Friday, November 22, 2024

ರಾಜ್ಯದಲ್ಲಿ ಯಾರನ್ನಾದ್ರೂ ಕೇಳಿ, 40 ಪರ್ಸೆಂಟ್ ಸರ್ಕಾರ ಎನ್ನುತ್ತಾರೆ; ಡಿ.ಕೆ ಸುರೇಶ್​​

ಹಾಸನ: ಈ ದೇಶದ ಐಕ್ಯತೆಯ ದೃಷ್ಟಿಯಿಂದ ರಾಹುಲ್ ಗಾಂಧಿಯವರು ಪಾದಯಾತ್ರೆ ಮಾಡುತ್ತಿದ್ದಾರೆ. ದೇಶಾದ್ಯಂತ ಎಲ್ಲರೂ ಒಗ್ಗಟ್ಟಾಗಿರಬೇಕು ಎಂಬ ಆಶಯ ಇದೆ. ಸ್ವಾತಂತ್ರ್ಯ ಬಂದ ನಂತರ ಸಂವಿಧಾನದ ರಕ್ಷಣೆ ಆಗಬೇಕಾಗಿದೆ ಎಂದು ಸಂಸದ ಡಿ.ಕೆ‌ ಸುರೇಶ್ ಅವರು ಅಭಿಪ್ರಾಯಪಟ್ಟರು.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿರುವ ನಾವೆಲ್ಲರೂ ಬಸವಣ್ಣನವರ ತತ್ವ, ಕುವೆಂಪುರವರ ಶಾಂತಿಯ ತೋಟಕ್ಕಾಗಿ ನಡಿಗೆಯನ್ನು ರಾಹುಲ್ ಗಾಂಧಿ ಅವರು ಕೈಗೊಂಡಿದ್ದಾರೆ. ದೇಶದಲ್ಲಿ ಯಾವುದೇ ಜಾತಿ, ದ್ವೇಷವಿಲ್ಲದೇ, ಐಕ್ಯತೆ ಹಾಗೂ ಸಮಗ್ರತೆಯನ್ನು ಉಳಿಸಿಕೊಳ್ಳಲು ಒಗ್ಗಟ್ಟಾಗಿ ಗಾಂಧೀಜಿಯವರ ಕನಸು ಈಡೇರಿಸುವ ಉದ್ದೇಶ ಈ ಐಕ್ಯತಾ ಪಾದಯಾತ್ರೆಯದ್ದಾಗಿದೆ. ರಾಹುಲ್ ಗಾಂಧಿ ಮಾಡುತ್ತಿರುವ ಯಾತ್ರೆ ಪ್ರಧಾನಿಯಾಗಲೆಂದು ಅಲ್ಲ ಎಂದು ಸ್ಪಷ್ಟನೆ ನೀಡಿದರು.

ದೇಶದಲ್ಲಿ ಅತ್ಯಂತ ಕ್ರೀಯಾಶೀಲರಾಗಿರುವವರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಅವರ ಭವಿಷ್ಯ ರೂಪಿಸಬೇಕೆಂಬುದು ಇದರ ಆಶಯವಾಗಿದೆ. ದೇಶದ ಜನರು ಬದಲಾವಣೆಯನ್ನ ಬಯಸಿ ಜನರು ಬಿಜೆಪಿಗೆ ಅಧಿಕಾರ ನೀಡಿದರು. ಕೊಟ್ಟ ಭರವಸೆಗಳೆಲ್ಲವನ್ನೂ ಬಿಜೆಪಿ ಈಡೇರಿಸಲು ಸಾಧ್ಯವಾಗಲಿಲ್ಲ. ಅದನ್ನ ಬಿಟ್ಟು ಎಲ್ಲ ವಿರೋಧ ಪಕ್ಷಗಳ ಶಕ್ತಿಯನ್ನು ಅಡಗಿಸಲು ಮುಂದಾಗಿದೆ. ಸಾಂವಿಧಾನಿಕ ಶಕ್ತಿಯನ್ನು ಬಳಸಿಕೊಂಡು ತಮ್ಮ ವಿರುದ್ಧದ ಪಕ್ಷಗಳ ಮೇಲೆ ದಾಳಿ ಮಾಡಿಸುತ್ತಿದೆ.

ದೇಶದಲ್ಲಿ ಅಶಾಂತಿಯನ್ನು ಮೂಡಿಸುವ ಪ್ರಯತ್ನ ನಡೆಯುತ್ತಿದೆ. ಪ್ರಧಾನಮಂಮತ್ರಿಗಳು ಬಂದು ಸಿದ್ದರಾಮಯ್ಯ ನವರನ್ನ 10 ಪರ್ಸೆಂಟ್ ಸರ್ಕಾರ ಎದಿದ್ದರು. ಈಗ ಬೆಂಗಳೂರಿಗೆ ಬಂದು ಯಾರನ್ನೂದರೂ ಕೇಳಿದರೂ 40 ಪರ್ಸೆಂಟ್ ಸರ್ಕಾರ ಅನ್ನೋ ಕೀರ್ತಿ ಹೊಂದಿದೆ.

RELATED ARTICLES

Related Articles

TRENDING ARTICLES