ಚಿಕ್ಕಬಳ್ಳಾಪುರ: ಲೋಕಾಯುಕ್ತ ಅಧಿಕಾರಿಗಳ ಸೋಗಿನಲ್ಲಿ ತಾಲ್ಲೂಕು ಕಚೇರಿ ಮೇಲೆ ದಾಳಿ ನಡೆಸಿದ ಘಟನೆ ಚಿಕ್ಕಬಳ್ಳಾಪುರ ನಗರದ ತಹಶೀಲ್ದಾರ ಕಚೇರಿಯಲ್ಲಿ ನಡೆದಿದೆ.
ನಾವು ಲೋಕಾಯುಕ್ತ ಅಧಿಕಾರಿಗಳು ಎಂದೇಳಿ ತಾಲೂಕು ಕಚೇರಿಗೆ ಆಗಮಿಸಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರಿಗೆ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಈ ನಕಲಿ ಅಧಿಕಾರಿ ಬಟ್ಟೆ, ಕಾರು, ಕೈಯಲ್ಲಿ ಫೈಲ್ ಹಿಡಿದು ಎಂಟ್ರಿಕೊಟ್ಟಿದ್ದನ್ನ ನೋಡಿ ಕೆಲವು ಕ್ಷಣ ಅಲ್ಲಿನ ಅಧಿಕಾರಿಗಳಿಗೆ ಗಾಬರಿ ನಿಜ ಲೋಕಾಯುಕ್ತ ಎನ್ನುಕೊಂಡಿದ್ದಾರೆ.
ಆದರೆ, ಈ ನಕಲಿ ಲೋಕಾಯುಕ್ತ ಅಧಿಕಾರಿಯ ನಡೆಯ ಬಗ್ಗೆ ಅನುಮಾನಗೊಂಡ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಐಡಿ ಕಾರ್ಡ್ ತೋರಿಸಿ ಎಂದ್ನೋ ಆಗ ಎಲ್ಲವೂ ನಕಲಿ ಅಧಿಕಾರಿಯ ಪ್ಲ್ಯಾನ್ ಉಲ್ಟಾಪಲ್ಟಾವಾಗಿದೆ. ಐಡಿ ಕಾರ್ಡ್ ಕೇಳುತ್ತಿದ್ದಂತೆ ಎದ್ನೋ ಬಿದ್ನೋ ಅಂತ ನಕಲಿ ಅಧಿಕಾರಿ ಓಡಿ ಹೋಗಿದ್ದಾನೆ.
ಸೇನಾಧಿಕಾರಿಯಾಗಿ ನಿವೃತ್ತರಾದ ಬಳಿಕ ಗಣಪತಿ ಶಾಸ್ತ್ರಿ ತಹಶೀಲ್ದಾರ್ ಹುದ್ದೆ ಅಲಂಕರಿಸಿದ್ದಾರೆ. ಜಿಲ್ಲೆಯಲ್ಲಿ ದಕ್ಷ, ಪ್ರಾಮಾಣಿಕಯಿಂದ ಹೆಸರುಗಳಿಸಿದ್ದಾರೆ. ಎಲ್ಲರಂತೆ ಈ ಅಧಿಕಾರಿ ಎಂದು ಬೆದರಿಸಲು ಬಂದು ಪೇಚಿಗೆ ನಕಲಿ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ. ಈ ಬಗ್ಗೆ ತಹಶೀಲ್ದಾರ್ ಗಣಪತಿಶಾಸ್ತ್ರಿಯಿಂದ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಅಡಿ ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.