ಮಾವು ಸೀಸನ್ ಮುಗಿದ್ರೂ ತೋತಾಪುರಿ ಘಮಲು ಮಾತ್ರ ಹಾಗೇ ಇದೆ. ಕಾರಣ ನವರಸನಾಯಕ ಜಗ್ಗೇಶ್. ಹೌದು. ದಸರಾ ಹಬ್ಬಕ್ಕೆ ನೋಡುಗರ ಮನಸಿಗೆ ಮುದ ನೀಡೋಕೆ ತೋತಾಪುರಿ ಟೀಂ ಬೆಳ್ಳಿತೆರೆಗೆ ಬರ್ತಿದೆ. ಸೆನ್ಸಾರ್ನಿಂದ ಯುಎ ಸರ್ಟಿಫಿಕೆಟ್ ಕೂಡ ಸಿಕ್ಕಿದ್ದು, ಒಂದಷ್ಟು ಹೊಸತನಕ್ಕೆ ನಾಂದಿ ಹಾಡಿದೆ.
- ಮಾವು ಸೀಸನ್ ಮುಗಿದಿಲ್ಲ.. ಬರ್ತಿದೆ ನವರಸ ತೋತಾಪುರಿ
ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಸಾಲಿನಲ್ಲಿರೋ ಪ್ಯಾನ್ ಇಂಡಿಯಾ ಮಲ್ಟಿಸ್ಟಾರರ್ ಹಾಗೂ ಕಾಮಿಡಿ ಎಂಟರ್ಟೈನರ್ ಅಂದ್ರೆ ಅದು ತೋತಾಪುರಿ. ಮಾವಿನ ಹಣ್ಣಿನ ಹೆಸರಿನಷ್ಟೇ ಅಲ್ಲದೆ, ಅದ್ರ ಸ್ವಾಧ ಕೂಡ ಇರೋ ಟಿಪಿಕಲ್ ಕಾಮಿಡಿ ಜಾನರ್ ಸಿನಿಮಾ. ಇಲ್ಲಿ ಹಾಸ್ಯದ ಜೊತೆ ಜೊತೆಗೆ ಸೂಕ್ಷ್ಮಾತಿಸೂಕ್ಷ್ಮ ವಿಚಾರಗಳನ್ನ ಪ್ರೇಕ್ಷಕರ ಮುಂದೆ ತರೋ ಪ್ರಯತ್ನ ಮಾಡಿದೆ ಚಿತ್ರತಂಡ.
ನವರಸನಾಯಕ ಜಗ್ಗೇಶ್, ಡಾಲಿ ಧನಂಜಯ, ಅದಿತಿ ಪ್ರಭುದೇವ, ಸುಮನ್ ರಂಗನಾಥ್, ದತ್ತಣ್ಣ ಹೀಗೆ ಬಹುದೊಡ್ಡ ತಾರಾಗಣದ ತೋತಾಪುರಿ ಸಿನಿಮಾಗೆ ನೀರ್ದೋಸೆ ವಿಜಯ್ ಪ್ರಸಾದ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಶ್ರಾವಣಿ ಸುಬ್ರಮಣ್ಯ, ಶಿವಲಿಂಗದಂತಹ ಹಿಟ್ ಸಿನಿಮಾಗಳ ನಿರ್ಮಾಪಕ ಕೆಎ ಸುರೇಶ್ ಬಂಡವಾಳ ಹೂಡಿದ್ದಾರೆ. ಸಿನಿಮಾ ಇದೇ ಸೆಪ್ಟೆಂಬರ್ 30ಕ್ಕೆ ತೆರೆಗೆ ಬರ್ತಿದ್ದು, ರೀಸೆಂಟ್ ಆಗಿ ಸೆನ್ಸಾರ್ನಿಂದ ಕ್ಲೀನ್ ಯುಎ ಪ್ರಮಾಣ ಪತ್ರ ಪಡೆದಿದೆ.
ಸೆನ್ಸಾರ್ ಮಂದಿಯ ಮೆಚ್ಚುಗೆಗೆ ಪಾತ್ರವಾದ ತೋತಾಪುರಿ ಪ್ರೊಮೋಷನ್ಸ್ ಕೂಡ ಭರದಿಂದ ಸಾಗ್ತಿದ್ದು, ಇದೇ ಮೊದಲ ಬಾರಿ ಮೆಟ್ರೋ ಸ್ಟೇಷನ್ಗಳಲ್ಲಿ ತೋತಾಪುರಿ ಸ್ಟ್ಯಾಂಡೀಸ್ ರಾರಾಜಿಸ್ತಿವೆ. ಅಲ್ಲದೆ, ಇದೇ ಸೆಪ್ಟೆಂಬರ್ 27ಕ್ಕೆ ಬೆಂಗಳೂರಿಂದ ಮೈಸೂರಿಗೆ ದಸರಾ ಪ್ರಯುಕ್ತ ಟ್ರೈನ್ನಲ್ಲಿ ಜಗ್ಗೇಶ್- ಡಾಲಿ ಟೀಂ ಪಯಣ ಬೆಳೆಸಲಿದೆ. ಇದಕ್ಕೆ ಸಿನಿಮಾ ವರದಿಗಾರರು ಹಾಗೂ ಪತ್ರಕರ್ತಯರು ಕೂಡ ಸಾಥ್ ನೀಡಲಿದ್ದಾರೆ.
ತ್ರಿಬಲ್ ಆರ್ ಕರ್ನಾಟಕ ಡಿಸ್ಟ್ರಿಬ್ಯೂಷನ್ ಪಡೆದಿದ್ದ ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ತೋತಾಪುರಿ ವಿತರಣಾ ಹಕ್ಕುಗಳನ್ನ ಪಡೆದಿದ್ದು, ವಿಶಾಲ ಕರ್ನಾಟಕಕ್ಕೆ ಹಂಚಿಕೆ ಮಾಡ್ತಿದೆ. ಭಾವೈಕ್ಯತೆಯ ಸಂದೇಶ ಸಾರಲಿರೋ ಈ ತೋತಾಪುರಿ ಮಾವಿನ ರಸಾನುಭವದಂತೆ ನೋಡುಗರಲ್ಲಿ ಚಿಂತನೆಯ ಬೀಜ ಬಿತ್ತುವುದರಲ್ಲಿ ಸಂದೇಹವೇ ಇಲ್ಲ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