Wednesday, January 22, 2025

ಬೆಂಗಳೂರಿನ ನಾಲ್ಕು ಕಡೆ NIA ದಾಳಿ

ಬೆಂಗಳೂರು: ಬೆಂಗಳೂರಿನಲ್ಲಿ ಬಾಗಲೂರು, ಪಾದರಾಯನಪುರ, ರಿಚ್ಮಂಡ್ ಟೌನ್, ಟ್ಯಾನರಿ ಸೇರಿದಂತೆ ರಾಜ್ಯದ ಹಲವು ಕಡೆ ಎನ್​ಐಎ ತಂಡ ಎಸ್​ಡಿಪಿಐ ಮೇಲೆ ದಾಳಿ ನಡೆಸಿದೆ.

ಇಂದು ಬೆಳಿಗ್ಗೆ 3 ಗಂಟೆ ಸುಮಾರಿಗೆ ಎಸ್​ಡಿಪಿಐ ಹಾಗೂ ಪಿಎಫ್​ಐ ನಾಯಕರ ಮನೆ ಮೇಲೆ ರೇಡ್​ ಮಾಡಲಾಗಿದ್ದು, ನಾಲ್ವರ ಬಳಿ ಇದ್ದ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದೆ.

ಪಿಎಫ್​ಐ ಹಾಗೂ ಎಸ್​ಡಿಪಿಐ ಕಚೇರಿಗೆ ಸುಮಾರು 60 ಕೋಟಿ ಮೌಲ್ಯದ ಹಣಕಾಸು ವ್ಯವಹಾರ ನಡೆದಿದೆ ಎಂದು ಇಡಿ ಹೇಳಿತ್ತು. ಈ ಹಿನ್ನೆಲೆಯಲ್ಲಿ ಇಂದು ರಾಜ್ಯ ಸೇರಿದಂತೆ ದೇಶದ 10 ರಾಜ್ಯಗಳಲ್ಲಿ ಎನ್​ಐಎ ದಾಳಿ ನಡೆಸಿ 100 ಕ್ಕೂ ಅಧಿಕ ಎಸ್​ಡಿಪಿಐ ಮುಖಂಡರನ್ನ ಬಂಧಿಸಿದೆ.

ಪಿಎಫ್​ಐ ಸಂಘಟನೆಗೆ ವಿದೇಶದಿಂದ ಕೋಟಿ ಕೋಟಿ ಹಣ ಹರಿದು ಬಂದಿದೆ ಎಂದು ಮೊದಲಿನಂದ ಆರೋಪವಿತ್ತು. ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡುನಲ್ಲಿ ಹಿಂಸಾಚಾರ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ಪ್ರಚೋದಿಸುವ ಆರೋಪದ ಮೇಲೆ ಈ ದಾಳಿ ನಡೆದಿದೆ.

RELATED ARTICLES

Related Articles

TRENDING ARTICLES