Monday, December 23, 2024

1000 ಕೋಟಿ ಲೆಕ್ಕಾಚಾರದಲ್ಲಿ ಕಬ್ಜ.. ವಿದೇಶಗಳಲ್ಲಿ ಭಾರಿ ಡಿಮ್ಯಾಂಡ್

ಬೆಂಗಳೂರು: ಸ್ಯಾಂಡಲ್​ವುಡ್ ಅಂದ್ರೆ ಇಷ್ಟು ದಿನ ಒಂದು ಲೆಕ್ಕ. ಇನ್ಮೇಲೆ ಒಂದು ಲೆಕ್ಕ. ಕೆಜಿಎಫ್ ನಂತ್ರ ನಮ್ಮ ಸ್ಯಾಂಡಲ್​ವುಡ್​ ಇಂಡಸ್ಟ್ರಿಯ ದಿಕ್ಕು ದೆಸೆ ಬದಲಾಗಿ ಹೋಗಿದೆ. ಅದ್ರಲ್ಲೂ ಕಬ್ಜ ಸಿನಿಮಾದ ಟೀಸರ್ ನ್ಯಾಷನಲ್ ಇಂಟರ್​ನ್ಯಾಷನಲ್ ಲೆವೆಲ್​ನಲ್ಲಿ ಹಂಗಾಮ ಮಾಡ್ತಿದೆ. ದುಬೈನ ಸಹ ಕಬ್ಜ ಮಾಡಿಬಿಟ್ಟಿದ್ದಾರೆ ರಿಯಲ್ ಸ್ಟಾರ್ ಉಪ್ಪಿ. ಸಾವಿರ ಕೋಟಿ ಲೆಕ್ಕಾಚಾರದಲ್ಲಿರೋ ಕಬ್ಜ ಕುರಿತ ಇನ್​ಸೈಡ್ ಸುದ್ದಿ ನಿಮ್ಮ ಮುಂದೆ ಇಡಲಾಗಿದೆ.

ಸೂಪರ್ ಸ್ಟಾರ್ ಉಪೇಂದ್ರ, ಆಲ್ ಇಂಡಿಯಾ ಕಟೌಟ್ ಕಿಚ್ಚ ಸುದೀಪ್ ಹಾಗೂ ಬಹುಭಾಷಾ ನಟೀಮಣಿ ಶ್ರಿಯಾ ಸರಣ್ ಮೆಗಾ ಮಲ್ಟಿಸ್ಟಾರ್ ಸಿನಿಮಾ ಕಬ್ಜ. ರೀಸೆಂಟ್ ಆಗಿ ರಿಲೀಸ್ ಆದ ಇದ್ರ ಟೀಸರ್ ಎರಡು ಕೋಟಿ ವೀವ್ಸ್ ದಾಖಲೆ ಮಾಡಿ, ಮೂರು ಕೋಟಿಯತ್ತ ನಾಗಾಲೋಟ ಮುಂದುವರೆಸಿದೆ.

ಸಾಕಷ್ಟು ಮಂದಿ ಈ ಟೀಸರ್ ಹಾಗೂ ಅದ್ರ ಹಿಂದಿನ ಮೇಕಿಂಗ್ ಗಮ್ಮತ್ತಿಗೆ ವ್ಹಾವ್ ಅಂತಿದ್ರೆ, ಒಂದಷ್ಟು ಮಂದಿ ಕೆಜಿಎಫ್​ಗೆ ಹೋಲಿಕೆ ಮಾಡ್ತಿದ್ದಾರೆ. ಆರ್ ಚಂದ್ರು ನಿರ್ದೇಶನದ ಈ ಸಿನಿಮಾ, ಕನ್ನಡದ ಮಾಸ್ಟರ್​ಪೀಸ್​ಗೆ ಹೋಲಿಕೆ ಮಾಡ್ತಿದ್ದಾರೆ ಅಂದ್ರೆ ಅದ್ರ ಮೇಕಿಂಗ್ ಕ್ವಾಲಿಟಿ ಆ ರೇಂಜ್​ಗಿದೆ. ಒಂದೊಂದು ಫ್ರೇಮ್ ಕೂಡ ಮೈಂಡ್ ಬ್ಲೋಯಿಂಗ್ ಅನಿಸ್ತಿದೆ.

