Monday, February 24, 2025

ಮದುವೆ ಆಗ್ತೇನೆಂದು ಕೈ ಕೊಟ್ಟ ಖದೀಮ

ಹುಬ್ಬಳ್ಳಿ : ಪ್ರೀತ್ಸೆ ಪ್ರೀತ್ಸೆ ಅಂತಾ ಬೆನ್ನ ಹಿಂದೆ ಬಿದ್ದ ಯುವಕನೋರ್ವ ಯುವತಿಯೊಂದಿಗೆ ಒಂದು ವರ್ಷ ಸುತ್ತಾಡಿ ನಂತರ ನೀನು ಬೇಡ ಎಂದು ಕೈ ಕೊಟ್ಟಿದ್ದಾನೆ.

ಹುಬ್ಬಳ್ಳಿಯ ಸುನಿಲ್ ಎನ್ನುವ ಯುವಕ ಯುವತಿಗೆ ವಂಚನೆ ಮಾಡಿದ್ದಾನೆ ಎಂದು ಯುವತಿ ಆರೋಪ ಮಾಡಿದ್ದಾಳೆ. ಯುವಕ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು, ಒಂದು ವರ್ಷ ಸುತ್ತಾಡಿ ಮೋಸ ಮಾಡಿದ್ದಾನೆ ಎಂದು ಯುವತಿ ಮತ್ತು ಆಕೆಯ ಕುಟುಂಬಸ್ಥರು ಆರೋಪ ಮಾಡ್ತಿದ್ದಾರೆ.

ಯುವತಿಯೊಂದಿಗೆ ಸುತ್ತಾಡಿ ಈಗ ಮದ್ವೆ ಆಗಲ್ಲ ಎಂದು ಯುವಕ ಹೇಳ್ತಿದ್ದಾನಂತೆ. ಮದ್ವೆಗೆ ಒಲ್ಲೆ ಎಂದಿರುವ ಯುವಕನ ಮೇಲೆ ಕುಟುಂಬಸ್ಥರು ಆಕ್ರೋಶ ಹೊರಹಾಕುತ್ತಿದ್ದಾರೆ. ತಮ್ಮ ಮಗಳ ಜೀವನ ಹಾಳು ಮಾಡಿದಕ್ಕೆ ಯುವತಿ ಕುಟುಂಬಸ್ಥರು ಕಣ್ಣೀರು ಹಾಕುವಂತಾಗಿದೆ. ಯುವತಿ ಪೋಷಕರು ನ್ಯಾಯ ಕೊಡಿಸುವಂತೆ ವಿದ್ಯಾನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

RELATED ARTICLES

Related Articles

TRENDING ARTICLES