Monday, December 23, 2024

SDPI-PFI ಸಂಘಟನೆ ಬ್ಯಾನ್​ಗೆ ಸಿದ್ದಲಿಂಗ ಸ್ವಾಮೀಜಿ ಒತ್ತಾಯ

ಕಲಬುರಗಿ; ದೇಶದ್ಯಾಂತ ಪಿಎಫ್​ಐ, ಎಸ್​ಡಿಪಿಐ ಸಂಘಟನೆ ಮೇಲೆ ಎನ್​ಐಯ ದಾಳಿ ವಿಚಾರವಾಗಿ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ.

ಕೆಲವು ದಿನಗಳಿಂದ ಉಗ್ರಗಾಮಿಗಳ ಜೊತೆ ಸಂಪರ್ಕದಲ್ಲಿದ್ದ ಪಿಎಫ್​ಐ, ಎಸ್​ಡಿಪಿಐ ಸಂಘಟನೆ ಮತ್ತು ಪಕ್ಷದ‌ ಮೇಲೆ ಎನ್​ಐಎ ದಾಳಿ ನಡೆಸಿದೆ. ಇದು ಅತ್ಯಂತ ಸ್ವಾಗತಾರ್ಹ ವಿಷಯವಾಗಿದೆ. ದಾಳಿ ಸಂದರ್ಭದಲ್ಲಿ ಪುಡಿ ರಾಜಕಾರಣಿಗಳು ಎನ್​ಐಎ ವಿರುದ್ಧ ರಕ್ಷಿಸಿಕೊಳ್ಳಲು ಪ್ರತಿಭಟನೆ ಹಾದಿ ತುಳಿದಿವೆ.

ಸರ್ಕಾರ ಯಾವುದೇ ಪ್ರತಿಭಟನೆಗೆ ಜಗ್ಗದೆ ಇಂತಹ ಸಂಘಟನೆಗಳಿಗೆ ತಕ್ಕಪಾಠ ಕಲಿಸಬೇಕಾಗಿದೆ. ಇದನ್ನ ಸರ್ಕಾರ ಮಾಹಿತಿ ಕಲೆ ಹಾಕುತ್ತಿದೆ. ಇಂತಹ ಪಕ್ಷಗಳು ದೇಶಕ್ಕೆ ದೊಡ್ಡ ಮಾರಕ. ಭಾರತ ದೇಶದ ಹಿತದೃಷ್ಟಿಯಿಂದ ಪಿಎಫ್​ಐ, ಎಸ್​ಡಿಪಿಐ ಸಂಘಟನೆ ಬ್ಯಾನ್ ಮಾಡಬೇಕು. ಇಂತವ್ರನ್ನ ಜೈಲಿಗಟ್ಟಿದ್ರೆ ಮಾತ್ರ ಭಾರತದ ಪ್ರಜೆಗಳು ಸುರಕ್ಷಿತವಾಗಿ ಇರಲು ಸಾಧ್ಯ ಎಂದು ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.

ರಾಜ್ಯದ ಮಂಗಳೂರು, ಬೆಂಗಳೂರು, ಕಲ್ಬುರ್ಗಿ, ಶಿವಮೊಗ್ಗ ಸೇರಿಂದತೆ ನಾನಾ ಕಡೆ ಇಂದು ಎನ್​ಐಎ ದಾಳಿ ನಡೆಸಿದೆ. ಈ ದಾಳಿಯಲ್ಲಿ ಹಲವರನ್ನ ವಶಕ್ಕೆ ಪಡೆಯಲಾಗಿದೆ.

RELATED ARTICLES

Related Articles

TRENDING ARTICLES