Thursday, January 23, 2025

ಕಸದ ಲಾರಿ ಚಲಾಯಿಸಿದ ಜಿ.ಪಂ CEO

ಯಾವ ಕೆಲಸವೂ ಕೀಳಲ್ಲ ಎಂಬುದನ್ನು ಕರ್ನಾಟಕದ IAS ಅಧಿಕಾರಿ ಪ್ರಸನ್ನ ಅವರು ತಮ್ಮ ಕಾರ್ಯದ ಮೂಲಕ ತೋರ್ಪಡಿಸಿದ್ದು, ಅವರ ಕಾರ್ಯಕ್ಕೆ ಎಲ್ಲಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ಉಡುಪಿ ಜಿಲ್ಲಾ ಪಂಚಾಯತ್ CEO ಆಗಿರುವ ಪ್ರಸನ್ನ ಅವರು ಪ್ರತಿ ಕೆಲಸವೂ ಶ್ರೇಷ್ಠ ಮತ್ತು ಅಗತ್ಯ ಎಂಬ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಇಂದು ಸ್ವತಃ ತಾವೇ ಕಸ ಸಂಗ್ರಹಿಸುವ ವಾಹನ ಚಲಾಯಿಸಿಕೊಂಡು ಬಂದು ನಿವಾಸಿಗಳಿಂದ ಕಸ ಸಂಗ್ರಹಿಸಿದ್ದಾರೆ. ಉಡುಪಿಯ ಬಡಗಬೆಟ್ಟು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ ವಾಹನವನ್ನು ಚಾಲನೆ ಮಾಡಿಕೊಂಡು ಬಂದು ತ್ಯಾಜ್ಯ ಸಂಗ್ರಹಣೆ ಹೇಗೆ ನಡೆಯುತ್ತಿದೆ ಎಂಬುದನ್ನು ಖುದ್ದು ವೀಕ್ಷಿಸಿದರು.

ಅಧಿಕಾರಿಯೊಬ್ಬರು ತಾವೇ ಕಸದ ವಾಹನ ಚಾಲನೆ ಮಾಡಿಕೊಂಡು ಬಂದು ಕಸ ಸಂಗ್ರಹಿಸಿದ್ದು, ಸ್ಥಳೀಯರಿಗೆ ಅಚ್ಚರಿಯನ್ನುಂಟು ಮಾಡಿತ್ತು. ಅಲ್ಲದೇ ಹಲವು ನಿವಾಸಿಗಳು ಪ್ರಸನ್ನ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES