Thursday, October 31, 2024

ವಿದ್ಯುತ್ ಸ್ಪರ್ಶಕ್ಕೆ 2 ಕಾಡಾನೆ ಸಾವು

ಶಿವಮೊಗ್ಗ : ಶೆಟ್ಟಿಹಳ್ಳಿ ಕಾಡಿನ ಆನೆಸರ ವನ್ಯಜೀವಿ ವಲಯದ ಕಾಡಂಚಿನ ತೋಟದ ಐಬಿಕ್ಸ್ ವಿದ್ಯುತ್ ಸ್ಪರ್ಷಕ್ಕೆ ಸಿಲುಕಿ ಎರಡು ಗಂಡು ಕಾಡಾನೆಗಳು ಧಾರುಣ ಸಾವು ಕಂಡಿದೆ. ಚಂದ್ರನಾಯಕ್ ಎಂಬುವರ ತೋಟದಲ್ಲಿ ಅಳವಡಿಸಿದ್ದ ಹೈಬೆಕ್ಸ್ ಲೈನ್ ಸ್ಪರ್ಷಿಸಿ ಎರಡು ಗಂಡು ಕಾಡಾನೆಗಳು ಸಾವು ಕಂಡಿದೆ.

ಜಮೀನು ಮಾಲೀಕ ಚಂದ್ರನಾಯಕ್ ನನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಭದ್ರಾ ವನ್ಯಜೀವಿ ವಲಯದಿಂದ ಏಳು ಕಾಡಾನೆಗಳು ವಲಸೆ ಬಂದು ಶೆಟ್ಟಿಹಳ್ಳಿ ಕಾಡಿನಲ್ಲಿ ಬೀಡುಬಿಟ್ಟಿದ್ದವು.

ಕಾಡಾನೆಗಳು ಕಾಡಂಚಿನ ಗ್ರಾಮಗಳಲ್ಲಿ ರೈತರ ಜಮೀನುಗಳಿಗೆ ಘೀಳಿಡುತ್ತಿದ್ದವು. ಕೆಲ ರೈತರು ಹೊಲಗಳ ರಕ್ಷಣೆಗೆ ಐಬಿಎಕ್ಸ್ ಅಳವಡಿಸಿಕೊಂಡಿದ್ದರೆ, ಮತ್ತೆ ಕೆಲವರು ನೇರವಾಗಿ ವಿದ್ಯುತ್ ಕಂಬದಿಂದಲೇ ಕರೆಂಟ್ ಹಾಯಿಸುತ್ತಿದ್ದಾರೆಂಬ ಆರೋಪಗಳು ಕೇಳಿ ಬಂದಿದ್ದವು. ಅದರ ಮುಂದುವರೆದ ಭಾಗವಾಗಿಯೇ ಚನ್ನಹಳ್ಳಿಯ ಜೋಳದ ಬದುವಿನಲ್ಲಿ ಎರಡು ಕಾಡಾನೆಗಳು ವಿದ್ಯುತ್ ಸ್ಪರ್ಷಿಸಿ ಸಾವನ್ನಪ್ಪಿದೆ. ಆಯನೂರು ವಲಯ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

RELATED ARTICLES

Related Articles

TRENDING ARTICLES