ಬೆಂಗಳೂರು : ಮಳೆ ಅವಾಂತರ ಆಯ್ತು ಇದೀಗ ಬೆಂಗಳೂರಿಗರಿಗೆ ಫ್ಲೈ ಓವರ್ಗಳ ಟೆನ್ಷನ್ ಶುರುವಾಗಿದ್ದು, ಬೆಂಗಳೂರಿನ ಫ್ಲೈಓವರ್ ಗಳ ಕ್ವಾಲಿಟಿ ಪರಿಶೀಲನೆಗೆ ಬಿಬಿಎಂಪಿ ಮುಂದಾಗಿದೆ.
ರಾಜಧಾನಿ ಬೆಂಗಳೂರಿನ ಫ್ಲೈಓವರ್ಗಳು ಸೇಫ್ ಇಲ್ವಾ..? ಫ್ಲೈಓವರ್ಗಳ ಸೇಫ್ಟಿ ಬಗ್ಗೆ ಬಿಬಿಎಂಪಿಗೆ ಟೆನ್ಷನ್, ಪೀಣ್ಯ, ಸುಮ್ಮನಹಳ್ಳಿ ಫ್ಲೈಓವರ್ ಡ್ಯಾಮೇಜ್ ಆದ ಬೆನ್ನಲ್ಲೇ ಬಿಬಿಎಂಪಿಗೆ ಆತಂಕ ಹೆಚ್ಚಿದೆ. ಬಿಬಿಎಂಪಿ,ಬಿಡಿಎ ಸೇರಿ ಇನ್ನಿತರ ಇಲಾಖೆಗಳಿಂದ ನಗರದಲ್ಲಿ ಮೇಲ್ಸೇತುವೆಗಳ ನಿರ್ಮಾಣವಾಗಿದ್ದು, ನಗರದ ಬಹುತೇಕ ಫ್ಲೈಓವರ್ ಗಳಯ 20 ,ವರ್ಷಕ್ಕೂ ಹೆಚ್ಚು ಹಳೆಯದಾಗಿವೆ. ಆಧುನಿಕ ತಂತ್ರಜ್ಞಾನ ಬಳಿಸಿ 47 ಫ್ಲೈಓವರ್ ಗಳ ಪರಿಶೀಲನೆಗೆ ಫ್ಲಾನ್ ಮಾಡಲಾಗಿದೆ.
ಇನ್ನು, ಫ್ಲೈಓವರ್ ಗಳ ಪಿಲ್ಲರ್ ಹಾಗೂ ಇನ್ನಿತರ ಭಾಗಗಳ ಪರಿಶೀಲನೆ ಮಾಡಲಿರೋ ಖಾಸಗಿ ಕಂಪನಿಸದ್ಯ 27 ಫ್ಲೈಓವರ್ಗಳ ಟೆಸ್ಟಿಂಗ್ ನಡೆಸಿ ಬಿಬಿಎಂಪಿ ಗೆ ವರದಿ ನೀಡಿರೋ ಖಾಸಗಿ ಕಂಪನಿ ಸಿರಸಿ ಸರ್ಕಲ್ ಫ್ಲೈಓವರ್ ಸುಮ್ಮನಹಳ್ಳಿ, ಗೊರಗುಂಟೆಪಾಳ್ಯ ಎಂ.ಇ ಎಸ್ ಫ್ಲೈಓವರ್ ಗಳು ಡೇಂಜರ್ ಫ್ಲೈ ಓವರ್ ಎಂದು ವರದಿ ಮಾಡಿದೆ. ನಿರ್ವಹಣೆ ಇಲ್ಲದೆ ಅನಾಹುತಕ್ಕೆ ಅಹ್ವಾನ ನೀಡುತ್ತಿರುವ ಫ್ಲೈಓವರ್ಗಳು ಯಾವಾಗ ಏನು ಆಗುತ್ತೋ ಅನ್ನೋ ಆತಂಕದಲ್ಲಿದ್ದ ಬಿಬಿಎಂಪಿ ಹೀಗಾಗಿ ನಗರದ ಫ್ಲೈಓವರ್ ಗಳು ಟೆಸ್ಟಿಂಗ್ಗೆ ಪಾಲಿಕೆ ಮುಂದಾಗಿದೆ.