Monday, December 23, 2024

ಭಾರತ Vs ಆಸ್ಟೇಲಿಯಾ 3ನೇ ಟಿ-20 ಪಂದ್ಯ; ಅಭಿಮಾನಿಗಳ ಮೇಲೆ ಲಾಠಿ ಚಾರ್ಜ್​​

ತೆಲಂಗಾಣ: ಸೆಪ್ಟೆಂಬರ್ 25 ರಂದು ನಡೆಯಲಿರುವ ಆಸ್ಟೇಲಿಯಾ-ಭಾರತ ನಡುವಿನ ಟಿ-20 ಪಂದ್ಯದ ಟಿಕೆಟ್ ಖರೀದಿಸುವ ವೇಳೆ ನೂಕು ನುಗ್ಗಲು ಆದ ಹಿನ್ನಲೆಯಲ್ಲಿ ಕ್ರಿಕೆಟ್​ ಅಭಿಮಾನಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್​ ಮಾಡಿದ್ದಾರೆ.

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೆ.25 ರಂದು ಆಸ್ಟ್ರೇಲಿಯಾ ವಿರುದ್ಧ ಭಾರತ 3 ನೇ ಟಿ-20 ಪಂದ್ಯ ಆಡಲಿದೆ. ಪಂದ್ಯ ವಿಕ್ಷೀಸಲು ಟಿಕೆಟ್​​ ಪಡೆಯಲು ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಜಮಾಯಿಸಿದ ಹಿನ್ನಲೆಯಲ್ಲಿ ಮೈದಾನದಲ್ಲಿ ಕಾಲ್ತುಳಿತ ಸಂಭವಿಸಿದೆ. ಈ ವೇಳೆ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.

ಕ್ರೀಡಾಂಗಣದ ಹೊರಗೆ ಅಭಿಮಾನಿಗಳ ಮೇಲೆ ಲಾಠಿ ಚಾರ್ಜ್ ಮಾಡಿದ್ದರಿಂದ ಕೆಲವು ಸಮಯ ಗೊಂದಲ ಉಂಟಾಗಿತ್ತು. ಲಾಠಿ ಚಾರ್ಜ್​ನಿಂದ ಹಲವರು ಗಾಯಗೊಂಡಿದ್ದಾರೆ.

ಕಳೆದ ಮೂರು ವರ್ಷಗಳಿಂದ ಹೈದರಾಬಾದ್‌ನಲ್ಲಿ ಯಾವುದೇ ಪಂದ್ಯ ಹಮ್ಮಿಕೊಳ್ಳದ ಹಿನ್ನಲೆಯಲ್ಲಿ ಅಭಿಮಾನಿಗಳು ಅಂತಹ ಅಂತರರಾಷ್ಟ್ರೀಯ ಕ್ರಿಕೆಟ್‌ ವೀಕ್ಷಿಸಲು ಕಾತುರರಾಗಿದ್ದಾರೆ. ಲಾಠಿ ಚಾರ್ಜ್​ ಖಂಡಿಸಿ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್‌ನ ಹೊಣೆ ಹೊರಬೇಕು. ರಾಜ್ಯ ಮಂಡಳಿಯು ಪರಿಸ್ಥಿತಿಯನ್ನು ಅರಿತುಕೊಳ್ಳಬೇಕು ಮತ್ತು ಟಿಕೆಟ್ ಪ್ರಕ್ರಿಯೆಯನ್ನು ಸುಗಮಗೊಳಿಸಲು ಯೋಜನೆಗಳನ್ನು ಮಾಡಬೇಕೆಂದು ಕ್ರೀಡಾಭಿಮಾನಿಗಳು ಆಗ್ರಹಿಸಿದರು.

RELATED ARTICLES

Related Articles

TRENDING ARTICLES