ಮೈಸೂರು : ದಸರ ಅಂದ್ರೆ ಇಡೀ ವಿಶ್ವಕ್ಕೆ ಪ್ರಸಿದ್ದಿ. ಇದ್ರಿಂದ ದೇಶ ವಿದೇಶದಿಂದಲೂ ಸಾಕಷ್ಟು ಜನ. ಮೈಸೂರಿಗೆ ಆಗಮಿಸ್ತಾರೆ. ಈ ಸಂದರ್ಭದಲ್ಲಿ ಬೆಂಗಳೂರು ಮೈಸೂರು ರಸ್ತೆ ಅಂತು ಫುಲ್ ಟ್ರಾಫಿಕ್ ಜಾಮ್ ಇರುತ್ತೆ. ಆದ್ರೆ ಈ ಬಾರಿಯ ದಸರಾಗೆ ಮೈಸೂರು ರಸ್ತೆಯಲ್ಲಿ ಟ್ರಾಫಿಕ್ ಕಿರಿ ಕಿರಿ ಆಗದಂತೆ ದಶಪಥ ರಸ್ತೆ ಸಿದ್ದವಾಗುತ್ತಿದೆ.
ಇನ್ನು, ಅದೇ ರೀತಿ 6 ಪಥತ ಮೇಲ್ಸೇತುವೆ ಗಳು ಕೂಡಾ ಸಂಚಾರಕ್ಕೆ ಯೋಗ್ಯ ವಾಗಿ ಸಿದ್ದವಾಗಿದೆ. ನಗರ ಮತ್ತೊಂದು ದೊಡ್ಡ ಮೇಲ್ಸೇತುವೆ ಸಂಚಾರಕ್ಕೆ ಸಜ್ಜಾಗಿದ್ದು, ಕುಮಬಳಗೋಡು ನಿಂದ ಬಿಡದಿ ಮಾರ್ಗದ ವರೆಗೂ ಕಾಮಗಾರಿ ಮುಕ್ತಗೊಂಡಿದೆ. ಇನ್ನು, 4.5 ಕಿಲೋಮೀಟರ್ ವಿಸ್ತೀರ್ಣ ಹೊಂದಿರೋ ದೊಡ್ಡ ಮೇಲ್ಸೇತುವೆನಗರದ ಎರಡನೇ ಅತಿ ದೊಡ್ಡದ ಮೇಲ್ಸೇತುವೆ ಇದಾಗಿದೆ.