ಬೆಂಗಳೂರು: ಎಸಿಬಿ(ಭ್ರಷ್ಟಾಚಾರ ನಿಗ್ರಹ ದಳ) ರದ್ದಾಗಿ ಲೋಕಾಯುಕ್ತ ಸಂಸ್ಥೆಗೆ ಪವರ್ ಕೊಟ್ಟ ಬೆನ್ನಲ್ಲೇ, ಭ್ರಷ್ಟರ ಪಾಲಿಕೆಗೆ ಲೋಕಾಯುಕ್ತ ಸಂಸ್ಥೆ ಮತ್ತೆ ಸಿಂಹ ಸ್ವಪ್ನವಾಗಿದೆ ಪರಿಣಮಿಸಿ, ಭ್ರಷ್ಟರ ವಿರುದ್ಧ ಬ್ಯಾಕ್ ಟು ಬ್ಯಾಕ್ ಮಹಾ ಭೇಟಿಗೆ ಇಳಿದಿದೆ.
ಸರ್ಕಾರಿ ಇಲಾಖೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಬಗ್ಗೆ ಲೋಕಾಯುಕ್ತಕ್ಕೆ ಸಾಲು ಸಾಲು ದೂರುಗಳ ಬಂದ ಹಿನ್ನಲೆಯಲ್ಲಿ ಸಿಡಿದೆದ್ದು ಭ್ರಷ್ಟರ ಭೇಟೆಗೆ ಲೋಕಾಯುಕ್ತ ನಿಂತಿದೆ. ತನ್ನ ಗತ ವೈಭವವನ್ನ ಮತ್ತೆ ತೋರಿಸಲು ಅಧಿಕಾರಿಗಳ ಎದೆಯಲ್ಲಿ ನಡುಕ ಉಟ್ಟಿಸಲು ಭರ್ಜರಿ ದಾಳಿ ಮಾಡಲು ಸಿದ್ಧತೆ ನಡೆಸಿದೆ.
ಕಳೆದ ಕೆಲವು ದಿನಗಳ ಹಿಂದೆ ಬಿಬಿಎಂಪಿ ಜಂಟಿ ಆಯುಕ್ತ ಕೆಎಎಸ್ ಶ್ರೀನಿವಾಸ್ ಮೇಲೆ ದಾಳಿ ಬಳಿಕ ನಿನ್ನೆ ಕೆಐಎಡಿಬಿ ವಿಶೇಷ ಭೂಸ್ವಾದೀನ ಅಧಿಕಾರಿ ವಿಜಯ್ ಕುಮಾರ್ ಮೇಳೆ ರೆಡ್ ಹ್ಯಾಂಡ್ ಆಗಿ ದಾಳಿ ಮಾಡಿ ತನ್ನ ಕೆಡ್ಡಾಕೆ ಕೆಡವಿದೆ.
ಬೆಂಗಳೂರು ಉತ್ತರ ತಾಲೂಕು ಯಶವಂತಪುರ ಹೊಬಳಿ ಲಗ್ಗೇರಿ ಗ್ರಾಮ ಸ.147 ಸಂಬಂಧವಾಗಿ ಭೂಸ್ವಾಧೀನ ಪಡಿಸಿಕೊಂಡಿಲ್ಲದಿರುವುದಿಲ್ಲವೆಂಬ ಬಗ್ಗೆ ನಿರಾಕ್ಷೇಪಣಾ ಪತ್ರ ನೀಡಲು 3 ಲಕ್ಷ ರೂ ಲಂಚ ವಾಪಸ್ ನೀಡುವಾಗ ರೆಡ್ ಹ್ಯಾಂಡ್ ಆಗಿ ಕೆಎಎಸ್ ಅಧಿಕಾರಿ ವಿಜಯ ಕುಮಾರ್ ಲೋಕಾಯುಕ್ತ ಅಧಿಕಾರಿಗಳ ಕೈಲಿ ಸಿಕ್ಕಿಬಿದ್ದಿದ್ದಾರೆ.
ಕೆಐಎಡಿಬಿ ನಲ್ಲಿ ರೈತರಿಗೆ ಪರಿಹಾರ ಹಾಗೂ ಎನ್ಓಸಿ ನೀಡಲು ರೈತರಿಂದ ಕಂತೆ ಕಂತೆ ಹಣ ಬೇಡಿಕೆ ಇಡುತ್ತಿರುವ ಆರೋಪ ಬಂದ ಬೆನ್ನಲ್ಲೆ ಲೋಕಾಯುಕ್ತ ದಾಳಿ ನಡೆಸಿ ಭ್ರಷ್ಟರನ್ನ ಬಲೆಗೆ ಬೀಸಿದೆ.
ಎಸಿಬಿ ಕೂಡ ಈ ಹಿಂದೆ ಕೆಐಎಡಿಬಿ ಭೂ ಸ್ವಾಧೀನ ವಿಭಾಗದ ಮೇಲೆ ಕಣ್ಣೀಟ್ಟು ಅಧಿಕಾರಿಗಳನ್ನ ಕೆಡ್ಡಾಕ್ಕೆ ಕೆಡುವಿದ್ದು, ಇದೀಗ ಲೋಕಾಯುಕ್ತ ಕೂಡ ಕೆಐಎಡಿಬಿ ಭ್ರಷ್ಟರ ವಿರುದ್ಧ ಮಹಾ ಸಮರ ಸಾರುತ್ತಿದೆ.