Saturday, April 20, 2024

ನಷ್ಟದಲ್ಲೇ ಮುಂದುವರಿಯುತ್ತಿರುವ BMTC

ಬೆಂಗಳೂರು : ಕೋವಿಡ್‌ ಬಳಿಕ ಬಹುತೇಕ ವಾಣಿಜ್ಯ ವಹಿವಾಟು ಯಥಾಸ್ಥಿತಿಗೆ ಬಂದರೂ ಬಿಎಂಟಿಸಿಗೆ ನಿರೀಕ್ಷಿತ ಆದಾಯದ ಗುರಿ ಮುಟ್ಟಲು ಸಾಧ್ಯವಾಗುತ್ತಿಲ್ಲ. ಪೂರ್ಣ ಪ್ರಮಾಣದ ಪ್ರಯಾಣಿಕರು ಬಾರದೆ ನಷ್ಟದಲ್ಲೇ ಮುಂದುವರಿಯುವಂತಾಗಿದೆ.

ಕೋವಿಡ್‌ ಪೂರ್ವದಲ್ಲಿ ನಗರದಲ್ಲಿ 6,150 ಬಸ್‌ಗಳು ಸಂಚರಿಸುತ್ತಿದ್ದವು. ನಿತ್ಯ 33.10 ಲಕ್ಷ ಮಂದಿ ಪ್ರಯಾಣಿಕರು ಸಂಚರಿಸುತ್ತಿದ್ದರು. ಪ್ರತಿದಿನ 4.94 ಕೋಟಿ ಆದಾಯ ಬರುತ್ತಿತ್ತು. ಕೋವಿಡ್‌ ನಂತರ ಈ ಆದಾಯ 1.14 ಕೋಟಿ ರೂ. ನಷ್ಟು ಕಡಿಮೆಯಾಗಿದೆ. ಈ ಆದಾಯ ಖೋತಾದ ಬಹುತೇಕ ಪಾಲು ವೋಲ್ವೋ ಬಸ್‌ಗಳದ್ದಾಗಿದೆ ಎಂದು ಬಿಎಂಟಿಸಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಕೋವಿಡ್‌ ಭೀತಿಯಿಂದ ಸ್ವಂತ ವಾಹನಗಳನ್ನು ಅವಲಂಬಿಸಿದ ಬಹುತೇಕರು ಬಿಎಂಟಿಸಿ ಬಸ್‌ಗಳತ್ತ ಮರಳಿಲ್ಲ. ಕೆಲವರು ಮೆಟ್ರೋ ರೈಲು ಪ್ರಯಾಣದತ್ತ ಆಕರ್ಷಿತರಾಗಿರುವುದರಿಂದ ಬಿಎಂಟಿಸಿಗೆ ಹೊಡೆತ ನೀಡಿದೆ. ಪ್ರಸ್ತುತ ನಗರದಲ್ಲಿ 5,650 ಬಿಎಂಟಿಸಿ ಬಸ್‌ಗಳು ಸಂಚರಿಸುತ್ತಿವೆ. 26.14 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. 3.80 ಕೋಟಿ ರೂ. ಆದಾಯ ಬರುತ್ತಿದೆ.

RELATED ARTICLES

Related Articles

TRENDING ARTICLES