ಕಲಬುರಗಿ; ಗಾಂಜಾ ಮಾಫಿಯಾಗಳಿಂದ ಮಾರಣಾಂತಿಕ ಹಲ್ಲೆಗೊಳಗಾದ ಸಿಪಿಐ ಶ್ರೀಮಂತ್ ಇಲ್ಲಾಳ್ ಅವರ ಆರೋಗ್ಯ ಕುರಿತು ವೈದ್ಯರು ಸ್ಪಷ್ಟನೆ ನೀಡಿದ್ದಾರೆ.
ಕಲಬುರಗಿಯಲ್ಲಿ ಯುನೈಟೆಡ್ ಆಸ್ಪತ್ರೆ ಮುಖ್ಯಸ್ಥ ಡಾ ವಿಕ್ರಮ್ ಸಿದ್ದರೆಡ್ಡಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಹತ್ತು ತಜ್ಞ ವೈದ್ಯರಿಂದ ಸಿಪಿಐ ಇಲ್ಲಾಳ ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಆಸ್ಪತ್ರೆಗೆ ದಾಖಲಾಗಿದ್ದಾಗ ಸಿಪಿಐ ಅವರ ಪಲ್ಸ್ ಹೆಚ್ಚಾಗಿತ್ತು. ಬಿಪಿ ಕಡಿಮೆ ಇತ್ತು. ಎದೆಯ ಭಾಗದಲ್ಲಿ ಬಲವಾದ ಗಾಯವಾಗಿದ್ದು, ಸಂಬಂಧಿಸದಂತೆ ಜೀವ ಉಳಿಸುವ ಔಷಧಿಗಳನ್ನು ಕೊಡಲಾಗಿದೆ ಎಂದರು.
ಸದ್ಯ ನಿನ್ನಿಗಿಂತ ಇಂದು ಸಿಪಿಐ ಇಲ್ಲಾಳ ಚೇತರಿಸಿಕೊಳ್ಳುತ್ತಿದ್ದಾರೆ. ಕಿಡ್ನಿ ಫಂಕ್ಷನ್ ನಾರಮಲ್ ಸ್ಟೇಜ್ ಗೆ ಬಂದಿದೆ. ಒಳಪೆಟ್ಟಿನಿಂದ ಆಗ್ತಿದ್ದ ಬ್ಲೀಡಿಂಗ್ ಸ್ಟಾಪ್ ಆಗಿದೆ. ಆಕ್ಸಿಜನ್ ಅವಶ್ಯಕತೆ ಕಡಿಮೆ ಆಗಿದೆ, ಕಣ್ಣು ತೆರೆಯುವ ಪ್ರಯತ್ನ ಮಾಡುತ್ತಿದ್ದಾರೆ.
ಸಿಪಿಐ ಲಂಗ್ಸ್ ಡ್ಯಾಮೇಜ್ ಇರೋದ್ರಿಂದ ಸ್ವಲ್ಪ ಟೈಂ ತೊಗೊಳ್ಳುತ್ತದೆ. ನಿನ್ನೆಗಿಂದ ಸಿಪಿಐ ಶ್ರೀಮಂತ ಇಲ್ಲಾಳ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಸ್ಥಳಕ್ಕೆ ಏರ್ ಲಿಫ್ಟ್ ಮಾಡಿದ್ರೆ ಸ್ಚಲ್ಪ ತೊಂದರೆ ಆಗುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದರು.