Wednesday, January 22, 2025

ಕೊನೆಗೂ 108 ಆಂಬ್ಯುಲೆನ್ಸ್​​ ಸಮಸ್ಯೆ ಸರಿಪಡಿಸಿದ ಆರೋಗ್ಯ ಇಲಾಖೆ.!

ಬೆಂಗಳೂರು: 108 ಆಂಬ್ಯುಲೆನ್ಸ್ ಸೇವೆಯಲ್ಲಿನ ವ್ಯತ್ಯಯವನ್ನ ಕಡೆಗೂ ರಾಜ್ಯ ಸರ್ಕಾರ ಸರಿಪಡಿಸಿದೆ. ನಿನ್ನೆಯಿಂದ 108 ಅಂಬ್ಯುಲೆನ್ಸ್ ಕರೆ ಹೋಗುತ್ತಿರಲಿಲ್ಲ. ಈಗ ಇದನ್ನ ಸರಿಪಡಿಸಿ ರೋಗಿಗಳಿಗೆ ಆಂಬ್ಯುಲೆನ್ಸ್​ ಸೇವೆ ಮುಕ್ತವಾಗಿದೆ.

ನಿನ್ನೆ ಸಂಜೆಯಿಂದ ರಾಜ್ಯದಲ್ಲಿ 108 ಆಂಬ್ಯುಲೆನ್ಸ್ ಸೇವೆಯಲ್ಲಿ ವ್ಯತ್ಯಯವಾಗಿತ್ತು. ಆಂಬ್ಯುಲೆನ್ಸ್​ ಸಿಬ್ಬಂದಿಗಳಿಗೆ ಸಾರ್ವಜನಿಕರು ಕರೆ ಮಾಡಿದ್ರೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ ಎಂದು ರೋಗಿಗಳು ಕಿಡಿಕಾರಿದ್ದರು.

ಸದ್ಯ ಆ್ಯಂಬುಲೆನ್ಸ್ ಸೇವೆ GVK ಏಜೆನ್ಸಿ ನಡೆಸುತ್ತಿದೆ. ತಾಂತ್ರಿಕ ದೋಷದಿಂದ ತುರ್ತು ಸೇವೆ ಬಂದ್ ಆಗಿತ್ತು. ಪ್ರತಿದಿನ 108 ಆಂಬ್ಯುಲೆನ್ಸ್​ಗೆ ಸುಮಾರು 20 ಸಾವಿರ ಕರೆ ಬರುತ್ತದೆ. ಈಗ ಕರೆ ಮಾಡಿದರು ಕೂಡ ಯಾವುದೇ ಸಿಬ್ಬಂದಿಗಳು ಕರೆ ಸ್ವೀಕರಿಸುತ್ತಿಲ್ಲ ಎಂದು ಸಾರ್ವಜನಿಕರು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.

RELATED ARTICLES

Related Articles

TRENDING ARTICLES