Wednesday, January 22, 2025

ಪೃಥ್ವಿರಾಜ್ ಹೇಳಿದ ಟೈಸನ್ ನಮ್ಮ ರಾಕಿಭಾಯ್ ಯಶ್..?

ಕಟ್ಟಪ್ಪ ಬಾಹುಬಲಿಯನ್ನ ಕೊಂದಿದ್ಯಾಕೆ ಅನ್ನೋ ಬಿಲಿಯನ್ ಡಾಲರ್ ಪ್ರಶ್ನೆಗಿಂತ ಬಹುದೊಡ್ಡ ಯಕ್ಷಪ್ರಶ್ನೆಯಾಗಿರೋದು ರಾಕಿಭಾಯ್ ನೆಕ್ಸ್ಟ್ ಪ್ರಾಜೆಕ್ಟ್. ಯೆಸ್.. ಯಶ್ 19ನೇ ಸಿನಿಮಾದ ಬಗ್ಗೆ ಎಕ್ಸ್​​ಕ್ಲೂಸಿವ್ ಇನ್​ಸೈಡ್ ಸ್ಟೋರಿ ಸಿಕ್ಕಿದ್ದು, ಅದೊಂದು ಮೆಗಾ ಮಲ್ಟಿಸ್ಟಾರರ್ ಆಗಿರಲಿದೆ. ಇಷ್ಟಕ್ಕೂ ಯಾರು ಮತ್ತೊಬ್ಬ ಸೂಪರ್ ಸ್ಟಾರ್..? ಸಿನಿಮಾ ಯಾವುದು ಅನ್ನೋದ್ರ ಧಮಾಕೇದಾರ್ ಸ್ಟೋರಿ  ನೀವೇ ಓದಿ.

  • ಯಶ್ ಕೊಟ್ಟ ಟೈಂ ಬಂದೇಬಿಡ್ತು.. ಮಲ್ಟಿಸ್ಟಾರರ್ ‘ಟೈಸನ್’

ಕೆಜಿಎಫ್- 2 ನಂತ್ರ ಚಾಪ್ಟರ್-3 ಕಿಕ್​ಸ್ಟಾರ್ಟ್​ ಆಗಲಿದೆ ಅಂದುಕೊಂಡಿದ್ದ ಸಿನಿಪ್ರಿಯರಿಗೆ ಮಾನ್​ಸ್ಟರ್ ಡೈರೆಕ್ಟರ್ ಪ್ರಶಾಂತ್ ನೀಲ್ ಹಾಗೂ ನ್ಯಾಷನಲ್ ಸ್ಟಾರ್ ರಾಕಿಭಾಯ್ ಇಬ್ರೂ ಶಾಕಿಂಗ್ ನ್ಯೂಸ್ ಕೊಟ್ರು. ನಂತ್ರ ಯಶ್ 19ನೇ ಸಿನಿಮಾಗೆ ನರ್ತನ್ ಆ್ಯಕ್ಷನ್ ಕಟ್ ಹೇಳ್ತಾರೆ ಅನ್ನೋ ಸುದ್ದಿಯೂ ಹುಸಿ ಆಯ್ತು. ಶಂಕರ್ ಸಾರಥ್ಯದಲ್ಲಿ ಸಾವಿರ ಕೋಟಿ ಸಿನಿಮಾ ಸೆಟ್ಟೇರಲಿದೆ ಅನ್ನೋ ಸುದ್ದಿ ಹೊರಬಂತು. ಇದೀಗ ಅವೆಲ್ಲವನ್ನ ಮೀರಿ ಹೊಚ್ಚ ಹೊಸ ಖಬರ್ ಟಾಕ್ ಆಫ್ ದಿ ಟೌನ್ ಆಗಿದೆ.

