಾತೆಗಳ ಪಾಸ್‌ಬುಕ್ ಸಹಿತ ರೈತರಿಗೆ ನೀಡದೇ ತಾವೇ ಫೋರ್ಜರಿ ಮಾಡಿದ್ದಾರೆ. ಪಾಸ್ ಬುಕ್ ಸಹ ರೈತರಿಗೆ ನೀಡುತ್ತಿರಲ್ಲಿ‌ಲ್ಲ ಎಂದು ಆರೋಪಿಸಿದರು.

ಒಟ್ಟಾರೆ ರಕ್ಷಕನೇ ಭಕ್ಷಕನಾದ ಎಂಬಂತೆ ಬ್ಯಾಂಕಿನ ಅಧಿಕಾರ ದುರ್ಬಳಕೆ ಮಾಡಿಕೊಂಡು ರೈತರಿಗೆ ಅನ್ಯಾಯ ಮಾಡಿದವರಿಗೆ ತಕ್ಕ ಶಿಕ್ಷೆಯಾಗುವ ಜತೆಗೆ ರೈತರಿಗೆ ನ್ಯಾಯ ಕೊಡಿಬೇಕಿದೆ.

ಸಿದ್ದೇಶ್ ಪುಠಾಣೆ ಪವರ್ ಟಿವಿ

RELATED ARTICLES

Related Articles

TRENDING ARTICLES