Tuesday, December 24, 2024

ಬೆಂಗಳೂರು ಭಾರತದ ಬಾಹ್ಯಾಕಾಶ ನಗರ ಅಂದ್ರೆ ತಪ್ಪಿಲ್ಲ : ಸಿಎಂ ಬಸವರಾಜ್

ಬೆಂಗಳೂರು : ದ್ರೌಪದಿ ಮುರ್ಮು ಅವರು ರಾಜ್ಯಕ್ಕೆ ಭೇಟಿ ಕೊಟ್ಟಿರುವುದು ಹೆಮ್ಮೆ ತಂದಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜ್ಞಾನಕ್ಕೆ ಎಲ್ಲೆ ಇಲ್ಲ. ವಿಜ್ಞಾನದ ಅಂತಿಮ ಗುರಿ ಮಾನವನ, ಜೀವಿ ಸಂಕುಲದ ಹಿತ ಕಾಪಾಡವುದೇ ಆಗಿದೆ. ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತ ಶತಮಾನಗಳಿಂದ ಹೆಜ್ಜೆ ಗುರುತು ಉಳಿಸಿಕೊಂಡು ಬಂದಿದೆ. ಕ್ರಯೋಜನಿಕ್ ಇಂಜಿನ್ ಉತ್ಪಾದನೆ ಬಗ್ಗೆ ಕಳೆದ ನಾಲ್ಕೈದು ದಶಕಗಳಿಂದಲೂ ಚರ್ಚೆ ನಡಿತಿದೆ. ಕ್ರಯೋಜನಿಕ್ ಇಂಜಿನ್ ಉತ್ಪಾದಿಸುವ ಜಗತ್ತಿನ ಕೆಲವೇ ದೇಶಗಳಲ್ಲಿ ಭಾರತವೂ ಒಂದು ಎಂದರು.

ಇನ್ನು, ನಮ್ಮ ರಾಜ್ಯ ಕ್ರಯೋಜನಿಕ್ ಇಂಜಿನ್ ಉತ್ಪಾದಿಸುತ್ತಿರುವುದು ನಮಗೆ ಹೆಮ್ಮೆ ತಂದಿದೆ. ಎಚ್ಎಎಲ್ ವಿಜ್ಞಾನಿಗಳಿಗೆ ಇದರ ಯಶಸ್ಸು ಸಲ್ಲಲಿದೆ. ಬೆಂಗಳೂರು ಭಾರತ ಬಾಹ್ಯಾಕಾಶ ನಗರ ಅಂದ್ರೆ ತಪ್ಪಿಲ್ಲ. 25% ಏರೋಸ್ಪೇಸ್ ಬಿಡಿಭಾಗಗಳು ನಗರದಲ್ಲಿ ಉತ್ಪಾದಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಇಸ್ರೋ ಇಂದ ಹೈಬ್ರಿಡ್ ಇಂಜಿನ್ ಉತ್ಪಾದಿಸುವ ಗುರಿ ಇಟ್ಕೊಂಡಿದೆ. ಹೈಬ್ರಿಡ್ ಇಂಜಿನ್ ಅನ್ನು ಬೆಂಗಳೂರಿನಲ್ಲೇ ಉತ್ಪಾದಿಸುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಕೋವಿಡ್ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ 200 ಆರ್ಟಿಪಿಸಿಆರ್ ಲ್ಯಾಬ್ ತೆರೆಯಲಾಗಿದೆ. ರಾಜ್ಯದಲ್ಲಿ ಆರ್ ಅಂಡ್ ಡಿ ನೀತಿ ಜಾರಿಗೊಳಿಸಲಾಗಿದೆ. ರಕ್ಷಣಾ ಸಂಶೋಧನೆಗೆ ಈ ನೀತಿ ಪೂರಕವಾಗಲಿದೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES