Wednesday, January 22, 2025

PFI ಮುಖಂಡರ ಮೇಲಿನ 175 ಕೇಸ್​ ವಾಪಸ್​ ಪಡೆದಿದ್ದ ಸಿದ್ದರಾಮಯ್ಯ

ದೆಹಲಿ: ದೇಶಾದ್ಯಂತ ಪಿಎಫ್ಐ, ಎಸ್​​ಡಿಎಫ್​ಐ ಮೇಲೆ ಎನ್ಐಎ ದಾಳಿ ಹಿನ್ನಲೆಯಲ್ಲಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಪಿಎಫ್ಐ ಮತ್ತು ಎಸ್​​ಡಿಎಫ್​ಐ ಮೇಲಿನ ದಾಳಿ ಸ್ವಾಗತಾರ್ಹ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ಪಿಎಫ್​ಐ ಕಾರ್ಯಕರ್ತರ ಮೇಲಿನ ಕೇಸ್ ವಾಪಾಸ್ ಪಡೆದಿದ್ದರು. 175 ಪ್ರಕರಣ ಅವರ ಅವಧಿಯಲ್ಲಿ ಕ್ಯಾಬಿನೆಟ್ ನಲ್ಲಿ ವಾಪಾಸ್ ಪಡೆಯಲಾಯಿತು. ಕರ್ನಾಟಕದಲ್ಲಿ ಪಿಎಫ್ಐ, ಎಸ್​​ಡಿಎಫ್​ಐ ಆತ್ಮ ಸ್ಥೈರ್ಯ ತುಂಬಿದ್ದು ಕಾಂಗ್ರೆಸ್ ಸರ್ಕಾರ ಎಂದು ಹೇಳಿದರು.

ಪಿಎಫ್ಐ, ಎಸ್​​ಡಿಎಫ್​ಐ ಕಾರ್ಯಕರ್ತರ ವಾಪಸ್​​ ತೆಗೆದುಕೊಂಡ 175 ಕೇಸ್​ನಲ್ಲಿ ಹಲವು ಹಿಂದು ಕಾರ್ಯಕರ್ತರ ಹತ್ಯೆಯಲ್ಲಿ ಭಾಗಿಯಾಗಿದ್ದರು. ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್​​ ಮೇಲಿನ ದಾಳಿಯಲ್ಲಿ ಅವರ ಕೈವಾಡವಿತ್ತು. ಅದಕ್ಕೆ ಸೂಕ್ಷ ಸಾಕ್ಷಾಧಾರ ಸಿಕ್ಕಿದೆ. ಹಾಗಾಗಿ ಪ್ರಕರಣವನ್ನ ಎನ್ಐಎಗೆ ನೀಡಲಾಯ್ತು. ಅಂತರ ರಾಜ್ಯ ಇಂಟರ್ ಲಿಂಕ್ ಕನೆಕ್ಷನ್ ಇರೋ ಹಿನ್ನಲೆ ದೇಶದ್ಯಂತ ಎನ್​ಐಎ(ರಾಷ್ಟ್ರೀಯ ತನಿಖಾ ದಳ) ಅತಿ ದೊಡ್ಡ ದಾಳಿ ನಡೆಸಿದೆ ಎಂದು ಪ್ರತಾಪ್​ ಸಿಂಹ ಹೇಳಿದರು.

ಇನ್ನು ಪಿಎಫ್ಐ, ಎಸ್​​ಡಿಎಫ್​ಐ ಕಾರ್ಯಕರ್ತರ ನ್ನ ಬಂದಿಸಿದ ಹಿನ್ನಲೆ ಪ್ರತಿಭಟನೆ ಪಿಎಫ್ಐ, ಎಸ್​​ಡಿಎಫ್​ಐ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ಇಂತವರನ್ನ ತಡೆಯೋ ಶಕ್ತಿ ರಾಜ್ಯ ಸರ್ಕಾರಕ್ಕಿದೆ ಎಂದು ಸಂಸದರು ತಿಳಿಸಿದರು.

RELATED ARTICLES

Related Articles

TRENDING ARTICLES