Monday, December 23, 2024

ಪರಸ್ಪರ ಹೊಡೆದಾಡಿಕೊಂಡ ಬಿಜೆಪಿ-ಜೆಡಿಎಸ್​ ಮುಖಂಡರು.!

ಯಾದಗಿರಿ: ಜೆಡಿಎಸ್​ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಬ್ಯಾನರ್​ ಕದನ ತಾರಕಕ್ಕೇರಿ ಪರಸ್ಪರ ಹೊಡೆದಾಡಿಕೊಂಡ ಘಟನೆ ಜಿಲ್ಲೆಯ ಸಾವೂರಿನಲ್ಲಿ ನಡೆದಿದೆ.

ಬಿಜೆಪಿ ಮಾಜಿ ಸಚಿವ ಬಾಬುರಾವ್​ ಚಿಂಚನೂರ್​ ಹಾಗೂ ಜೆಡಿಎಸ್​ ಶಾಸಕ ನಾಗನಗೌಡ ಕಂದಕೂರ ಅವರ ಬೆಂಬಲಿಗರ ನಡುವೆ ಅಡಿಗಲ್ಲು ಸಮಾರಂಭದ ಬ್ಯಾನರ್​ಗೆ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬಾರಾವ್ ಚಿಂಚನಸೂರ ಅವರು ಬರುವ ಮೊದಲೇ ಅಡಿಗಲ್ಲು ಸಮಾರಂಭಕ್ಕೆ ಸಿದ್ಧತೆ ನಡೆಸಿಕೊಳ್ಳಲಾಗಿತ್ತು. ಈ ವೇಳೆ ಗುರುಮಿಟಕಲ್ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಬೆಂಬಲಿಗರು ಅಡಿಗಲ್ಲು ಹಾಕಲು ಮುಂದಾಗಿದ್ದ ಕಾರಣಕ್ಕೆ ಈ ಗಲಾಟೆ ನಡೆದಿದೆ.

ಕಂದಕೂರ ಬೆಂಬಲಿಗರ ನಡೆಯಿಮದ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಕಾರ್ಯಕರ್ತರು ಹಾಗೂ ಚಿಂಚನಸೂರ ಬೆಂಬಲಿಗರ ಶಾಸಕ ಕಂದಕೂರ ಇರುವ ಬ್ಯಾನರ್ ಹರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES