Wednesday, January 22, 2025

ಉತ್ತರಾಖಂಡ್‌ನಲ್ಲಿ ಭೂ ಕುಸಿತ

ರುದ್ರ ಪ್ರಯಾಗ ಬಳಿಯ ರಾಷ್ಟ್ರೀಯ ಹೆದ್ದಾರಿ 109ರಲ್ಲಿ ಗುಡ್ಡ ಕುಸಿತಗೊಂಡಿದೆ. ಗುಡ್ಡದ ಮಣ್ಣು ರಸ್ತೆಯ ಮೇಲೆ ಬಿದ್ದಿದ್ದು, ವಾಹನ ಸಂಚಾರ ಬಂದ್​​ ಮಾಡಲಾಗಿದೆ.

ಉತ್ತರಾಖಂಡದ ರುದ್ರಪ್ರಯಾಗ್​​​ ಜಿಲ್ಲೆಯ ತರ್ಸರಿ ಗ್ರಾಮದಲ್ಲಿ ಭೂ ಕುಸಿತವಾಗಿದೆ. ತಕ್ಷಣ ಪ್ರವಾಸಿಗರನ್ನು ವಾಪಾಸ್​ ತೆರಳುವಂತೆ ಸೂಚಿಸಿದ್ದು, ಯಾರೂ ಈ ಮಾರ್ಗವಾಗಿ ಪ್ರಯಾಣ ಆರಂಭಿಸದಂತೆ ತಿಳಿಸಲಾಗಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್​​ ಆದ ಮಯೂರ್​​ ದೀಕ್ಷಿತ್​​ ಮಾತನಾಡಿ, ಹೈ ವೇ ಮಾರ್ಗವನ್ನು ಸರಿಪಡಿಸಲಾಗ್ತಿದೆ. ಮಣ್ಣು ತೆರವು ಕಾರ್ಯ ಆರಂಭಗೊಂಡಿದೆ.

ಮಣ್ಣನ್ನು ಸಂಪೂರ್ಣವಾಗಿ ತೆರವು ಮಾಡಿದ ನಂತರ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದ್ರು. ಕೇಧಾರನಾಥ, ರುದ್ರಪ್ರಯಾಗ್​​​, ಥಿಲ್ವಾರ, ಅಗಸ್ತ್ಯ ಮುನಿ ಮತ್ತು ಗುಪ್ತ್​​​​ಕಾಶಿ ಪ್ರಯಾಣವನ್ನು ಬಂದ್​​ ಮಾಡಲಾಗಿದೆ.

RELATED ARTICLES

Related Articles

TRENDING ARTICLES