ಬೆಂಗಳೂರು : ವಿಧಾನಮಂಡಲ ಅಧಿವೇಶನ ಕ್ಕೆ ಮಾತ್ರ ಸೀಮಿತವಾದ ಆಪರೇಷನ್ ಬುಲ್ಡೋಜರ್ ರಾಜಧಾನಿಯಲ್ಲಿ ಎರಡೇ ವಾರಕ್ಕೆ ತೆರವು ಕಾರ್ಯ ಕಂಪ್ಲೀಟ್ ಸ್ಥಗಿತಗೊಂಡಿದೆ.
ಇನ್ನು, ಅಧಿವೇಶನ ಪೂರ್ಣಗೊಂಡು ಮೂರೇ ದಿನಕ್ಕೆ ಒತ್ತುವರಿ ಕಾರ್ಯಾಚರಣೆ ನಿಲ್ಲಿಸಿದ ಪಾಲಿಕೆ. ಖಾಲಿ ಜಾಗ ಗೋಡೆಗಳ ಮೇಲೆ ಪ್ರತಾಪ ತೋರಿಸಿ ಸೈಲೆಂಟ್ ಆಗಿದೆ. ಅಧಿವೇಶನ ಮುಗಿದ ಬೆನ್ನಲ್ಲೇ ರಾಜಕಾಲುವೆ ಒತ್ತುವರಿ ಒತ್ತುವರಿ ಸೌಂಡ್ ಇಲ್ಲ. ವಿಪಕ್ಷಗಳ ಕಣ್ಣೊರೆಸೋಕೆ ಒತ್ತುವರಿ ತೆರವು ಕಾರ್ಯಕ್ಕೆ ಚಾಲನೆ ನೀಡ್ತಾ ಸರ್ಕಾರ ಎಂದು ಪ್ರಶ್ನೆಯಾಗಿಯೇ ಉಳಿದಿದೆ.
ರಾಜಧಾನಿಯಲ್ಲಿ ಕೇವಲ ಕಾಟಾಚಾರಕ್ಕೆ ಬುಲ್ಡೋಜರ್ ಬಿಟ್ಟು ಸುಮ್ಮಾನಾದ ಬಿಬಿಎಂಪಿ. ಎರಡು ವಾರದಿಂದ ಕಟ್ಟಡ,ಅಪಾರ್ಟ್ಮೆಂಟ್ ಗಳನ್ನ ಟಚ್ ಮಾಡದೆ ಕೇವಲ ತಡೆಗೋಡೆ ಒಡೆದು ಶೋ ಆಫ್ ಮಾಡಿದ್ದು, ಅಲ್ಲಲ್ಲಿ ರಸ್ತೆ ಅಗೆದು,ಗೋಡೆ ಕೆಡವಿ ಕೈತೊಳೆದುಕೊಂಡ ಪಾಲಿಕೆ ಬುಲ್ಡೋಜರ್, ಪ್ರಭಾವಿಗಳ ಒತ್ತಡಕ್ಕೆ ಮಣಿದು ಆಪರೇಷನ್ ಬುಲ್ಡೋಜರ್ ಕಂಪ್ಲೀಟ್ ನಿಲ್ಲಿಸಿದ ಪಾಲಿಕೆ. ಒತ್ತುವರಿ ಮಾಡಿಕೊಂಡಿರುವ ಪ್ರತಿಷ್ಠಿತ ಕಂಪನಿಗಳನ್ನ ಟಚ್ ಮಾಡದೆ ಒತ್ತುವರಿ ತೆರವು ಸ್ಥಗಿತಗೊಂಡಿದ್ದು, ದೊಡ್ಡವರ ಹೆಸರು ಕೇಳಿಬಂದ ತಕ್ಷಣವೇ ಬಿಬಿಎಂಪಿ ಬುಲ್ಡೋಜರ್ಗಳು ಫುಲ್ ಸೈಲೆಂಟ್ ಆಗಿದೆ.