Wednesday, January 22, 2025

ಶಿವಮೊಗ್ಗದಲ್ಲಿ PFI ಕಾರ್ಯಕರ್ತರ ಬಂಧನ

ಶಿವಮೊಗ್ಗ :  ಹಾಗೂ ಭದ್ರಾವತಿಯಲ್ಲಿ SDPI ಮತ್ತು PFI ಕಾರ್ಯಕರ್ತರನ್ನು ಇಂದು ಬೆಳಗಿನ ಜಾವ ಪೊಲೀಸರು ವಶಕ್ಕೆ ಪಡೆದಿದ್ದಾರೆ.

PFI ಮುಖಂಡರು ಹಾಗೂ ಕಾರ್ಯಕರ್ತರ ಮನೆ ಮೇಲೆ ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಶಿವಮೊಗ್ಗದ ಪೊಲೀಸರು ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆದಿದ್ದಾರೆ. 5 ಜನ PFI ಹಾಗೂ SDPI ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಭದ್ರಾವತಿ ಪಟ್ಟಣದಲ್ಲಿ ತಾಹೀರ್, ಸಾದಿಕ್ ಹಾಗೂ ಖುರೇಶಿ ಸೇರಿದಂತೆ ಮೂವರನ್ನು ಭದ್ರಾವತಿ ಓಲ್ಡ್ ಟೌನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು, ಸೊಳೆಬೈಲಿನ ಸೈಯದ್ ಹಾಗೂ ರಹೀಂ ಎಂಬ ಕಾರ್ಯಕರ್ತರನ್ನು ಶಿವಮೊಗ್ಗ ತುಂಗಾನಗರ ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ಕೈಗೊಂಡಿದ್ದಾರೆ.

RELATED ARTICLES

Related Articles

TRENDING ARTICLES