ಬೆಂಗಳೂರು: ಕಳೆದ ಕೆಲವು ಗಂಟೆಗಳಿಂದ ಐಟಿ ಹಾಡ್ ವೇರ್ ಸಮಸ್ಯೆ ಆಗಿತ್ತು. ಹೀಗಾಗಿ 108 ಅಂಬ್ಯುಲೆನ್ಸ್ ಸೇವೆಯ ಕರೆ ಸ್ವೀಕರಿಸಲು ಆಗುತ್ತಿರಲಿಲ್ಲ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಅವರು ಹೇಳಿದ್ದಾರೆ.
ನಿನ್ನೆ ಸಂಜೆಯಿಂದ ರಾಜ್ಯಾದ್ಯಂತ 108 ಅಂಬ್ಯುಲೆನ್ಸ್ ಸೇವೆಗೆ ಕರೆ ಮಾಡಿದರೆ ಕರೆ ಸ್ವೀಕಾರವಾಗುತ್ತಿರಲಿಲ್ಲ. ಇದರಿಂದ ಹಲವರು ಕಿಡಿಕಾರಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಸಾರ್ವಜನಿಕರ ಕರೆ ಬಗ್ಗೆ ಇಂಜಿನಿಯರ್ ಟೀಮ್ ಕರೆಸಿ ಸಮಸ್ಯೆ ಬಗೆ ಹರಿಸುತ್ತಿದ್ದೇವೆ.
ಸದ್ಯ ಇದ್ದಂತಹ ಮದರ್ ಬೋರ್ಡ್ 2008 ರಲ್ಲಿಯದ್ದು, 15 ವರ್ಷದ ಹಳೆ ಸಿಸ್ಟಮ್ ಹೀಗಾಗಿ ಆ ಸಮಸ್ಯೆ ಆಗಿದೆ. ಹೀಗಾಗಿ ಇಡೀ ರಾಜ್ಯದ ಎಲ್ಲಾ ಆರೊಗ್ಯ ಅಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಸಭೆ ಮಾಡಲಾಯಿತು. ಸದ್ಯ ಬ್ಯಾಕ್ ಅಪ್ ಸರ್ವರ್ ಕೆಲ್ಸ ಮಾಡ್ತಿದೆ. ಎಲ್ಲಾ ಜಿಲ್ಲಾಡಳಿತ ಜೊತೆಗೆ ಮಾತನಾಡಿದ್ದೇವೆ. ಎಲ್ಲೂ ಸಮಸ್ಯೆ ಇಲ್ಲ ಅನ್ನುತ್ತಿದ್ದಾರೆ ಎಂದರು.
ಇದಲ್ಲದೇ ನಾಲ್ಕೈದು ಕಾಲ್ ಸೆಂಟರ್ ಮಾಡಲು ಹೇಳಿದ್ದೇವೆ. ಭವಿಷ್ಯದ ಮದರ್ ಬೋರ್ಡ್ ನಾಳೆ ಸರಿ ಹೋಗುತ್ತದೆ. ಇನ್ನೊಂದು ಮದರ್ ಬೋರ್ಡ್ ಖರೀದಿ ಮಾಡಬೇಕಾಗಿದೆ. ಈಗಾಗಲೇ ಸಿಎಂ ಜೊತೆಗೆ ಮಾತನಾಡಿದ್ದೇನೆ. ದೇವರ ದಯೆ ಇಂದ ಸಮಸ್ಯೆ ಬಗೆಹರಿದಿದೆ ಎಂದು ಆರೋಗ್ಯ ಸಚಿವರು ತಿಳಿಸಿದರು.
108 ಅಂಬ್ಯುಲೆನ್ಸ್ ಸೇವೆಯಲ್ಲಿ ಜನರಿಗೆ ತೊಂದರೆಯಾಗಿದೆ. ರಾಜ್ಯದ ಜನರಲ್ಲಿ ಕ್ಷಮೆ ಕೇಳುತ್ತೇನೆ. ಎಲ್ಲಾ ತಾಲೂಕಿನ ಅಧಿಕಾರಿಗಳ ಜೊತೆಗೆ ಈ ಬಗ್ಗೆ ಮಾತನಾಡಿದ್ದೇನೆ. ತುಮಕೂರಿನ ಘಟನೆ ಖಚಿತವಾಗಿ ಮಾಹಿತಿ ಬಂದಿಲ್ಲ ಎಂದರು.
ಈ ಒಂದು ವಾರದಿಂದ ಮದರ್ ಬೋರ್ಡ್ ಎಚ್ಚರಿಕೆಯಿಂದ ನೋಡಿಕೊಳ್ಳುತ್ತೇವೆ. ಆಂಬ್ಯುಲೆನ್ಸ್ ಸೇವೆ ಸಮರ್ಪಕವಾಗಿ ನೀಡುತ್ತೇವೆ. ಪ್ರತಿದಿನ 7 ರಿಂದ 8 ಸಾವಿರ ಕಾಲ್ ಬರುತಿತ್ತು. ಎರಡು ಮೂರು ನಿಮಿಷದಲ್ಲಿ ಕಾಲ್ ರಿಸಿವ್ ಮಾಡುತ್ತಿದ್ದೇವು. ಆದರೆ, ಮದರ್ ಬೋರ್ಡ್ ಸಮಸ್ಯೆಯಿಂದ 6 ರಿಂದ 7 ನಿಮಿಷ ಸಮಸ್ಯೆ ತೆಗೆದುಕೊಳ್ಳುತ್ತಿತ್ತು. ನಾಳೆ ವರ್ಜಿನಲ್ ಮದರ್ ಬೋರ್ಡ್ ಸರಿಹೋಗುತ್ತದೆ ಎಂದು ಸಚಿವರು ಭರವಸೆ ನೀಡಿದರು.