Monday, December 23, 2024

ಬಿಜೆಪಿ ರಾಜ್ಯಾಧ್ಯಕ್ಷ​ರ ಎದುರಿಗೆ ಕಾರ್ಯಕರ್ತರ ಜಟಾಪಟಿ.!

ವಿಜಯಪುರ; ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್​ ಕಟೀಲ ಎದುರಿಗೆ ಕಾರ್ಯಕರ್ತರ ಜಟಾಪಟಿ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ನಡೆದಿದೆ.

ಮಂಡಲ ಕಾರ್ಯಕಾರಣಿ ಸಭೆಯಲ್ಲಿ ಒಂದೇ ಪಕ್ಷದ ಇಬ್ಬರು ನಾಯಕರ ನಡುವೆ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಹಾಗೂ ಅಪ್ಪುಗೌಡ ಪಾಟೀಲ್​ ಮಧ್ಯ ಟಿಕೆಟ್ ಗಾಗಿ ಲಾಬಿ ನಡೆದಿದೆ. ಈ ಹಿನ್ನಲೆಯಲ್ಲಿ ತಮ್ಮ ನಾಯಕರಿಗೆ ಟಿಕೆಟ್ ನೀಡುವಂತೆ ಕಾರ್ಯಕರ್ತರ ಪಟ್ಟು ಹಿಡಿದು ಇಬ್ಬರು ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದೆ.

ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಅವರು ವೇದಿಕೆ ಮೇಲೆ ಟಿಕೆಟ್ ವಿಷಯ ಪ್ರಸ್ತಾಪಿಸಿದರು. ಈ ವೇಳೆ ಕೆಲ ಹೊತ್ತು ಗೊಂದಲದ ವಾತಾವರಣ ಉಂಟಾಗಿ ಅಪ್ಪುಗೌಡ ಪಾಟೀಲ್​ ಅವರು ವೇದಿಕೆಯಿಂದ ಕೆಳಗಿಳಿದರು. ನಂತರ ಇಬ್ಬರು ನಾಯಕರ ಕಾರ್ಯಕರ್ತರ ಮಧ್ಯ ವಾಗ್ವಾದವಾಯಿತು. ಪೊಲೀಸ ಸಿಬ್ಬಂದಿಗಳು ವಾತಾವರಣ ತಿಳಿಗೊಳಿಸಿದರು.

RELATED ARTICLES

Related Articles

TRENDING ARTICLES