Thursday, January 23, 2025

ಕಾಂಗ್ರೆಸ್ ಅನ್ನು ಬೇರು ಸಮೇತ ಕಿತ್ತು ಹಾಕಬೇಕು : ಸಿ.ಟಿ.ರವಿ

ಚಿಕ್ಕಮಗಳೂರು : ಪೇ ಪಾರ್ ಕಾಂಗ್ರೆಸ್ ಮೇಡಂ ಅಂತಿತ್ತಲ್ಲ, ಅದೇ ಗುಂಗಿನಲ್ಲಿ ಪೇ ಸಿಎಂ ಅಂತಾ ಹಾಕಿದ್ದಾರೆ ಎಂದು ಕಾಂಗ್ರೆಸ್ಸಿನ ಪೇ ಸಿಎಂ ಪೋಸ್ಟರ್ ಗೆ ಸಿ.ಟಿ.ರವಿ ಟಾಂಗ್ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕವನ್ನ ಕಪ್ಪ ಕೊಡುವಂತಹ ಎಟಿಎಂ ಮಾಡಿಕೊಂಡಿದ್ರು, ಪೇ ಪಾರ್ ಕಾಂಗ್ರೆಸ್ ಮೇಡಂ ಅಂತಿತ್ತಲ್ಲ, ಅದೇ ಗುಂಗಿನಲ್ಲಿ ಪೇ ಸಿಎಂ ಅಂತಾ ಹಾಕಿದ್ದಾರೆ. ಪೇ ಫಾರ್ ಕಾಂಗ್ರೆಸ್ ಮೇಡಂ.. ಮೇಡಂ ಅದ್ರೆ ಯಾರು ಗೊತ್ತಿದ್ದೀಯಾ…! ನಮ್ಮ ಲೋಕಲ್ ಅಲ್ಲ ಅವ್ರು ಇಂಟರ್ ನ್ಯಾಷನಲ್ ಮೇಡಂ. ಪೇ ಸಿಎಂ ಸೇರಿ ಇದೆ, ಆದ್ರೆ ಅವ್ರು ಪೋಟೋ ಒಂದು ತಪ್ಪಾಗಿ ಹಾಕಿದ್ದಾರೆ ಎಂದರು.

ಇನ್ನು, ಅಧಿನಾಯಕಿ ಪೋಟೋ ಹಾಕಬೇಕಿತ್ತು, ಬೈ ಮಿಸ್ಟೆಕ್ ಬೊಮ್ಮಾಯಿ ಪೋಟೋ ಹಾಕಿದ್ದಾರೆ. ಈ ಹಿಂದೆ ಕಾಂಗ್ರೆಸ್ ಅನ್ನು ಬೇರು ಸಮೇತ ಕಿತ್ತು ಹಾಕಬೇಕು. ನರೇಂದ್ರ ಮೋದಿ ಕೈ ಬಲ ಪಡಿಸಬೇಕೆಂದು ಸಿದ್ದರಾಮಯ್ಯವರೇ ಹೇಳಿದ್ರು. ಒಮ್ಮೆ ಭಾಷಣದಲ್ಲಿ ಸಿದ್ದರಾಮಯ್ಯನವರೇ ಹೇಳಿದ್ದಾರೆ ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES