Monday, December 23, 2024

ಲಾರಿ, ಕಾರು ಹಾಗೂ ಬೈಕ್​ ನಡುವೆ ಸರಣಿ ಅಪಘಾತ; ನಾಲ್ವರ ದುರ್ಮರಣ

ಬೆಳಗಾವಿ; ಸಿಮೇಂಟ್​ ತಂಬಿದ್ದ ಲಾರಿ, ಕಾರು ಹಾಗೂ ಬೈಕ್​ ನಡುವೆ ಸರಣಿ ಅಪಘಾದಲ್ಲಿ ನಾಲ್ವರು ದುರ್ಮರಣ ಹೊಂದಿದ ಘಟನೆ ಸವದತ್ತಿ ತಾಲೂಕಿನ ಬೂದಿಗೊಪ್ಪ ಕ್ರಾಸ್ ಬಳಿ ನಡೆದಿದೆ.

ಬಾಚಿ-ರಾಯಚೂರು ರಾಜ್ಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಕುಡಚಿ ಎಎಸ್ಐ ಪರಶುರಾಮ ಹಲಕಿ ಪತ್ನಿ ರುಕ್ಮಿಣಿ, ಓರ್ವ ಪುತ್ರಿ, ಡ್ರೈವರ್ ಹಾಗೂ ಬೈಕ್ ಮೇಲಿದ್ದ ಅಜ್ಜಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಾರು ಹಾಗೂ ಬೈಕ್ ಯರಗಟ್ಟಿ ಕಡೆಗೆ ಹೊರಟಿದ್ದವು. ಈ ವೇಳೆ ಬೆಳಗಾವಿ ಕಡೆಯಿಂದ ಬರುತ್ತಿದ್ದ ಸೀಮೆಂಟ್ ಲಾರಿ ಮಧ್ಯೆ ಈ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಸಂಪೂರ್ಣವಾಗಿ ಕಾರು ನುಜ್ಜು ನುಜ್ಜಾಗಿದೆ. ಬೈಕ್​ ಮೇಲಿದ್ದ ಓರ್ವ ಅಜ್ಜಿ ಮೃತಪಟ್ಟಿದ್ದಾಳೆ. ಗಂಭೀರ ಗಾಯಗೊಂಡ ಇಬ್ಬರನ್ನ ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಕಾರಿನಲ್ಲಿ ಒಟ್ಟು ಐದು ಜನ, ಬೈಕ್ ಮೇಲೆ ಮೂವರು ಇದ್ದರು. ಸ್ಥಳಕ್ಕೆ ಬೆಳಗಾವಿ ಎಸ್ಪಿ ಡಾ. ಸಂಜೀವ್ ಪಾಟೀಲ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಅಪಘಾತದಿಂದ ರಾಜ್ಯ ಹೆದ್ದಾರಿ ಮೇಲೆ ಸಂಚಾರದಲ್ಲಿ ವ್ಯಥ್ಯಯವಾಯಿತು.

RELATED ARTICLES

Related Articles

TRENDING ARTICLES