Sunday, May 19, 2024

ವಿಶ್ವವಿಖ್ಯಾತ ಮೈಸೂರು ದಸರಾಗೆ ದಿನಗಣನೆ

ಮೈಸೂರು : ನಾಡಹಬ್ಬ ದಸರಾ ಒಂದು ಕಡೆಯಾದ್ರೆ, ಮತ್ತೊಂದು ಕಡೆ ರಾಜ ಪರಂಪರೆಯ ದಸರಾಗೆ ಭರ್ಜರಿ ಸಿದ್ಧತೆಗಳು ಅರಮನೆಯಲ್ಲಿ ನಡೆಯುತ್ತಿವೆ. ಖಾಸಗಿ ದರ್ಬಾರ್ 26 ರಂದು ನಡೆದ್ರೆ, ದಸರಾಗೂ ಅಂದೇ ಚಾಲನೆ ಸಿಗಲಿದೆ. ಬೆಳಗ್ಗೆಯೇ ಹೋಮ ಹವನ ನಡೆಸಿದ ನಂತರ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ಮೇಲೆ ಕುಳಿತು ದರ್ಬಾರ್ ನಡೆಸಲಿದ್ದಾರೆ. ನವರಾತ್ರಿಯ 9 ದಿನಗಳು ಮೈಸೂರು ಅರಮನೆಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ದಸರಾ ಉದ್ಘಾಟನೆಗೆ ಮೈಸೂರಿಗೆ ಬರುತ್ತಿದ್ದಾರೆ.ಅವರನ್ನು ಅರಮನೆಗೆ ಆಹ್ವಾನಿಸುವ ಬಗ್ಗೆ ರಾಜಮಾತೆ ಪ್ರಮೋದಾದೇವಿ ನಿರ್ಧಾರ ಮಾಡುತ್ತಾರೆ ಎನ್ನುತ್ತಾರೆ ಯದುವೀರ್.

ಇನ್ನು ಮೈಸೂರು ಅರಮನೆಯಲ್ಲಿ ನವರಾತ್ರಿ ಮೊದಲ ದಿನ ಖಾಸಗಿ ದರ್ಬಾರ್ ಮುನ್ನ ದೇವರನ್ನು ತಂದು ಪೂಜಿಸಲಾಗುತ್ತದೆ. ಅರಮನೆ ಆವರಣದಲ್ಲಿರುವ ಕೋಡಿ ಸೋಮೇಶ್ವರ ದೇವಸ್ಥಾನಕ್ಕೆ ರಾಜಪರಿವಾರದವರು ಬಂದು ದೇವರನ್ನು ತೆಗೆದುಕೊಂಡು ಹೋಗುತ್ತಾರೆ. ಇದಾದ ನಂತರ ಅರಮನೆಯಲ್ಲಿ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಲಕ್ಷ್ಮಿ ಪೂಜೆ, ಸರಸ್ವತಿ ಪೂಜೆ, ಕಾಳರಾತ್ರಿ ಪೂಜೆ, ಆಯುಧ ಪೂಜೆಯ ದಿನ ಆಯುಧ ಪೂಜೆಗಳು ಇದಾದ ಬಳಿಕ ವಿಜಯದಶಮಿ ಯಾತ್ರೆ ಬಳಿಕ ಬನ್ನಿಮರಕ್ಕೆ ಪೂಜೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಈಗಾಗಲೇ ನಿಗದಿಯಾಗಿವೆ. ನಾಡು ಶುಭಿಕ್ಷವಾಗಿರಲೆಂದು ಮುಂದೆ ಇದೇ ರೀತಿ ದಸರಾ ಆಚರಣೆಯಾಗಲೆಂದು ಯದುವೀರ್ ಹಾರೈಸಿದ್ದಾರೆ.

ಒಟ್ಟಾರೆ ಮೈಸೂರಿನಲ್ಲಿ ನಾಡಹಬ್ಬ ದಸರಾ ಹಾಗೂ ರಾಜಮನೆತನದ ದಸರಾ ಎರಡೂ ಕಳೆಗಟ್ಟುತ್ತಿವೆ. ಎರಡು ವರ್ಷಗಳ ನಂತರ ಈ ಬಾರಿ ಅದ್ದೂರಿಯಾಗಿ ದಸರಾ ಸಂಭ್ರಮ ನೆರವೇರಲಿದೆ.

ಸುರೇಶ್ ಬಿ. ಪವರ್ ಟಿವಿ ಮೈಸೂರು

RELATED ARTICLES

Related Articles

TRENDING ARTICLES