Thursday, December 19, 2024

ಎಸ್​ಡಿಪಿಐ, ಪಿಎಫ್​ಐ ಕಚೇರಿಗಳ ಮೇಲೆ NIA ದಾಳಿ

ಮಂಗಳೂರು:  ಮಂಗಳೂರು ಸೇರಿದಂತೆ ದೇಶದ್ಯಾಂತ ಹಲವು ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್ ಐಎ) ಅಧಿಕಾರಿಗಳು ದಾಳಿ ನಡೆಸಿದೆ. ಹಿಂಸಾಚಾರ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ಪ್ರಚೋದಿಸುವ ಆರೋಪದ ಮೇಲೆ ಈ ದಾಳಿ ನಡೆದಿದೆ.

ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ಎಸ್​ಡಿಪಿಐ, ಪಿಎಫ್​ಐ ಕಚೇರಿ ಮೇಲೆ ಹಿಂದೂ ಕಾರ್ಯಕರ್ತ ಪ್ರವೀಣ್​ ನೆಟ್ಟಾರು ಹತ್ಯೆ ಸಂಬಂಧಿಸಿದಂತೆ ದಾಳಿ ನಡೆಸಲಾಗಿದೆ.

ನೆಲ್ಲಿಕಾಯಿ ರಸ್ತೆ ಬಂದ್ ಮಾಡಿ ದಾಳಿಗೆ ಸಿಆರ್​ಪಿಎಫ್​ ಪೊಲೀಸರು ಭದ್ರತೆ ನೀಡಲಾಗಿದೆ.  ರೇಡ್​ ನಡೆದ ಬೆನ್ನಲೆಯಲ್ಲಿ ಎನ್​ಐಎ ವಿರುದ್ಧ ಘೋ ಬ್ಯಾಕ್​ ಎಂದು ಘೋಷಣೆ ಕೂಗುತ್ತಿದ್ದಾರೆ.

ಮಂಗಳೂರಿನ ಎಂಟು ಕಡೆಗಳಲ್ಲಿ ಎನ್ ಐ ಎ ಕಾರ್ಯಾಚರಣೆ ನಡೆಸಲಾಗಿದ್ದು, ಇಂದು ಬೆಳಿಗ್ಗೆ ಸುಮಾರು 3.30ರ ವೇಳೆ ಎನ್ ಐ ಎ ರೇಡ್​ ನಡೆಸಿದೆ. ಇದರಿಂದ ಅರೆಮೀಸಲು ಪಡೆಯಿಂದ ಭಾರೀ ಕಟ್ಟೆಚ್ಚರ ಘೋಷಣೆ ಮಾಡಿದೆ.

RELATED ARTICLES

Related Articles

TRENDING ARTICLES