Wednesday, January 22, 2025

ಧ್ರುವ ಪ್ರೇಮದ KD ಟೈಟಲ್ ಲಾಂಚ್​ಗೆ ಕೌಂಟ್​ಡೌನ್..!

ಮಾರ್ಟಿನ್ ನಂತ್ರ ಶೋಮ್ಯಾನ್ ಪ್ರೇಮ್ ಜೊತೆ ಯುದ್ಧಕ್ಕೆ ಸನ್ನದ್ಧರಾಗಿದ್ದಾರೆ ಹ್ಯಾಟ್ರಿಕ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ. ಅವ್ರ ಡೈ ಹರ್ಡ್​ ವಿಐಪೀಸ್ ಎಲ್ಲಾ ಟೈಟಲ್​ ಏನಾಗಲಿದೆ ಅನ್ನೋ ಕ್ಯೂರಿಯಾಸಿಟಿಯಲ್ಲಿದ್ದಾರೆ. ಅದಕ್ಕೆ ಪ್ರೇಮ್ ಕೂಡ ಮುಹೂರ್ತ ನಿಗದಿ ಮಾಡಿದ್ದು, ದಸರಾ ಹಬ್ಬದ ವಿಶೇಷ ಮಾಸ್ ಟೈಟಲ್ ಲಾಂಚ್ ಮಾಡ್ತಿದ್ದಾರೆ.

  • ಕೆವಿಎನ್ ಪ್ರೊಡಕ್ಷನ್ಸ್​ನಲ್ಲಿ ಯುದ್ಧಕ್ಕೆ ಸಿದ್ಧನಾದ ಧ್ರುವ ಸರ್ಜಾ
  • ಅ- 5ಕ್ಕೆ ಬಹುನಿರೀಕ್ಷಿತ ಕೆಡಿ ಟೈಟಲ್ ಅಫಿಶಿಯಲ್ ಲಾಂಚ್

ಪೊಗರು ನಂತ್ರ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಫ್ಯಾನ್ಸ್​ಗೆ ಹಬ್ಬದೂಟ ಬಡಿಸಲು ಮಾರ್ಟಿನ್ ಸಜ್ಜಾಗ್ತಿದೆ. ಅದು ಧ್ರುವ ಕರಿಯರ್​ನ ಬಿಗ್ಗೆಸ್ಟ್ ಮೂವಿ ಆಗಿದ್ದು, ಕನ್ನಡದ ಜೊತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಹೀಗೆ ಪ್ಯಾನ್ ಇಂಡಿಯಾ ಅಬ್ಬರಿಸಲಿದೆ. ಪ್ರಭಾಸ್​ರ ಸಾಹೋ ರೀತಿ ಬಿಗ್ಗೆಸ್ಟ್ ಆ್ಯಕ್ಷನ್ ವೆಂಚರ್ ಆಗಿರಲಿದ್ದು, ಇಂಡಿಯನ್ ಆಗಿ ಬಹದ್ದೂರ್ ಗಂಡು ಗುಡುಗಲಿದ್ದಾರೆ.

ಮೇಕಿಂಗ್ ಹಂತದಲ್ಲೇ ಮಾರ್ಟಿನ್ ಸಖತ್ ಜೋರಾಗಿ ಸೌಂಡ್ ಮಾಡ್ತಿದ್ದು, ಎಪಿ ಅರ್ಜುನ್ ನಿರ್ದೇಶನ, ಉದಯ್ ಕೆ ಮೆಹ್ತಾ ನಿರ್ಮಾಣ ಚಿತ್ರಕ್ಕಿದೆ. ಇದ್ರ ಶೂಟಿಂಗ್ ಬಹುತೇಕ ಮುಗಿಯುತ್ತಾ ಬಂದಿದ್ದು, ಔಟ್ ಅಂಡ್ ಔಟ್ ಹೈ ವೋಲ್ಟೇಜ್ ಮಾಸ್ ವೆಂಚರ್​ಗೆ ಕೈ ಹಾಕ್ತಿದ್ದಾರೆ ಧ್ರುವ. ಅದು ಕೆವಿಎನ್ ಪ್ರೊಡಕ್ಷನ್ಸ್​ನ ನಾಲ್ಕನೇ ಸಿನಿಮಾ ಆಗಲಿದ್ದು, ಜೋಗಿ ಪ್ರೇಮ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.

ನಟಸಾರ್ವಭೌಮ ಡಾ. ರಾಜ್​ಕುಮಾರ್ ಜನ್ಮ ದಿನೋತ್ಸವದ ಹಿನ್ನೆಲೆ ಏಪ್ರಿಲ್​ನಲ್ಲಿ ಮೈಸೂರಿನ ತಾಯಿ ಚಾಮುಂಡಿ ಸನ್ನಿಧಿಯಲ್ಲಿ ಸೆಟ್ಟೇರಿದ ಈ ಸಿನಿಮಾ, ಪ್ರೀ ಪ್ರೊಡಕ್ಷನ್ ಕಾರ್ಯಗಳಲ್ಲಿ ಬ್ಯುಸಿ ಆಗಿದೆ. ಸದ್ಯದಲ್ಲೇ ಸಿನಿಮಾ ಶೂಟಿಂಗ್ ಕಿಕ್​ಸ್ಟಾರ್ಟ್​ ಆಗಲಿದ್ದು, ಅದಕ್ಕೂ ಮುನ್ನ ಟೈಟಲ್ ಲಾಂಚ್ ಮಾಡಲಿದೆ ಚಿತ್ರತಂಡ. ಇದೇ ಸೆಪ್ಟೆಂಬರ್ 26ಕ್ಕೆ ಚಿತ್ರದ ಟೈಟಲ್ ಲಾಂಚ್ ಡೇಟ್ ಅಕ್ಟೋಬರ್ 5 ಅನ್ನೋದನ್ನ ಅನೌನ್ಸ್ ಮಾಡಲಿದೆ. 5ಕ್ಕೆ ಅಧಿಕೃತವಾಗಿ ಸಿನಿಮಾ ಟೈಟಲ್ ಕೆಡಿ ಅನ್ನೋದು ಬಹಿರಂಗವಾಗಲಿದೆ.

ಪ್ರೊಮೋಷನ್ಸ್​ಗೆ ಮಾಸ್ಟರ್​ಮೈಂಡ್ ಅಂತ್ಲೇ ಫೇಮಸ್ ಆಗಿರೋ ಶೋಮ್ಯಾನ್ ಪ್ರೇಮ್ಸ್, ಈಗಾಗ್ಲೇ ಅರ್ಜುನ್ ಜನ್ಯಾ ಬಳಿ ಸಾಂಗ್ಸ್ ಕಂಪೋಸ್ ಮಾಡಿಸ್ತಿದ್ದಾರೆ. ಮುಂಬೈನಲ್ಲಿ ಮ್ಯೂಸಿಕ್ ಕಾರ್ಯಗಳು ಹಾಗೂ ಕ್ಯಾಲಿಫೋರ್ನಿಯಾದಲ್ಲೂ ಚಿತ್ರದ ಒಂದಷ್ಟು ಟೆಕ್ನಿಕಲ್ ಕೆಲಸಗಳು ನಡೆಸುತ್ತಿದ್ದಾರೆ. ಇದು 70ರ ದಶಕದ ಬ್ಯಾಕ್​ಡ್ರಾಪ್​ನ ಕಥೆ ಆಗಿದ್ದು, ಎಲ್ಲರ ಚಿತ್ತ ತನ್ನತ್ತ ಸೆಳೆಯಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES