Monday, December 23, 2024

ಜೆಡಿಎಸ್ ಮುಖಂಡನಿಂದ ಇಬ್ಬರ ಬರ್ಬರ ಹತ್ಯೆ.!

ತುಮಕೂರು; ದೇವಸ್ಥಾನದ ವಿಚಾರಕ್ಕೆ ಗಲಾಟೆ ವಿಕೋಪಕ್ಕೆ ತಿರುಗಿ ಇಬ್ಬರ ಕೊಲೆಯಲ್ಲಿ ಅಂತ್ಯವಾದ ಘಟನೆ ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಗ್ರಾಮದಲ್ಲಿ ನಡೆದಿದೆ.

ರಾಮಾಂಜನಯ್ಯ (48), ಶಿಲ್ಪಾ (38) ಕೊಲೆಯಾದ ಮೃತರಾದರೆ, ಗ್ರಾಮಸ್ಥ ಮಲ್ಲಿಕಾರ್ಜುನ ಗಂಭೀರ ಗಾಯಗೊಂಡಿದ್ದಾನೆ. ಮಿಡಿಗೇಶಿ ಗ್ರಾಮದಲ್ಲಿ ಗಣಪತಿ ದೇವಸ್ಥಾನ ಜಾಗ ವಿಚಾರವಾಗಿ ಜೆಡಿಎಸ್​ ಮುಖಂಡ ಶ್ರೀಧರ್ ಗುಪ್ತ ಎಂಬಾತ ದೇವಸ್ಥಾನದ ಜಾಗ ಕಬಳಿಸಲು ಯತ್ನಿಸಿದ್ದ, ಇದಕ್ಕೆ ಅವಕಾಶ ಮೊಡಿಕೊಡದೆ ದೇವಸ್ಥಾನದ ಜಾಗ ಉಳಿಸಿಕೊಳ್ಳಲು ರಾಮಾಂಜನಯ್ಯ, ಶಿಲ್ಪಾ ಹಾಗೂ ಗ್ರಾಮಸ್ಥರು ಹೋರಾಟ ನಡೆಸಿ ಕೋರ್ಟ್ ಮೆಟ್ಟಿಲೇರಿದ್ದರು.

ನ್ಯಾಯಾಲಯದ ತೀರ್ಪು ರಾಮಾಂಜನಯ್ಯ, ಶಿಲ್ಪಾ ಹಾಗೂ ಗ್ರಾಮಸ್ಥರ ಪರವಾಗಿ ಬಂದ ಹಿನ್ನಲೆಯಲ್ಲಿ ಶಿಲ್ಪಾ ಹಾಗೂ ರಾಮಾಂಜನಯ್ಯ ವಿರುದ್ಧ ಶ್ರೀಧರ್ ಗುಪ್ತ ಸಿಟ್ಟು ನೆತ್ತಿಗೆರೊವಾಗೆ ಮಾಡಿತ್ತು. ಈ ಕಾರಣಕ್ಕೆ ಶ್ರೀಧರ್​ ಹ್ಯಾಂಡ್​ ಟೀಮ್​ ಬರ್ಬರ ಹತ್ಯೆ ನಡೆದಿದೆ.

ನಿನ್ನೆ ರಸ್ತೆಯಲ್ಲಿ ಮಾತನಾಡುತ್ತಿದ್ದಾಗ ಏಕಾಏಕಿ ನುಗ್ಗಿ ಶ್ರೀಧರ್​ ಟೀಮ್​ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈಯಲಾಗಿದೆ. ಸ್ಥಳಕ್ಕೆ ಮಿಡಿಗೇಶಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನ ಮಧುಗಿರಿ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ.

ಕೊಲೆಗೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇನ್ನುಳಿದ ಆರೋಪಿಗಳಿಗೆ ಪೊಲೀಸರು ತಲಾಷ್​​ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES