Thursday, January 16, 2025

ನಿರೂಪಕಿಗೆ ಅವಾಚ್ಯ ಶಬ್ದದಿಂದ ನಿಂದನೆ ಕೇಸ್​’ನಡಿ ನಟ ಅರೆಸ್ಟ್​​.!

ಕೇರಳ: ಕೊಚ್ಚಿಯಲ್ಲಿ ಇತ್ತೀಚೆಗೆ ಬಿಡುಗಡೆಯಾದ ‘ಚಟ್ಟಂಬಿ’ ಚಿತ್ರದ ಪ್ರಚಾರ ಕಾರ್ಯಕ್ರಮದ ವೇಳೆ ಮಹಿಳಾ ನಿರೂಪಕಿಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಅಡಿ ಮಲಯಾಳಂ ನಟ, ಗಾಯಕ ಶ್ರೀನಾಥ್ ಭಾಸಿ ಅವರನ್ನು ಎರ್ನಾಕುಲಂನ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

2011 ರಲ್ಲಿ ಶ್ರೀನಾಥ್ ಭಾಸಿ ನಟನೆಗೆ ಬಣ್ಣ ಹಚ್ಚಿದ್ದರು. 34 ವರ್ಷದ ಭಾಸಿ ಅವರನ್ನು ಇಂದು ಪೊಲೀಸರು ವಿಚಾರಣೆಗೆ ಕರೆದ ನಂತರ ಇಲ್ಲಿ ನಟನನ್ನ ಪೊಲೀಸ್​ ವಶಕ್ಕೆ ತೆಗೆದುಕೊಳ್ಳಲಾಗಿದೆ. ಯೂಟ್ಯೂಬ್​ ಮಹಿಳಾ ನಿರೂಪಕಿಗೆ ನಿಂದಿಸಿದ ಆಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಮಹಿಳೆ ಕೆಲವು ಪ್ರಶ್ನೆಗಳನ್ನು ಕೇಳಿದ ನಂತರ ಅವನು ನಟ ನಿಂದಿಸಿದ್ದಾನೆ ಎಂದು ಹೇಳಲಾಗಿದೆ.

ಆ್ಯಂಕರ್ ತನ್ನ ದೂರಿನಲ್ಲಿ ಹೇಳಿರುವ ಪ್ರಕಾರ, ಭಾಸಿ ಅವರು ಚಲನಚಿತ್ರದಲ್ಲಿ ನಟ ರೌಡಿ ರೀತಿ ವರ್ತಿಸುವಂತೆ ನನ್ನ ಹತ್ತಿರ ವರ್ತಿಸಿದ್ದಾರೆ. ಆದರೆ ನನ್ನ ಮೇಲೆ ರೇಗಾಡಿದ್ದಾರೆ. ನಂತರ ನಟನ ಸಂದರ್ಶನವನ್ನು ನಿಲ್ಲಿಸಲಾಯಿತು. ಕ್ಯಾಮರಾ ಆಫ್ ಮಾಡಿದ ನಂತರ, ನಟ ತನ್ನ ಮತ್ತು ಸಿಬ್ಬಂದಿಯನ್ನು ಅವಾಚ್ಯವಾಗಿ ನಿಂದಿಸಿದ್ದು ಫೋನ್‌ನಲ್ಲಿ ರೆಕಾರ್ಡ್ ಆಗಿದೆ ಎಂದು ಆಂಕರ್ ಹೇಳಿದರು.

ಈ ಬಗ್ಗೆ ಪೊಲೀಸ್ ಗೆ ಆ್ಯಂಕರ್​ ದೂರು ನೀಡಿದ ಬಳಿಕ ಭಾಸಿ ಅವರು ನನ್ನ ವಿರುದ್ಧ ಹನಿ ‘ಟ್ರ್ಯಾಪ್’ ಮಾಡಲಾಗಿದೆ ಎಂದು ವಿವರಣೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES