Monday, December 23, 2024

ಧ್ರುವ ಸರ್ಜಾ ಮೇಲಿನ ಅಭಿಮಾನಕ್ಕೆ 650 ಕಿಮೀ ಕಾಲ್ನಡಿಗೆಯಲ್ಲಿ ಬಂದ ಸಾಹಸಿ ಅಭಿಮಾನಿ

ಬೆಂಗಳೂರು; ಒಬ್ಬ ಹೀರೋನಾ ರಾಜನಾಗಿ ಮೆರೆಸೋರು ಅಭಿಮಾನಿಗಳು, ಅದರಂತೆ ಅಣ್ಣಾವ್ರು ಅಭಿಮಾನಿಗಳೆ ದೇವ್ರು ಅಂದಿದ್ದ ಮಾತು 100 ಕ್ಕೆ ನೂರು ಸತ್ಯ. ಈ ಕಥೆ ಕೇಳಿದ್ರೆ ನಿಜಕ್ಕೂ ನಿಮಗೆ ಶಾಕ್​ ಆಗತ್ತೆ. ಹಗಲು ರಾತ್ರಿ ಎನ್ನದೆ, ಬಿಸಿಲು, ಮಳೆ ಎನ್ನದೆ 650ಕಿಮೀ ಕಾಲ್ನಡಿಗೆಯಲ್ಲೆ ನಡೆದು ಬಂದ ಅಭಿಮಾನಿಯೊಬ್ಬನ ರೋಚಕ ಕಥೆ ಇದು.

ಆತನೊಬ್ಬ ಹುಚ್ಚು ಅಭಿಮಾನಿ. ಹೆಸರು ಸಂದೀಪ್​​ ಇನಾಮ್ದಾರ್​. ಮೂಲತಃ ಗದಗ ಹಳ್ಳಿ ಹೈದ. ನಟ ಧ್ರುವ ಸರ್ಜಾ ಅಂದ್ರೆ ಪ್ರಾಣಕ್ಕಿಂತ ಹೆಚ್ಚು ಪ್ರೀತಿ. ಜೀವ ಬೇಕಾದ್ರೂ ಕೊಡ್ತೀನಿ ಅಂತಾನೆ. ಅಣ್ಣನ ಸಿನಿಮಾ ನೋಡಿ ಬೆಳೆದಿದ್ದೇನೆ. ಧ್ರುವ ಸರ್ಜಾ ಅವ್ರ ಸಿನಿಮಾಗಳ ಮೂಲಕ ಅಪ್ಪ ಅಮ್ಮನ ಹೇಗೆ ಪ್ರೀತಿಸಬೇಕು ಅನ್ನೋದು ಕಲಿತಿದ್ದೇನೆ. ಹಾಗಾಗಿ ಅಣ್ಣನನ್ನು ನೋಡೋಕೆ 650 ಕಿಮೀ ದೂರದಿಂದ ಬರೀ ಕಾಲ್ನಡಿಗೆಯಲ್ಲಿ ಸಂದೀಪ್​ ಬಂದು ತನ್ನ ಹುಚ್ಚು ಅಭಿಮಾನವನ್ನ ತೋರಿಸಿದ್ದಾನೆ.

ಒಟ್ಟು 37 ದಿನಗಳು ಕೇಳಲು ಸಹಜ ಎನಿಸಬಹುದು. ಆದರೆ, ಸವೆದು ಹೋಗಿರೋ ಚಪ್ಪಲಿ. ಗುಂಡಿ ಇಲ್ಲದ ಶರ್ಟ್​​​​​. ಒಂದೂ ಟೋಪಿ ಕೂಡ ಇಲ್ಲದೆ ಹೆಗಲ ಮೇಲೆ ಶ್ವೆಟರ್​​ ಹಾಕಿಕೊಂಡು ಬಂದ ಅಪ್ಪಟ ಅಭಿಮಾನಿ ಈತ. ಧ್ರುವ ಸರ್ಜಾ ಅವ್ರು ತೆರೆಯ ಮೇಲೆ ಮಾತ್ರವಲ್ಲದೆ ನಿಜ ಜೀವನದಲ್ಲೂ ರಿಯಲ್​ ಹೀರೋ ಆಗಿದ್ದಾರೆ ಅನ್ನೋ ಕಾರಣಕ್ಕೆ ಗದಗದ ಪೋರ ಇಷ್ಟು ಪ್ರೀತಿ ಬೆಳೆಸಿಕೊಂಡಿದ್ದಾನೆ. ಇದ್ರ ನಡುವೆ ಕಳ್ಳರ ರಾಬರಿ ಬಗ್ಗೆಯೂ ಮಾತನಾಡಿದರು.

ಈ ರೀತಿ ಇಷ್ಟು ದೂರದಿಂದ ನಡೆದು ಬರ್ತಾನೆ ಅಂದ್ರೆ ನಾನೆ ಎಲ್ಲಾ ವ್ಯವಸ್ಥೆ ಮಾಡ್ತಿದ್ದೆ. ನಾನೇನು ಸೂಪರ್​ ಸ್ಟಾರ್​ ಅಲ್ಲ. ಮೊದ್ಲು ಕೇಳಿದ ತಕ್ಷಣ ಶಾಕ್​ ಆಯ್ತು. ದಯವಿಟ್ಟು ಈ ರೀತಿ ಇನ್ನೊಮ್ಮೆ ಮಾಡ್ಬೇಡಿ. ಅಂತಾ ಸ್ಯಾಂಡಲ್​ವುಡ್​ ಮಾರ್ಟಿನ್​​ ಬುದ್ದಿ ಮಾತು ಹೇಳಿದ್ದು ಮಾತ್ರ, ನಟನ ಹೃದಯ ಪ್ರೀತಿ ವ್ಯಕ್ತವಾದಂತ್ತಿತ್ತು.

ಎನೇ ಇರಲಿ ರಕ್ತ ಸಂಬಂಧಿಗಳಲ್ಲ, ಜೊತೆಯಾಡಿ ಬೆಳೆದಿಲ್ಲ, ಕಷ್ಠ ಸುಖ ಹಂಚಿಕೊಂಡವರಲ್ಲ, ಆದ್ರೂ ಸಿನಿಮಾದಿಂದ್ಲೇ ಬೆಟ್ಟದಷ್ಟು ಪ್ರೀತಿ ಬೆಳೆಸಿಕೊಂಡ ಅಭಿಮಾನ ವರ್ಣಿಸೋಕೆ ಪದಗಳು ಸಾಲದು.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES