ಬೆಂಗಳೂರು : ಕಾಂಗ್ರೆಸ್ನ ‘ಪೇಸಿಎಂ’ ಅಭಿಯಾನ ಭಾರೀ ಸದ್ದು ಮಾಡ್ತಿದೆ. ಇದ್ರಿಂದ ರಾಜ್ಯ ಸರ್ಕಾರಕ್ಕೂ ತೀವ್ರ ಮುಜುಗರವಾಗಿದೆ. ಇದೀಗ ಬಿಜೆಪಿ ಸಚಿವರು, ಶಾಸಕರನ್ನ ಟಾರ್ಗೆಟ್ ಮಾಡಿ ‘ಪೇಸಿಎಂ’ ಮಾದರಿಯಲ್ಲೇ ಅಭಿಯಾನ ನಡೆಸಲು ಸಿದ್ದವಾಗಿದೆ. ಇದರ ಮೊದಲ ಭಾಗವಾಗಿ ಕೆರೆಗಳನ್ನು ನುಂಗಿದ ‘ಸಾಮ್ರಾಟ್ ಅಶೋಕ’ ಅಂತ ಪೋಸ್ಟರ್ ಮಾಡಿ ಬಸ್ ಸ್ಟ್ಯಾಂಡ್, ಪಾರ್ಕ್ ಸೇರಿ ಹಲವೆಡೆ ಪೋಸ್ಟರ್ ಹಾಕಲಾಗಿದೆ. ಬೇರೆ ಬೇರೆ ಸಚಿವರ ಭ್ರಷ್ಟಾಚಾರ ಪೋಸ್ಟರ್ಗಳನ್ನ ಆಯಾ ಜಿಲ್ಲೆಗಳಲ್ಲಿ ಹಂಚಲು ಕಾಂಗ್ರೆಸ್ ನಿರ್ಧರಿಸಿದೆ. ಈ ಮೂಲಕ ಬಿಜೆಪಿ ವಿರುದ್ದ ದೊಡ್ಡ ಪ್ರಮಾಣದಲ್ಲಿ ಜನಾಭಿಪ್ರಾಯ ಮೂಡಿಸಲು ಪ್ಲ್ಯಾನ್ ಮಾಡಿದೆ. ಹಾಗೇ ಜಿಲ್ಲೆ, ತಾಲೂಕಿನ ಮಟ್ಟದಲ್ಲೂ ಪೋಸ್ಟರ್ ಅಭಿಯಾನ ನಡೆಸುವ ಸಾಧ್ಯತೆಯಿದೆ.
ಇತ್ತ ಕಾಂಗ್ರೆಸ್ ಅಭಿಯಾನಕ್ಕೆ ಹೆಚ್ಚು ಜನಪ್ರಿಯತೆ ಸಿಗುತ್ತಿದ್ದಂತೆ ಬಿಜೆಪಿ ಸಹ ಕಾಂಗ್ರೆಸ್ ನಾಯಕರ ಕುರಿತು ತೊಗರಿ ತಿಪ್ಪಾ ಎಂಬ ಸಾಂಗ್ ವೈರಲ್ ಮಾಡಿತ್ತು. ರಿಡೂ ಸಿದ್ದರಾಮಯ್ಯ, ಇಡಿ ಶಿವಕುಮಾರ್ ಅಂತ ಪೋಸ್ಟರ್ ವೈರಲ್ ಮಾಡಿಸಿತ್ತು.. ಪಿಎಸ್ಐ ಹಗರಣದ ದಾಖಲೆ ನೀಡದೇ ಓಡಿಹೋದ ಪಿಂಕಿ ಅಂತ ಪ್ರಿಯಾಂಕ್ ಖರ್ಗೆ ಬಗ್ಗೆ ಬಿಜೆಪಿ ವ್ಯಂಗ್ಯವಾಡಿದೆ.
ಈ ನಡುವೆ ಸಿದ್ದರಾಮಯ್ಯ ವಿರುದ್ಧ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ. ಅರ್ಕಾವತಿ ರೀಡೂ ಮಾಡಿ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟ ಮಾಡಿದ್ದಾರೆ. ಕೈಗೆ ಹ್ಯಾಂಡ್ ಗ್ಲೌಸ್ ಹಾಕಿ ಸಿದ್ದರಾಮಯ್ಯ ಅಕ್ರಮ ಮಾಡಿದ್ದಾರೆ ಎಂದು ಆರೋಪಿಸಿದ್ರೆ.. ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟಿರೋ ಶಾಸಕ ಪ್ರಿಯಾಂಕ್ ಖರ್ಗೆ, ನಮ್ಮ ಕಾಲದಲ್ಲಿ ಆಗಿರುವ ಹಗರಣಗಳನ್ನು ಕೂಡ ತನಿಖೆಗೆ ಕೊಡಿ. ವಿರೋಧ ಪಕ್ಷದಲ್ಲಿರುವವರ ಮೇಲೆ ಗೂಬೆ ಕೂರಿಸಬೇಡಿ ಎಂದಿದ್ದಾರೆ.
ರಾಜಧಾನಿಯಲ್ಲಿ ಆರಂಭವಾದ ಪೋಸ್ಟರ್ ಅಭಿಯಾನ ಜಿಲ್ಲಾ, ತಾಲೂಕು ಮಟ್ಟದಲ್ಲಿ ನಡೆಸಲು ಕಾಂಗ್ರೆಸ್ ಸಿದ್ದವಾಗ್ತಿದೆ.. ಸಿಎಂ ಬಳಿಕ ಸಚಿವರು, ಶಾಸಕರನ್ನ ಟಾರ್ಗೆಟ್ ಮಾಡಲು ಕಾರ್ಯತಂತ್ರ ಹೆಣೆಯಲಾಗುತ್ತಿದೆ. ಇದನ್ನ ಬಿಜೆಪಿ ಹೇಗೆ ಎದುರಿಸುತ್ತದೆ ಅನ್ನೋದನ್ನ ಕಾದುನೋಡಬೇಕಿದೆ.
ರೂಪೇಶ್ ಬೈಂದೂರು, ಪವರ್ ಟಿವಿ, ಬೆಂಗಳೂರು