Monday, December 23, 2024

ಪೇಸಿಎಂ ಪೋಸ್ಟರ್ ಜಟಾಪಟಿ

ಬೆಂಗಳೂರು : ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಭಾರಿ ಜಟಾಪಟಿಗೆ ಕಾರಣವಾಗಿರುವ ಪೇಸಿಎಂ ಪೋಸ್ಟರ್ ನಿಂದಾಗಿ ಆಡಳಿತಾರೂಢ ಬೊಮ್ಮಾಯಿ ಸರಕಾರ ತೀವ್ರ ಮುಜುಗರಕ್ಕೀಡಾಗಿದೆ. ಈ ಸಂಬಂಧ ಪೊಲೀಸ್ ಕಾರ್ಯಾಚರಣೆ ನಡೆದರೂ ಪೋಸ್ಟರ್ ರಾಜ್ಯದೆಲ್ಲಡೆ ಮನೆಮಾತಾಗಿದೆ.

ರಾಜ್ಯ ಸರಕಾರ ಮತ್ತು ರಾಜ್ಯ ಬಿಜೆಪಿ ಘಟಕದ ವಿರುದ್ದ ಹೈಕಮಾಂಡ್ ಕೆಂಡಾಮಂಡಲವಾಗಿದೆ ಎಂದು ವರದಿಯಾಗಿದೆ. ಗುಪ್ತಚರ ಇಲಾಖೆ ತಮ್ಮ ಸುಪರ್ದಿಯಲ್ಲಿ ಇದ್ದರೂ, ಯಾಕೆ ಈ ಕಾಂಗ್ರೆಸ್ಸಿನ ದಾಳದ ಸೂಚನೆ ಸಿಗಲಿಲ್ಲ. ಪೂರ್ವತಯಾರಿ ಇಲ್ಲದೇ ಕಾಂಗ್ರೆಸ್ ಇಂತಹ ದೊಡ್ಡ ಶಿಸ್ತುಬದ್ದವಾದ ಕ್ಯಾಂಪೇನ್ ಅನ್ನು ಮಾಡಲು ಸಾಧ್ಯವಿಲ್ಲ. ಆದಾಗ್ಯೂ, ಗುಪ್ತಚರ ವೈಫಲ್ಯ ಕಂಡಿದ್ದು ಯಾಕೆ ಅಥವಾ ಇಲಾಖೆ ವರದಿಯನ್ನು ನೀಡಿದ್ದರೂ ಸರಕಾರ ಕಡೆಗಣಿಸಿತೇ ಎನ್ನುವ ವರದಿಯನ್ನು ನೀಡುವಂತೆ ಹೈಕಮಾಂಡ್ ಸೂಚಿಸಿದೆ ಎಂದು ಹೇಳಲಾಗುತ್ತಿದೆ.

ಇನ್ನು, ಪೋಸ್ಟರ್‌ ಅಂಟಿಸಿದ ಆರೋಪದ ಮೇಲೆ ಮೂವರು ಕಾಲೇಜು ವಿದ್ಯಾರ್ಥಿಗಳು ಸೇರಿ ಅನೇಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.ಇತ್ತ ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಮೂವರು ಪೋಸ್ಟರ್ ಅಂಟಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲಮಂಗಲ ಟೌನ್ ಠಾಣೆಯಲ್ಲಿ ಆರು ಜನರು ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

RELATED ARTICLES

Related Articles

TRENDING ARTICLES