Monday, December 23, 2024

‘ರಷ್ಯಾ ವಿಶ್ವಸಂಸ್ಥೆ ನಿಯಮ ಉಲ್ಲಂಘಿಸಿದೆ : ಜೋ ಬೈಡನ್

ಅಮೇರಿಕ ಅಧ್ಯಕ್ಷ ಜೋ ಬೈಡನ್ ವಿಶ್ವಸಂಸ್ಥೆಯಲ್ಲಿ ಮಾತನಾಡಿದ್ದು, ರಷ್ಯಾ ಉಕ್ರೇನ್​​​​ನಲ್ಲಿ ನಾಚಿಕೆಯಿಲ್ಲದೇ ವಿಶ್ವಸಂಸ್ಥೆ ನಿಯಮ ಉಲ್ಲಂಘನೆ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಉಕ್ರೇನ್​​​​ನ ಪ್ರತಿರೋಧವನ್ನು ಬೆಂಬಲಿಸುವಂತೆ ಜಾಗತಿಕ ಸಮುದಾಯಕ್ಕೆ ಬೈಡೆನ್ ಕರೆ ನೀಡಿದ್ದಾರೆ. 7 ತಿಂಗಳಿಂದ ರಷ್ಯಾದ ಅತಿಕ್ರಮಣವನ್ನು ಖಂಡಿಸಿರುವ ಬೈಡೆನ್, ನಾಗರಿಕರೆಡೆಗೆ ರಷ್ಯಾದ ದೌರ್ಜನ್ಯ ಹಾಗೂ ಉಕ್ರೇನ್ ಹಾಗೂ ಅದರ ಸಂಸ್ಕೃತಿಯನ್ನು ನಾಶ ಮಾಡುವ ಯತ್ನ ಗಾಬರಿ ಹುಟ್ಟಿಸುತ್ತದೆ.

ಇನ್ನು ಪುಟಿನ್ ಅವರ ಇತ್ತೀಚಿನ ಹೇಳಿಕೆಗಳ ಬಗ್ಗೆಯೂ ಮಾತನಾಡಿರುವ ಬೈಡೆನ್, ಪುಟಿನ್ ಯುರೋಪ್​​ಗೆ ಹೊಸದಾಗಿ ಅಣು ಬೆದರಿಕೆ ಹಾಕಿದ್ದು, ಪರಮಾಣು ಶಸ್ತ್ರಾಸ್ತ್ರಗಳ ಪ್ರಸರಣ ಮಾಡದಿರುವುದಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಿರುವ ರಾಷ್ಟ್ರದ ನಾಯಕರಾಗಿ ಪುಟಿನ್ ಅವರ ಈ ರೀತಿಯ ಹೇಳಿಕೆಗಳು ರಷ್ಯಾಗೆ ತನ್ನ ಜವಾಬ್ದಾರಿಯೆಡೆಗೆ ಅಜಾಗರೂಕ ನಿರ್ಲಕ್ಷ್ಯವನ್ನು ತೋರುತ್ತದೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES