Monday, December 23, 2024

ಉದ್ಯೋಗ ಸೃಷ್ಟಿಯಾಗದಿದ್ದಕ್ಕೆ ತಪ್ಪು ದಾರಿ ಹಿಡಿದ ಯುವಕರು; ನಲಪಾಡ್

ರಾಯಚೂರು; ಪೇ ಸಿಎಂ (Pay CM) ಕ್ಯಾಂಪೆನ್ ಸಂಬಂಧ ಹಲವರ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಮಾತನಾಡಿದ್ದಾರೆ.

ರಾಯಚೂರು ನಗರದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ 40% ಪರ್ಸಂಟೇಜ್ ವಿಚಾರ ನಾವು ಹೇಳಿರೋದು ಅಲ್ಲ. ಕೆಎಸ್​ ಈಶ್ವರಪ್ಪ ಅವ್ರು ಕಮೀಷನ್​ ತೆಗೆದುಕೊಂಡ ಹಿನ್ನಲೆಯಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಜೀವ ಕಳೆದುಕೊಂಡಿದ್ದಾನೆ. ಪೇಸಿಎಂ ಪೋಸ್ಟರ್ ಹಾಕಿದ್ದಕ್ಕೆ ನಮ್ಮನ್ನ ಅರೆಸ್ಟ್ ಮಾಡ್ತಾರೆ.

ಭಯೋತ್ಪಾದನೆಗೆ ನಿರುದ್ಯೋಗ ಕಾರಣ ಅಂತ ಹೇಳಿಲ್ಲ. ಕೆಲ ಮಾದ್ಯಮದಲ್ಲಿ ಹೇಳಿಕೆ ತಿರುಚಲಾಗಿದೆ. ನಾನು ಹೇಳಿರುವ ಉದ್ದೇಶ ಬೇರೆಯಿತ್ತು. ಉದ್ಯೋಗ ಸೃಷ್ಠಿಯಾಗದೇ ಇರೋದಕ್ಕೆ ಇಂದಿನ ಯುವಕರು ದಾರಿ ತಪ್ಪುತ್ತಿದ್ದಾರೆ ಎಂದಿದ್ದೇನೆ.

ಇನ್ನು ಪಿಎಫ್ಐ, ಎಸ್​ಡಿಪಿಐ, ಭಜರಂಗದಳ ವಿಚಾರವಾಗಿ ಮಾತನಾಡಿ ಈ ಸಂಘಟನೆಗಳನ್ನ ಬ್ಯಾನ್ ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ಹೇಳಿದ್ದೇವೆ. ರಾಜ್ಯದಲ್ಲಿ ಭಜರಂಗದ, ಪಿಎಫ್ಐ, ಎಸ್ ಡಿಪಿಐ ಬ್ಯಾನ್ ಮಾಡಿ ಎಂದು ಹಲವು ದಿನಗಳಿಂದ ಡಬಲ್ ಇಂಜಿನ್ ಸರ್ಕಾರಕ್ಕೆ ಹೇಳ್ತಿದಿವಿ ಆದರೆ ಈ ಕೆಲಸ ಬಿಜೆಪಿ ಸರ್ಕಾರ ಮಾಡುತ್ತಿಲ್ಲವೆಂದರು.

RELATED ARTICLES

Related Articles

TRENDING ARTICLES