Thursday, January 23, 2025

ಶ್ರೀಧರನ್ನ ಮುಸ್ಲಿಂ ಆಗಿ ಮತಾಂತರ; ಮುತಾಲಿಕ್​ ಆಕ್ರೋಶ

ಧಾರವಾಡ; ಮಂಡ್ಯ ಮೂಲದ ಶ್ರೀಧರ್​ ಎಂಬ ಯುವಕನ ಮುಸ್ಲಿಂ ಸಮುದಾಯಕ್ಕೆ ಮತಾಂತರ ಪ್ರಕರಣ ಕುರಿತು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್​ ಮುತಾಲಿಕ್​ ಮಾತನಾಡಿ ಕಿಡಿಕಾರಿದ್ದಾರೆ.

ಶ್ರೀಧರ್​ ತನ್ನ ಪ್ರಿಯತೆಮೆಯನ್ನ ಕಾಣಲು ಹುಬ್ಬಳ್ಳಿಗೆ ಬಂದಿದ್ದ ಎಂದು ಹೇಳಲಾಗುತ್ತಿದೆ. ಆಗ ಅವನಿಗೆ ಬಲವಂತದ ಖತ್ನಾ ಮಾಡಲಾಗಿದೆ. ಪಿಸ್ತೂಲು ನೀಡಿ ಫೋಟೋ ತೆಗೆದಿದ್ದಾರೆ. 35 ಸಾವಿರ ಹಣವನ್ನು ಖಾತೆಗೆ ಹಾಕಿದ್ದಾರೆ. ಆತನೇ ಈಗ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.

ರಾಜ್ಯ ಸರ್ಕಾರ ಇತ್ತೀಚಿಗೆ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಿದ್ದು, ಶ್ರೀಧರ್ ಬಲವಂತದ ಮತಾಂತರವನ್ನ ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡು ಮತಾಂತರ ಕಾಯ್ದೆ ಅಡಿ ಕೇಸ್​ ದಾಖಲಿಸಿ ತನಿಖೆ ನಡೆಸಬೇಕೆಂದು ಮುತಾಲಿಕ್​ ಆಗ್ರಹಿಸಿದರು.

ಈ ಪ್ರಕರಣದಲ್ಲಿ 11 ಜನರಷ್ಟೇ ಇದರ ಹಿಂದೆ ಇಲ್ಲ. ಮಸೀದಿ, ಮದರಸಾ ಕೆಲಸ ಮಾಡುತ್ತಿವೆ. ಸರಿಯಾಗಿ ತನಿಖೆ ಮಾಡಬೇಕು. ಅಂದಾಗ ಮಾತ್ರ ಇಂಥ ಪ್ರಕರಣಗಳು ಹೊರಗೆ ಬರುತ್ತವೆ. ಈ ಬಗ್ಗೆ ನಾನು ಗೃಹ ಸಚಿವರಿಗೆ ಪತ್ರ ಬರೆದು ಮಾಹಿತಿ ತಿಳಿಸುತ್ತೇನೆ. ಯಾವ ಯಾವ ಮಸೀದಿಗಳಲ್ಲಿ ಮತಾಂತರ ನಡೆಯುತ್ತಿವೆ ಅನ್ನೋ ಮಾಹಿತಿ ಕೊಡುತ್ತೇನೆ ಎಂದು ಮುತಾಲಿಕ್​ ಹೇಳಿದರು.

RELATED ARTICLES

Related Articles

TRENDING ARTICLES