ರೀಸೆಂಟ್ ಆಗಿ ಸೈಮಾ ಫಂಕ್ಷನ್​ನಲ್ಲಿ ಸಮಯ ಬಂದಾಗ ನಾನೇ ಹೇಳ್ತೀನಿ ಅಂದಿದ್ರು ಯಶ್. ಇದೀಗ ಆ ಸಮಯ ಬಂದಾಗಿದೆ. ಮಲಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ನೀಡಿರೋ ಹೇಳಿಕೆ ಪ್ರಕಾರ ಹೊಂಬಾಳೆ ಫಿಲಂಸ್ ಬ್ಯಾನರ್​ನಡಿ ಯಶ್ ಹಾಗೂ ಪೃಥ್ವಿರಾಜ್ ಕಾಂಬೋನಲ್ಲಿ ಸಿನಿಮಾ ತಯಾರಾಗಲಿದೆ. ಯೆಸ್.. ಪೃಥ್ವಿರಾಜ್ ಅವ್ರೇ ಹೇಳಿಕೊಂಡಂತೆ ಅದೊಂದು ಮೆಗಾ ಮಲ್ಟಿಸ್ಟಾರರ್ ಆಗಿರಲಿದ್ದು, ಈ ಹಿಂದೆ ಅನೌನ್ಸ್ ಮಾಡಿರೋ ಟೈಸನ್ ಚಿತ್ರವೇ ಅದಾಗುತ್ತಾ ಅನ್ನೋದು ಎಲ್ಲರ ಕ್ಯೂರಿಯಾಸಿಟಿ ದುಪ್ಪಟ್ಟು ಮಾಡಿದೆ.

ನಟ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಕಮಾಲ್ ಮಾಡ್ತಿರೋ ಪೃಥ್ವಿರಾಜ್ ಕೆಜಿಎಫ್ ಮಲಯಾಳಂ ಡಿಸ್ಟ್ರಿಬ್ಯೂಷನ್ ಪಡೆದಿದ್ರು. ಯಶ್ ಹಾಗೂ ಹೊಂಬಾಳೆ ಫಿಲಂಸ್​ಗೆ ಬಹಳ ಹತ್ತಿರ ಆಗಿದ್ರು. ಎಲ್ಲಕ್ಕಿಂತ ಹೆಚ್ಚಾಗಿ ಲೂಸಿಫರ್​ನ ಗ್ಯಾಂಗ್​ಸ್ಟರ್ ರೋಲ್, ಕಡುವ ಹಾಗೂ ಅಯ್ಯಪ್ಪನುಂ ಕೋಶಿಯುಂ ಚಿತ್ರಗಳಿಂದ ಮೆಗಾ ಮಾಸ್ ಹೀರೋ ಆಗಿ ಧೂಳೆಬ್ಬಿಸಿದ್ರು. ಇದೀಗ ಯಶ್ ಜೊತೆ ಇವ್ರು ಬಣ್ಣ ಹಚ್ಚಿದ್ರೆ, ಅದು ಬೆಂಕಿ- ಬಿರುಗಾಳಿ ಒಟ್ಟೊಟ್ಟಿಗೆ ಕಾಲಿಟ್ಟಂತೆ ಆಗಲಿದೆ.

ಟೈಸನ್ ಮೂವಿ ಐಎಎಸ್ ಆಫೀಸರ್ ಒಬ್ರ ಕಥೆಯಾಗಿದ್ದು, ರಾಕಿಭಾಯ್ IAS ಆಫೀಸರ್ ಆಗಿ ಮಿಂಚ್ತಾರಾ ಅನ್ನೋದು ಕಾದುನೋಡಬೇಕಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ ಪೃಥ್ವಿರಾಜ್ ಆ್ಯಕ್ಷನ್ ಕಟ್ ಹೇಳೋದ್ರ ಜೊತೆ ಯಶ್ ಜೊತೆ ಖಡಕ್ ಖಳನಾಯಕನಾಗಿ ಕಾಣಸಿಗಲಿದ್ದಾರೆ. ಇನ್ನು ಇದು ಅಫಿಶಿಯಲ್ ಆಗಿ ಅನೌನ್ಸ್ ಆಗೋದನ್ನ ನಿರೀಕ್ಷಿಸಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES