Monday, December 23, 2024

ಅಬ್ಬಬ್ಬಾ.. ಶರಣ್ ಕರಿಯರ್​ಗೆ ಸಿಕ್ತು ಬ್ಲಾಕ್ ಬಸ್ಟರ್ ಹಿಟ್

ಸ್ಯಾಂಡಲ್​ವುಡ್ ಅಧ್ಯಕ್ಷ ಶರಣ್​ಗೆ ನಿರ್ದೇಶಕ ತರುಣ್ ಜೊತೆಯಾದ್ರೆ ಅಲ್ಲೊಂದು ಮ್ಯಾಜಿಕ್ ಆಗಲಿದೆ ಅನ್ನೋದು ಕಟ್ಟಿಟ್ಟ ಬುತ್ತಿ. ಸದ್ಯ ಗುರುಶಿಷ್ಯರು ಇವ್ರ ಕಾಂಬೋನ ಮತ್ತೊಂದು ಬ್ಲಾಕ್ ಬಸ್ಟರ್ ಹಿಟ್. ಟ್ರೈಲರ್ ಹಾಗೂ ಸಾಂಗ್ಸ್​ನಲ್ಲಿದ್ದ ಧಮ್ಮು, ರಿಧಮ್​ನ ಸಿನಿಮಾದಲ್ಲೂ ಕಾಯ್ದುಕೊಂಡಿದೆ ಟೀಂ. ಖೋ ಖೋ ಗೇಮ್​ ಶುರು ಮಾಡಿದ್ದಷ್ಟೇ ಅಲ್ಲ, ವಿನ್ ಕೂಡ ಆಗಿದ್ದಾರೆ. ಇಷ್ಟಕ್ಕೂ ಪ್ರೇಕ್ಷಕಪ್ರಭು ಏನಂದ..? ಸ್ಟೋರಿಲೈನ್ ಏನು..? ಪರ್ಫಾಮೆನ್ಸ್ ಹೇಗಿದೆ ಅನ್ನೋದ್ರ ಡಿಟೈಲ್ಡ್ ರಿವ್ಯೂ ನಿಮಗಾಗಿ ಕಾಯ್ತಿದೆ. ನೀವೇ ಓದಿ.

ಗುರುಶಿಷ್ಯರು ಬರೀ ಸಿನಿಮಾ ಅಲ್ಲ.. ಹೋರಾಟದ ಕಿಚ್ಚು..!

ಚಿತ್ರ: ಗುರು ಶಿಷ್ಯರು

ನಿರ್ದೇಶನ: ಜಡೇಶ ಕೆ. ಹಂಪಿ

ನಿರ್ಮಾಣ: ಶರಣ್​ ಕೃಷ್ಣ, ತರುಣ್​ ಕಿಶೋರ್​ ಸುಧೀರ್​​

ಸಂಗೀತ: ಬಿ. ಅಜನೀಶ್​ ಲೋಕನಾಥ್​​

ಸಿನಿಮಾಟೋಗ್ರಫಿ: ಆರೂರ್​ ಸುಧಾಕರ್​ ಶೆಟ್ಟಿ

ತಾರಾಗಣ: ಶರಣ್​​, ನಿಶ್ವಿಕಾ ನಾಯ್ಡು, ಸುರೇಶ್​ ಹೆಬ್ಳಿಕರ್​​​ ಮುಂತಾದವರು.

ಗುರು ಶಿಷ್ಯರು ಸ್ಟೋರಿಲೈನ್:

ಅಲ್ಲೊಂದು ಊರು. ದಬ್ಬಾಳಿಕೆಯ ಮೇಲೆ ಎಲೆ ಮರೆ ಕಾಯಿಯಾದ ಕಲ್ಲು ಮಣ್ಣಿನ ಕುಗ್ರಾಮ. ಹೆಸ್ರು ಬೆಟ್ಟದ ಪುರ. ಪಕ್ಕದಲ್ಲೆ ರುದ್ರಪ್ಪನ ಜಮೀನ್ದಾರಿಕೆಯಲ್ಲಿ ಮೆರೆಯುತ್ತಿರುವ ಅರಸೀಪುರ. ಅಂತೂ ರುದ್ರಪ್ಪನ ಕೆಂಗಣ್ಣು ಬೆಟ್ಟದ ಪುರದ ಮೇಲೆ. ಆತನ ಕುತಂತ್ರದಲ್ಲಿ ಅದೊಂದು ತಾತನ ಅಸ್ತಿಯಂತೆ. ಗಾಂಧಿ ತತ್ವಗಳೊಂದಿಗೆ ಇಡೀ ಊರನ್ನು ನಡೆಸುತ್ತಿರುವ ನಿಜಗುಣ ಶಾಂತಪ್ಪನೇ ಬೆಟ್ಟದ ಪುರಕ್ಕೆಲ್ಲಾ ದಾರಿ ದೀಪ.

ಇತ್ತ ಖೋಖೋದಲ್ಲಿ ನ್ಯಾಷನಲ್​ ಅವಾರ್ಡ್​​​ ಬಂದ್ರು ಕೆಲಸ ಸಿಗದ ನಾಯಕ ಮನೋಹರ. ಹೆಸ್ರಿಗೆ ತಕ್ಕಂತೆ ಒಂಚೂರು ರಮಣೀಯತೆ ಇಲ್ಲದ ಬದುಕು ಆತನದು. ಅಜ್ಜನ ಕನಸಿನಂತೆ ಬೆಟ್ಟದ ಪುರುದಲ್ಲೊಂದು ಪಿಟಿ ಮಾಸ್ಟರ್​ ಕೆಲಸ ದಕ್ಕುತ್ತೆ. ಒಂದೂರಿಗೆ ನಿಂತಿರೋ ಕೆರೆಯಾಗೋದ್ಕಿಂತ ಹತ್ತೂರಿಗೆ ಹರಿಯೋ ನದಿಯಾಗ್ಬೇಕು ಅನ್ನೋ ಛಲದ ಮೇಲೆ ಇಡೀ ಊರನ್ನು ಉಳಿಸೋಕೆ ಹೋರಾಡೋ ಛಲವಾದಿ. ಮಾಡೋಕು ಬರಲ್ಲ, ಕಿಸಿಯೋಕು ಬರಲ್ಲ ಅಂದುಕೊಂಡವ್ರಿಗೆ ಆಸರೆಯಾಗಿ ನಿಂತ ನಾಯಕ. ರುದ್ರಪ್ಪ ಹಾಗೂ ಮನೋಹರನ ಖೋಖೋ ಪಂದ್ಯಾಟದಲ್ಲಿ ಗೆದ್ದವಱರು..? ಸಿಟಿಯನ್ನೆ ಕಂಡಿರದ ಹಳ್ಳಿ ಹೈಕಳು ಆಟದಲ್ಲಿ ಗೆಲ್ತಾರಾ..? ಬೆಟ್ಟದ ಪುರಕ್ಕೆ ನಿಜವಾಗಿ ಸ್ವಾತಂತ್ರ್ಯ ಸಿಗುತ್ತಾ ಅನ್ನೋದೆ ಒನ್​ ಲೈನ್​​ ಸ್ಟೋರಿ.

ಗುರು ಶಿಷ್ಯರು ಆರ್ಟಿಸ್ಟ್ ಪರ್ಫಾಮೆನ್ಸ್ :

ಕಳೆದುಕೊಂಡಿರೋದು ನೆನೆಸ್ಕೊಂಡು, ಉಳಿಸಿಕೊಳ್ಳಬೇಕಾಗಿರೋದು ಕಳ್ಕೋಬೇಡ ಅನ್ನೋ ಸಾಲುಗಳು ಸಿನ್ಮಾದಲ್ಲಿ ಸಿಕ್ಕಾಪಟ್ಟೆ ಕಾಡುತ್ತವೆ. ಎಡ್ಜ್​ ಆಫ್​ ದಿ ಸೀಟ್​​ ಕಥೆ ತಂದು ಕೂರಿಸುತ್ತದೆ.  ಬಿಕ್ಕಿ ಬಿಕ್ಕಿ ಅಳಿಸುತ್ತದೆ. ಮತ್ತೆ ಮತ್ತೆ ಕಾಡುತ್ತದೆ. ನಮ್ಮನ್ನೆಲ್ಲಾ ಬಾಲ್ಯಕ್ಕೆ ಕರೆದೊಯ್ಯುತ್ತದೆ. ಗುರು ಶಿಷ್ಯರ ಬಾಂಧವ್ಯಕ್ಕೆ ಕಣ್ಣಂಚುಗಳು ಒದ್ದೆಯಾಗುತ್ತವೆ. ಯೆಸ್​​..  ಗುರು ಶಿಷ್ಯರು ಚಿತ್ರದಲ್ಲಿ ಆ್ಯಕ್ಟ್​ ಮಾಡಿರೋ ಎಲ್ಲ ಕಲಾವಿದ್ರ ಪರಿಶ್ರಮ ಇಂದು ಪ್ರೂವ್​ ಆಗಿದೆ.

ಒಟ್ಟು ಒಂಬತ್ತು ಖೋಖೋ ಆಟಗಾರರು ಬಾಲ ಕಲಾವಿದರಾಗಿ ಮಿಂಚಿದ್ದಾರೆ. ಹಳ್ಳಿ ಹುಡುಗಿ ಸೂಜಿಯಾಗಿ ನಿಶ್ವಿಕಾ ಪ್ಯಾರ್​​ ಕಹಾನಿ ಇಂಪ್ರೆಸ್ಸಿವ್ ಆಗಿದೆ. ಪಿ.ಟಿ ಮಾಸ್ತರ್​ ರೋಲ್​ನಲ್ಲಿ ಶರಣ್​​ ಪ್ರಮಾಣಿಕ ಪ್ರಯತ್ನಕ್ಕೆ ಪ್ರೇಕ್ಷಕರು ಶಹಬ್ಬಾಸ್​ ಎಂದಿದ್ದಾರೆ. ಥಿಯೇಟರ್​​ ಒಳಗಿದ್ದವರೆಲ್ಲಾ ಸೆಕೆಂಡ್​ ಆಫ್​​ನಲ್ಲಿ ಸ್ಟನ್​ ಆಗಿ ಸಿನಿಮಾ ನೋಡಿದ್ದಾರೆ.  ನಿರ್ದೇಶಕ ಜಡೇಶ ಕೆ. ಹಂಪಿ ನಿರ್ದೇಶನಕ್ಕೆ ಚಿತ್ರ ರಸಿಕರು ಕ್ಲೀನ್​ ಬೋಲ್ಡ್​ ಆಗಿದ್ದಾರೆ.

ಗುರು ಶಿಷ್ಯರು ಪ್ಲಸ್ ಪಾಯಿಂಟ್ಸ್

ಗಟ್ಟಿ ಕಥೆ. ಅದ್ಭುತ ಸಾರಾಂಶ

ಹಳ್ಳಿ ಸೊಗಡಿನ ದೇಸಿ ಕಥೆ

ಇಂಪಾದ ಹಾಡುಗಳು

ಕುತೂಹಲಕಾರಿ ಖೋಖೋ ಆಟ

ಮೈ ಬೆವರಿಳಿಸೋ ಆಟ

ಥ್ರಿಲ್ಲಿಂಗ್​​​ ಸೆಕೆಂಡ್​ ಆಫ್​​

ಎಮೋಷನಲ್​ ಸೀನ್ಸ್​​​​​​

ಗುರು ಶಿಷ್ಯರ ಸಂಬಂಧ

ಅಮೇಜಿಂಗ್​ ಸಿನಿಮಾಟೋಗ್ರಫಿ

ಗುರು ಶಿಷ್ಯರು ಮೈನಸ್ ಪಾಯಿಂಟ್ಸ್

ಕನ್ನಡದಲ್ಲಿ ಸ್ಪೋರ್ಟ್​​ ಒರಿಯೆಂಟೆಡ್​​ ಮೇಲೆ ಅನೇಕ ಸಿನ್ಮಾಗಳು ಬಂದಿವೆ.  ಅದ್ರಲ್ಲಿ ಮಾಡರ್ನ್​ ಗುರು ಶಿಷ್ಯರು ವಿಭಿನ್ನ ಸಾಲಿನಲ್ಲಿ ನಿಲ್ಲಲಿದೆ. ಕಾಮಿಡಿಗೆ ಒತ್ತು ಕೊಡದಿದ್ದರು, ಪ್ರೇಕ್ಷಕರು ಶರಣ್​ ಅವ್ರಿಂದ ಅದನ್ನೇ ನಿರೀಕ್ಷೆ ಮಾಡ್ತಾರೆ. ಎನಿವೇ, ಎಲ್ಲೂ ಕಥೆ ನೀರಸ ಎನಿಸದೆ ಕೊನೆಯವರೆಗೂ ಕೈ ಹಿಡಿದು ಕರೆದುಕೊಂಡು ಹೋಗುತ್ತೆ. ಹೊಚ್ಚ ಹೊಸ ಕಾಪಿ ಎನ್ನಬಹುದು. ಅಂತೂ ಇಡೀ ಚಿತ್ರತಂಡ ಫಸ್ಟ್​ ಡೇ ಫಸ್ಟ್​ ಶೋ ಪ್ರೆಕ್ಷರೊಟ್ಟಿಗೆ ಸಿನ್ಮಾ ನೋಡಿ ಎಂಜಾಯ್​ ಮಾಡಿದ್ರು. ಆ್ಯಕ್ಟ್​ ಮಾಡಿದ ಹುಡ್ಗರೆಲ್ಲಾ ಅತ್ತು ಅತ್ತು ಕಣ್ಣೀರಾಕಿದ್ರು.

ಗುರು ಶಿಷ್ಯರು ಪವರ್ ಟಿವಿ ರೇಟಿಂಗ್: 4.5/5

ಗುರು ಶಿಷ್ಯರು ಫೈನಲ್ ಸ್ಟೇಟ್​ಮೆಂಟ್:

ಕೆಜಿಎಫ್​ ಆರ್​ಆರ್​ಆರ್​​, ವಿಕ್ರಾಂತ್​ ರೋಣ ಅಂತಹ ದೊಡ್ಡ ಸಿನ್ಮಾಗಳನ್ನು ಮೈಂಡ್​ನಲ್ಲಿಟ್ಟುಕೊಳ್ಳದೆ ಥಿಯೇಟರ್​ಗೆ  ಹೋದ್ರೆ, ದಿ ಬೆಸ್ಟ್​ ಸಿನ್ಮಾ. ನಿಶ್ವಿಕಾ, ಶರಣ್​​, ಹಾಗೂ ಸಿನ್ಮಾದಲ್ಲಿ ನಟಿಸಿದ ಖೋಖೋ ಕ್ರೀಡಾಪಟುಗಳಿಗೆಲ್ಲಾ ಈ ಸಿನಿಮಾ ಬಿಗ್​ ಬ್ರೇಕ್​​ ಸಿನಿಮಾ. ಅಂತೂ ಮಿಸ್​ ಮಾಡದೇ ಸಿನಿಮಾ ನೋಡಿ. ಮಸ್ತ್​ ಎಂಜಾಯ್​ ಮಾಡಿ.

ರಾಕೇಶ್​ ಆರುಂಡಿ, ಫಿಲ್ಮ್​​ ಬ್ಯೂರೋ, ಪವರ್​ ಟಿವಿ.

RELATED ARTICLES

Related Articles

TRENDING ARTICLES