ಬೆಳಗಾವಿ : ಇತ್ತೀಚಿಗೆ ಗೋವಾದಲ್ಲಿ ಆಯೋಜಿಸಿದ್ದ ನೈಸರ್ಗಿಕ ಕೃಷಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ”ಗೋವಾ ರಾಜ್ಯ ಬೆಳಗಾವಿಯ ತರಕಾರಿ ಮೇಲೆ ಅವಲಂಬಿತವಾಗಿದೆ. ಗೋವಾದ 1300ಕ್ಕೂ ಹೆಚ್ಚು ತರಕಾರಿ ಮಾರಾಟಗಾರರು ಬೆಳಗಾವಿಯಿಂದ ಸಗಟು ಮಾರಾಟಗಾರರ ಖರೀದಿಸಿ, ಸ್ಥಳೀಯ ಮಾರುಕಟ್ಟಗೆ ಪೂರೈಸುತ್ತಾರೆ. ಅದರ ಬದಲು ಗೋವಾ ರಾಜ್ಯದಲ್ಲೇ ಹೆಚ್ಚು ತರಕಾರಿ ಬೆಳೆಯುವಂತಾದರೆ ಗೋವಾ ಸ್ಟೇಟ್ ಹಾರ್ಟಿಕಲ್ಟರ್ ಕಾರ್ಪೋರೇಶನ್ ವತಿಯಿಂದ ಸ್ಥಳೀಯ ರೈತರ ಬೆಳೆಗಳಿಗೆ ಹೆಚ್ಚಿನ ಬೆಲೆ ನೀಡಿ ಖರೀದಿಸಲು ಸಾಧ್ಯವಾಗುತ್ತದೆ ಅಂತ ಪ್ರಮೋದ್ ಸಾವಂತ್ ಹೇಳಿದ್ರು. ಇದೀಗ ಇದೊಂದು ಮಾತು ಗಡಿ ಜಿಲ್ಲೆ ಬೆಳಗಾವಿಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಒಂದು ವೇಳೆ ಅಂದು ಕೊಂಡಂತೆ ಗೋವಾ ಸರ್ಕಾರ ಭವಿಷ್ಯದಲ್ಲಿ ತನಗೆ ಬೇಕಾದ ತರಕಾರಿ ಬೆಳೆಯಲು ಮುಂದಾದ್ರೆ ರಾಜ್ಯ ಸರ್ಕಾರ ಎಚ್ಚೇತ್ತುಕೊಳ್ಳಲೇ ಬೇಕಾಗುತ್ತೆ. ಯಾಕೆಂದರೆ ಬೆಳಗಾವಿ ಜಿಲ್ಲೆಯಿಂದ ಗೋವಾಕ್ಕೆ ಪ್ರತಿ ದಿನ 40-45 ಟ್ರಕ್ ಲೋಡ್ ತರಕಾರಿ ಗೋವಾಕ್ಕೆ ಪೂರೈಕೆಯಾಗುತ್ತದೆ. ಜಿಲ್ಲೆಯ ಬೆಳಗಾವಿ, ಚಿಕ್ಕೋಡಿ, ಸಂಕೇಶ್ವರ, ಘಟಪ್ರಭಾ ಸೇರಿದಂತೆ ವಿವಿಧೆಡೆಗಳಿಂದ ಸುಮಾರು 180ಕ್ಕೂ ಹೆಚ್ಚು ಸಗಟು ವ್ಯಾಪಾರಿಗಳು ಗೋವಾಕ್ಕೆ ತರಕಾರಿ ಪೂರೈಕೆ ಮಾಡುತ್ತಾರೆ. ಹೀಗಾಗಿ ಗೋವಾ ಸರ್ಕಾರ ತರಕಾರಿ ಖರೀದಿಯನ್ನ ನಿಲ್ಲಿಸಿದ್ರೆ ಕುಂದಾನಗರಿ ಅನ್ನದಾತರು ಸಂಕಷ್ಟಕ್ಕೆ ಸಿಲುಕೋದು ಗ್ಯಾರಂಟಿ.
ಇನ್ನು ಗೋವಾ ಹೊರತಾಗಿ, ಕರ್ನಾಟಕದ ಹಾಗೂ ಅನ್ಯ ರಾಜ್ಯಗಳ ಮಾರುಕಟ್ಟೆಗೆ ಸೂಕ್ತ ಸಾಗಾಟ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕಾದ ಅಗತ್ಯವಿದೆ ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಎಚ್ಚೆತ್ತುಕೊಳ್ಳುವ ಅನಿವಾರ್ಯತೆ ಇದೆ.
ಅಣ್ಣಪ್ಪ ಬಾರ್ಕಿ ಪವರ್ ಟಿವಿ ಬೆಳಗಾವಿ