Monday, December 23, 2024

ಕೊರೋನಾ ಟೈಂನಲ್ಲಿ ಇದೆಂಥ ಸುಲಿಗೆ ಸಾರಿಗೆ ಸಚಿವರೇ.?

ಮೈಸೂರು : ದಸರಾ ಹಬ್ಬಕ್ಕೆ ಊರಿಗೆ ಹೊರಟವರಿಗೆ ಶಾಕ್ ನೀಡಿದ್ದು, ಬಸ್ ದರ ಸಿಕ್ಕಾಪಟ್ಟೆ ದುಬಾರಿಯಾಗಿದೆ.

ನಗರದಲ್ಲಿ ಖಾಸಗಿ ಬಸ್‌ಗಳ ಲೂಟಿಯಾಗಿದ್ದು, ಹಬ್ಬಗಳ ಸೀಸನ್ ಟೈಂನಲ್ಲಿ ಊರಿಗೆ ಹೋಗಬೇಕು ಅಂದ್ರೆ ಬೇಕು ಜೇಬು ತುಂಬಾ ಹಣ ಇರಬೇಕು. ಆದರೆ ಕೊರೋನಾ ಟೈಂನಲ್ಲಿ ಇದೆಂಥ ಸುಲಿಗೆ ಸಾರಿಗೆ ಸಚಿವರೇ.? ದಸರಾ ಹಬ್ಬಕ್ಕೆ ಸಾಲು ಸಾಲು ರಜೆ ಇರುವ ಹಿನ್ನೆಲೆ ಟಿಕೆಟ್ ದರ ಹೆಚ್ಚಳವಾಗಿದೆ. ಹೀಗಾಗಿ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಖಾಸಗಿ ಬಸ್​​ಗಳ ಫೇರ್ ಶಾಕ್ ಆಗಿದೆ.
ಹಬ್ಬದ ದರ                   ಹಿಂದಿನ ದರ
ಉಡುಪಿ        1,400 – 1,800              700 – 750
ಬೆಳಗಾವಿ      1,100 – 1, 300              800 – 900
ಧಾರವಾಡ     900 – 1,100                  600 – 650
ಮಂಗಳೂರು   1,000 – ,1300               700 – 800
ಹುಬ್ಬಳಿ         1,200 – 1,500               750 – 800
ಗುಲ್ಬರ್ಗಾ       1,200 – 1,550               800 – 900

RELATED ARTICLES

Related Articles

TRENDING ARTICLES