Monday, December 23, 2024

ಗಾಂಜಾ ಮತ್ತಲ್ಲಿ CPI ಮೇಲೆ ಅಟ್ಯಾಕ್​; ಹೆಚ್ಚಿನ ಚಿಕಿತ್ಸೆಗಾಗಿ ಏರ್​ ಲಿಫ್ಟ್​ ಮಾಡುವ ಸಾಧ್ಯತೆ

ಕಲಬುರಗಿ; ನಿನ್ನೆ ಮಹಾರಾಷ್ಟ್ರದಲ್ಲಿ ಗಾಂಜಾ ದಂಧೆಕೋರರಿಂದ ಹಲ್ಲೆಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿಪಿಐ ಶ್ರೀಮಂತ್ ಇಲ್ಲಾಳ್ ಅವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಹೈದ್ರಾಬಾದ್​ಗೆ ಏರ್​ ಲಿಫ್ಟ್​ ಮಾಡುವುದಕ್ಕೆ ವೈದ್ಯರು ಚಿಂತಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಕಮಲಾಪುರ ಠಾಣೆ ಇನ್ಸ್ಪೆಕ್ಟರ್ ಶ್ರೀಮಂತ್ ಇಲ್ಲಾಳ ಅವರನ್ನ ನಿನ್ನೆ ಮಹಾರಾಷ್ಟ್ರದ ಉಮ್ಮರ್ಗಾ ಬಳಿ ತರೂರಿ ಬಳಿ ಗಂಜಾ ದಂಧೆಕೋರರ 30 ರಿಂದ 40 ಜನರ ತಂಡ ಅಟ್ಯಾಕ್ ಮಾಡಿ ಮನಸೋ ಇಚ್ಚೆ ಹಲ್ಲೆಮಾಡಲಾಗಿತ್ತು.

ಇನ್ಸ್ಪೆಕ್ಟರ್ ಶ್ರೀಮಂತ್ ಇಲ್ಲಾಳ ಅವರ ಹೊಟ್ಟೆ, ತಲೆ ಸೇರಿ ದೇಹದ ಹಲವಡೆ ಗಂಭೀರವಾಗಿ ಗಾಯಗಳಾಗಿದ್ದು, ಅವರನ್ನ ಕಲಬುರ್ಗಿಯ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀಮಂತ್ ಇಲ್ಲಾಳ ಬಲವಾದ ಹಲ್ಲೆಗಳಾದ ಕಾರಣವಾಗಿ ಇಂದು ಹೈದ್ರಾಬಾದ್ ಅಥವಾ ಬೆಂಗಳೂರಿಗೆ ಏರ್ ಲಿಫ್ಟ್ ಮಾಡುವ ಸಾಧ್ಯತೆ ಇದೆ.

ಇನ್ನು ಹಲ್ಲೆ ಮಾಡಿದವರ ವಿರುದ್ದ ಬೀದರ್ ಜಿಲ್ಲೆಯ ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ಮಾಡಿದ ಆರೋಪಿಗಳಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES