Sunday, November 3, 2024

ಇಂದು ಕೇರಳ ಬಂದ್​; NIA ದಾಳಿ ಖಂಡಿಸಿ ಹಲವು ರಾಜ್ಯಗಳಲ್ಲಿ PFI ಹಿಂಸಾಚಾರ

ಕೇರಳ: ದೇಶದ 11 ರಾಜ್ಯಗಳಲ್ಲಿ ನಿನ್ನೆ ಪಿಎಫ್​ಐ ಹಾಗೂ ಎಸ್​ಡಿಪಿಐ ಮುಖಂಡರ ಮನೆ ಮೇಲೆ ಹಾಗೂ ಕಚೇರಿಗಳ ಮೇಲೆ ಎನ್​ಐಎ(ರಾಷ್ಟ್ರೀಯ ತನಿಖಾ ದಳ) ದಾಳಿ ನಡೆಸಿ ಸುಮಾರು 100 ಕ್ಕೂ ಹೆಚ್ಚು ಕಾರ್ಯಕರ್ತರನ್ನ ಬಂಧಿಸಿರುವುದನ್ನ ಖಂಡಿಸಿ ಇಂದು ದೇಶ ಹಲವು ರಾಜ್ಯಗಳಲ್ಲಿ ಪಿಎಫ್​ಐ ಮುಖಂಡರು ಹಿಂಸಾಚಾರ ನಡೆಸಿದ್ದಾರೆ.

ಕೇರಳ, ಪುದುಚೇರಿ, ತಮಿಳುನಾಡಿನಲ್ಲಿ ಪಿಎಫ್​ಐ ಹಾಗೂ ಎಸ್​ಡಿಪಿಐ ಮೇಲಿನ ದಾಳಿ ಖಂಡಿಸಿ ಹಿಂಸಾಚಾರ ಕಿಡಿಗೇಡಿಗಳಿಂದ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಕೊಯಮತ್ತೂರಿನಲ್ಲಿರುವ ಬಿಜೆಪಿ ಕಚೇರಿ ಮೇಲೆ ಪಿಎಫ್​ಐ ಕಾರ್ಯಕರ್ತರು ಪೆಟ್ರೋಲ್‌ ಬಾಂಬ್‌ ದಾಳಿ ನಡೆಸಿದ್ದಾರೆ ಎಂದು ಸಿಎನ್​ಎನ್​ ವರದಿ ಮಾಡಿದೆ.

ಅದರಂತೆ ಕೇರಳದ ತಿರುವನಂತಪುರಂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್​ಐ) ಇಂದು ಕೇರಳ ಬಂದ್​ಗೆ ಕರೆ ನೀಡಿದೆ. ಬಂದ್‌ಗೆ ಕರೆ ನೀಡಿದ ಹಿನ್ನಲೆಯಲ್ಲಿ ಚಲಿಸುತ್ತಿದ್ದ ಆಟೋ ರಿಕ್ಷಾ ಮತ್ತು ಕಾರನ್ನ ಪಿಎಫ್​ಐ ಸಂಘಟನೆ ಮುಖಂಡರು ಕಲ್ಲು ತೂರಾಟ ನಡೆಸಿ ಜಖಂ ಮಾಡಿದ್ದಾರೆ ಎಂದು ವರದಿ ತಿಳಿಸಿವೆ.

RELATED ARTICLES

Related Articles

TRENDING ARTICLES