Monday, December 23, 2024

ನಿಶ್ವಿಕಾನ ಆಡಿಕೊಳ್ಳೋಕೂ ಮುನ್ನ ಆಕೆ ಶ್ವಾನಪ್ರೇಮ ನೋಡಿ

ಚಂದನವನದ ಗಾರ್ಜಿಯಸ್​ ನಟಿ ನಿಶ್ವಿಕಾ ನಾಯ್ಡು. ಬೋಲ್ಡ್​ ಅಂಡ್​ ಬ್ಯೂಟಿಫುಲ್​ ಚೆಲುವೆ ನಿಶ್ವಿಕಾ ಆ್ಯಕ್ಟಿಂಗ್​​​ ಮೂಲಕ ಪಡ್ಡೆ ಹೈಕಳ ಹಾರ್ಟ್​​ ಬಿಟ್​​​ ಆಗಿದ್ದಾರೆ. ಆದ್ರೆ ಇತ್ತೀಚೆಗೆ ವೈರಲ್​ ಆದ ಪಾರ್ಟಿ ವೀಡಿಯೋ ನಂತ್ರ ಆಡಿಕೊಂಡವ್ರೆ ಜಾಸ್ತಿ. ಅದೇನೆ ಇರಲಿ, ಇದ್ರ ಹೊರತಾಗಿ, ನಿಶ್ವಿಕಾ ಬಗ್ಗೆ ಗೊತ್ತಿಲ್ಲದ ಜೀವನ ಪ್ರೀತಿ ಬಗ್ಗೆ ಹೇಳಲೇಬೇಕು. ಯೆಸ್​​​.. ನಿಮಗೂ ನಿಷ್ಟವಾಗೊ ನಿಶ್ವಿಕಾ ತುಂಟತನದ ಬಗ್ಗೆ ತಿಳ್ಕೋಬೇಕಾ..? ಈ ಸ್ಟೋರಿ ಓದಿ.

  • ನಶೆಯಲ್ಲಿ ಹೊಗೆ ಬಿಟ್ಟು ಮೋಜು ಮಸ್ತಿ ಮಾಡಿದ್ರಾ ನಿಶ್ವಿಕಾ..?

ಅಮ್ಮ ಐ ಲವ್​ ಯು ಸಿನಿಮಾ ಮೂಲಕ  ಕನ್ನಡಿಗರ ಎದೆಯಲ್ಲಿ ಹೊಸ ಸಿಂಚನ ಮೂಡಿಸಿದ ಗ್ಲಾಮರಸ್​​ ಗೊಂಬೆ ನಿಶ್ವಿಕಾ. ಪಡ್ಡೆ ಹುಲಿ, ಜೆಂಟಲ್​​​ ಮ್ಯಾನ್​​ ಹಿಟ್ ಸಿನ್ಮಾ ನಂತ್ರ ಗುರು ಶಿಷ್ಯರು ಚಿತ್ರದಲ್ಲಿ ಲಂಗ ದಾವಣಿ ಗೆಟಪ್​​ನಲ್ಲಿ ಮಿಂಚಿದ ಸಹಜ ಸುಂದ್ರಿ. ಸದ್ಯ ಸಖತ್​ ಬ್ಯುಸಿ ನಟಿಯರಲ್ಲಿ ಒಬ್ಬರಾಗಿರೋ ನಿಶ್ವಿಕಾ ಬಗ್ಗೆ ಗೊತ್ತಿಲ್ಲದ ಅನೇಕ ಸಂಗತಿಗಳು ಇವೆ. ಯೆಸ್​​​.. ಈ ಮಾತು ಕೇಳಿದ ತಕ್ಷಣ ಎಲ್ರಿಗೂ ಥಟ್​ ಅಂತಾ ನೆನಪಾಗೋದು ಪಬ್​​ನಲ್ಲಿ ಎಂಜಾಯ್​​ ಮಾಡಿದ ಮೋಜು ಮಸ್ತಿ  ವೀಡಿಯೋ.

ಸಿನಿಮಾ, ಮಾಡೆಲಿಂಗ್​, ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಆ್ಯಕ್ಟಿವ್​ ಆಗಿರೋ ನಿಶ್ವಿಕಾ ಇತ್ತೀಚೆಗೆ ಸಖತ್​ ಟ್ರೋಲ್​ ಆಗಿದ್ರು. ಪಬ್​ ಒಂದರಲ್ಲಿ ನಿಶ್ವಿಕಾ ಮಾಡಿಕೊಂಡ ಎಡ್ಡವಟ್ಟಿನಿಂದ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ರು. ನೆಟ್ಟಿಗರು ನಶೆಯ ಅಮಲಿನಲ್ಲಿ ಮುತ್ತಿಕ್ಕಿದ್ದ ನಿಶ್ವಿಕಾ ವಿಡಿಯೋ ಕಂಡು ಅಸಮಾಧಾನ ವ್ಯಕ್ತಪಡಿಸಿದ್ರು. ಅದೇನೆ ಇರಲಿ, ಇದು ನಿಶ್ವಿಕಾ ಖಾಸಗಿ ಜೀವನ ಅಂತ ಕೆಲವೊಬ್ರು ಸುಮ್ನಾಗಿಬಿಟ್ರು. ಇದ್ರ ಜತೆಗೆ ನಿಶ್ವಿಕಾ ಪರ್ಸನಲ್​ ಲೈಫ್​ ಕೂಡ ಸಕತ್​ ಸುಂದ್ರವಾಗಿದೆ. ಪ್ರಾಣಿಗಳಂದ್ರೆ ಓಡಿ ಹೋಗಿ ಮುತ್ತಿಕ್ಕೋ ನಿಶ್ವಿಕಾ ಇನ್ನೊಂದು ಮುಖ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ.

ದಂತದ ಗೊಂಬೆ ನಿಶ್ವಿಕಾ ಸಿನಿಮಾ ಜತೆಗೆ ತಮ್ಮದೇ ಯ್ಯುಟ್ಯೂಬ್​​ ಚಾನಲ್​​ ಹೊಂದಿದ್ದಾರೆ. ಮನೆಯಲ್ಲಿ ಮುದ್ದಾದ ಶ್ವಾನಗಳ ಜತೆಗೆ ಸದಾ ತುಂಟಾಟ ಆಡೋ ಮಗುವಿನ ಮನಸ್ಸಿಗೆ ಸಿಕ್ಕಾಪಟ್ಟೆ ಲೈಕ್ಸ್​ ಕಮೆಂಟ್ಸ್​ ಹರಿದು ಬರ್ತವೆ. 4 ಲಕ್ಷಕ್ಕೂ ಅಧಿಕ ಇನ್​ಸ್ಟಾಗ್ರಾಂ ಫಾಲ್ಲೋವರ್ಸ್​ ಹೊಂದಿರೋ ನಿಶ್ವಿಕಾ ಫ್ಯಾನ್ಸ್​​ ಜತೆ ಸದಾ ಕನೆಕ್ಟ್​​ ಆಗ್ತಾರೆ. ಮನೆಯಲ್ಲೇ ಮುದ್ದಿನ ನಾಯಿಗಳೊಂದಿಗೆ ಹರಟುತ್ತಾರೆ. ಕುದುರೆಗಳ ಜತೆ ಟೈಮ್​ ಪಾಸ್​ ಮಾಡ್ತಾರೆ. ಹೀಗೆ ಪ್ರಾಣಿಗಳಂದ್ರೆ ನಿಶ್ವಿಕಾಗೆ ಪ್ರಾಣಕ್ಕಿಂತ ಹೆಚ್ಚು.

ನಿಶ್ವಿಕಾ ಮನೆಯಲ್ಲಿ ಕಾಕರ್ಸ್​ ಪಾನಿಯಲ್ ಜಾತಿಯ​​​ ನಾಯಿ ಜತೆಗೆ ಬೀದಿ ಶ್ವಾನಗಳನ್ನು ಅಡಾಪ್ಟ್​​ ಮಾಡಿಕೊಂಡಿದ್ದಾರೆ. ಲಿಯೋ, ಲೂಲು ಎಂದು ಹೆಸ್ರಿಟ್ಟಿರೋ ಮುದ್ದು ನಾಯಿಗಳು ನಿಶ್ವಿಕಾ ಮನೆಗೆ ಬರ್ತಿದ್ದಂತೆ ಓಡಿ ಬರ್ತಾವಂತೆ. ಒಂದ್ಸಲ ಮುದ್ದು ಮಾಡಿದ್ರೆ ಸಾಕು. ಎಂದಿಗೂ ಮರೆಯದ ಗುಣ ಶ್ವಾನಗಳದ್ದು. ಹಾಗಾಗಿ ನಾಯಿಗಳಂದ್ರೆ ನಿಶ್ವಿಕಾಗೆ ಜಾಸ್ತಿ ಪ್ರೀತಿಯಂತೆ. ಏನೇ ಇರಲಿ, ಹೊರಗೊಂದು, ಒಳಗೊಂದು ಪೋಟ್ರೇ ಮಾಡೋ ನಟಿಯರ ನಡುವೆ, ಬೀದಿ ಶ್ವಾನಗಳನ್ನು ಅಡಾಪ್ಟ್​​ ಮಾಡಿಕೊಂಡು ಸಾಕೋ ನಿಶ್ವಿಕಾ ಮನಸ್ಸು ದೊಡ್ಡದು.

ರಾಕೇಶ್​ ಅರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES