Sunday, December 22, 2024

ಯಶಸ್ವಿ ಜೈಸ್ವಾಲ್‌ಗೆ ಮೈದಾನದಿಂದ ಹೊರಗಟ್ಟಿ, ಶಿಸ್ತಿನ ನಾಯಕನಾದ ಅಜಿಂಕ್ಯ ರಹಾನೆ.!

ಬೆಂಗಳೂರು: ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಅವರು ಅಶಿಸ್ತು ನಡೆದುಕೊಂಡ ಹಿನ್ನಲೆಯಲ್ಲಿ ಮೈದಾನದಿಂದ ಅಜಿಂಕ್ಯ ರಹಾನೆ ಅವರು ಹೊರ ಕಳುಹಿಸಿರುವ ಅಪರೂಪದ ಘಟನೆ ನಡೆದಿದೆ.

ಈ ವರ್ಷದ ದುಲೀಪ್‌ ಟ್ರೋಫಿ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಪಶ್ಚಿಮ ವಲಯ ತಂಡವು ದಕ್ಷಿಣ ವಲಯ ಎದುರು 294 ರನ್‌ಗಳ ಬೃಹತ್‌ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ವೆಸ್ಟ್‌ ಝೋನ್‌ ಗೆಲುವಿನ ಆರಂಭಿಕ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ ಕಾರಣವಾಗಿದ್ದಾರೆ. ಎರಡನೇ ಇನಿಂಗ್ಸ್‌ನಲ್ಲಿ 265 ರನ್‌ಗಳನ್ನು ಸಿಡಿಸಿ ಮನಮೋಹಕ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದರು.

ಆದರೆ ಈ ಪಂದ್ಯದಲ್ಲಿ ಸ್ವಲ್ಪ ನಾಟಕೀಯ ಬೆಳವಣಿಗೆಗಳು ನಡೆದಿವೆ. ದಕ್ಷಿಣ ವಲಯದ ಬ್ಯಾಟ್ಸಮನ್​ ಟಿ ರವಿತೇಜಾ ಹಾಗೂ ಜೈಸ್ವಾಲ್ ನಡುವೆ ಪರಸ್ಪರ ಬೈದುಕೊಂಡಿದ್ದಾರೆ. ರಹಾನೆ ಬೇಗನೆ ಇಬ್ಬರ ನಡುವಿನ ಪರಿಸ್ಥಿತಿಯನ್ನು ಶಾಂತಗೊಳಿಸಿದರು. ಈ ವೇಳೆ ರಹಾನೆ ಹೇಳಿದ್ರೂ ಜೈಸ್ವಾಲ್ ಕೇಳದ ಹಿನ್ನಲೆಯಲ್ಲಿ ಅಂತಿಮವಾಗಿ ಅಂಪೈರ್‌ಗಳು ರಹಾನೆ ಅವರೊಂದಿಗೆ ಮಾತಿಗೆ ಇಳಿದರು. ಮಾತುಕತೆ ನಂತರ ಮೈದಾನದಿಂದ ಜೈಸ್ವಾಲ್​ನನ್ನ ಮೈದಾನದಿಂದ ಹೊರಗಡೆ ಕಳುಹಿಸಲಾದ ವಿಡಿಯೋ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಜೈಸ್ವಾಲ್ ಅವರು ತೇಜಾಗೆ ಜತೆಗೆ ವಾಗ್ದಾದ ಮಾಡಿದರು. ನಂತರ ರಹಾನೆ ಅವರು ಜೆಸ್ವಾಲ್​ನನ್ನ ಹೊರಗಡೆ ಕಳುಹಿಸಲು ನಿರ್ಧರಿಸಿದರು. ಮೈದಾನದಿಂದ ಹೊರನಡೆಯುತ್ತಿದ್ದಂತೆ ಜೈಸ್ವಾಲ್ ತನ್ನಲ್ಲೇ ಏನೋ ಗೊಣಗಿಕೊಳ್ಳುತ್ತಾ ಹೋಗುತ್ತಿರುವುದನ್ನ ಕಾಣಬಹುದು.

ಜೈಸ್ವಾಲ್ ಘಟನೆಯ ಬಗ್ಗೆ ಆಟದ ನಂತರ ಮಾತನಾಡಿದ ರಹಾನೆ, ನಮ್ಮ ಎದುರಾಳಿಗಳು, ಅಂಪೈರ್‌ಗಳು ಮತ್ತು ಪಂದ್ಯದ ಅಧಿಕಾರಿಗಳನ್ನು ಯಾವಾಗಲೂ ಗೌರವಿಸುತ್ತೇನೆ ಎಂದು ನಾನು ನಂಬುತ್ತೇನೆ. ಆದ್ದರಿಂದ ನೀವು ಕೆಲವು ಘಟನೆಗಳನ್ನು ನಿರ್ದಿಷ್ಟ ರೀತಿಯಲ್ಲಿ ನಿಭಾಯಿಸಬೇಕು ಎಂದರು.

RELATED ARTICLES

Related Articles

TRENDING ARTICLES