ಪಾತ್ರಗಳು, ಕಥೆಯ ಜೊತೆಗೆ ರೆಟ್ರೋ ಬ್ಯಾಕ್​ಡ್ರಾಪ್, ಮೇಕಿಂಗ್ ಶೈಲಿ, ಬ್ಯಾಗ್ರೌಂಡ್ ಮ್ಯೂಸಿಕ್ ಹೀಗೆ ಎಲ್ಲವೂ ಮತ್ತೊಂದು ಕೆಜಿಎಫ್ ಅನ್ನೋ ಫೀಲ್ ಕೊಟ್ಟಿವೆ. ಹಾಗಾಗಿ ವಿದೇಶಗಳಲ್ಲೂ ಕಬ್ಜಗೆ ಡಿಮ್ಯಾಂಡ್ ಹೆಚ್ಚಿದೆ. ಎಲ್ಲೆಲ್ಲಾ ಕೆಜಿಎಫ್ ಸಿನಿಮಾ ರಿಲೀಸ್ ಆಗಿತ್ತೋ, ಅಲ್ಲೆಲ್ಲಾ ಕಬ್ಜ ಡಿಸ್ಟ್ರಿಬ್ಯೂಷನ್ ರೈಟ್ಸ್​ಗೆ ಮುಗಿ ಬೀಳ್ತಿದ್ದಾರೆ. ಅಲ್ಲಿಗೆ ಅಷ್ಟೂ ದೇಶಗಳಲ್ಲಿ ಕಬ್ಜ ರಿಲೀಸ್ ಆಗೋದು ಪಕ್ಕಾ ಆಗಿದೆ.

ಇದಕ್ಕೆ ಪೂರಕವಾಗಿ ನಿರ್ದೇಶಕ ಕಮ್ ನಿರ್ಮಾಪಕ ಆರ್. ಚಂದ್ರು ಕೂಡ ಮೊದಲು ಐದು ಭಾಷೆಯಲ್ಲಿ ಸಿನಿಮಾ ಮಾಡೋಣ ಅಂದುಕೊಂಡವ್ರು ನಂತ್ರ ಏಳು ಭಾಷೆಯಲ್ಲಿ ಮಾಡೋಕೆ ಮುಂದಾದ್ರು. ಇದೀಗ ಬರೋಬ್ಬರಿ 9 ಭಾಷೆಯಲ್ಲಿ ಸಿನಿಮಾ ರಿಲೀಸ್ ಮಾಡೋದಾಗಿ, ಅದಕ್ಕೆ ತಕ್ಕ ಯೋಜನೆಗಳನ್ನ ರೂಪಿಸಿಕೊಳ್ತಿದ್ದಾರೆ.

ಬಾಲಿವುಡ್, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗಗಳ ಪ್ರತಿಷ್ಠಿತ ಬ್ಯಾನರ್​ಗಳು ಸಿನಿಮಾ ವಿತರಣೆಗೆ ಮುಂದಾಗಿದ್ದು, ಈಗಾಗ್ಲೇ ಆರ್ ಚಂದ್ರು ಜೊತೆ ಒಂದು ಸುತ್ತಿನ ಮಾತುಕತೆ ಕೂಡ ಮುಗಿಸಿದ್ದಾರೆ. ಕೆಜಿಎಫ್ ಸಿನಿಮಾ ಸಾವಿರಾರು ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡೋ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿತ್ತು. ಇದೀಗ ಅದರಂತೆ ಕಬ್ಜ ಕೂಡ ಬಾಕ್ಸ್ ಆಫೀಸ್ ಕಬ್ಜ ಮಾಡಲಿದೆ, ಹೈಪ್ ಪ್ರಕಾರ ಸಾವಿರ ಕೋಟಿ ಗಳಿಸೋದು ಕಷ್ಟವೇನಲ್ಲ ಅಂತ ಸಿನಿಪಂಡಿತರು ಲೆಕ್ಕಾಚಾರ ಹಾಕ್ತಿದ್ದಾರೆ.

ರೀಸೆಂಟ್ ಆಗಿ ದುಬೈಗೆ ತೆರಳಿದ್ದ ಕಬ್ಜ ಕಥಾನಾಯಕ ಉಪೇಂದ್ರ ಹಾಗೂ ಕ್ಯಾಪ್ಟನ್ ಆರ್ ಚಂದ್ರು, ಅಲ್ಲಿ ಕೂಡ ಭರ್ಜರಿ ಪ್ರೊಮೋಷನ್ಸ್ ಮಾಡಿ ಬಂದಿದ್ದಾರೆ. ರಾಜ್ ಕಪ್ ಫೈನಲ್ಸ್ ಹಿನ್ನೆಲೆ ಶಾರ್ಜಾ ಸ್ಟೇಡಿಯಂನಲ್ಲಿ ಮಿಂಚಿದ ಡಾನ್ ಉಪ್ಪಿ, ಈಗಾಗಲೇ ಅಲ್ಲಿನ ಮನಸ್ಸುಗಳನ್ನ ಕಬ್ಜ ಮಾಡಿ, ಸಿನಿಮಾ ಮೇಲಿನ ಕ್ರೇಜ್ ಹೆಚ್ಚಿಸಿದ್ದಾರೆ. ಅದೇನೇ ಇರಲಿ, ಕನ್ನಡದಿಂದ ಇಂತಹ ಮಹೋನ್ನತ ಪ್ರಯತ್ನ ಆಗಿರೋದು ಹೆಮ್ಮೆಯ ವಿಷಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES