Monday, December 23, 2024

ಬಂಡಿ ಮಾಕಾಳಮ್ಮನ ಅಂಗಳದಿಂದ ರೌಡಿಗಳ ಅಟ್ಟಹಾಸ

ಸ್ಯಾಂಡಲ್​​ವುಡ್​ನಲ್ಲಿ ಸದ್ಯ ನಟರಾಕ್ಷಸ ಡಾಲಿದೇ ಹವಾ. ನಟ ಭಯಂಕರನ ಸಿನಿಮಾಗಳು ಯಾರ ಎಗ್ಗಿಲ್ಲದೇ ಬಾಕ್ಸ್​ ಆಫೀಸ್​​ ಕೊಳ್ಳೆ ಹೊಡೆಯುತ್ತಿವೆ. ಇದೀಗ ಭೂಗತ ಲೋಕವನ್ನು ಗಢ ಗಢ ನಡುಗಿಸಿದ್ದ ಅಂಡರ್​​ವರ್ಲ್ಡ್​ ಡಾನ್​ ಜಯ ರಾಜ್​ ರೋಲ್​​ನಲ್ಲಿ ಟಗರು ಡಾಲಿ ಬರ್ತಿದ್ದಾರೆ. ಕುತೂಹಲ ಕೆರಳಿಸಿರೋ ಹೆಡ್​​ಬುಷ್​ ರೌಡಿಗಳು ಒಂದೇ ಕಡೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಇತ್ತ ದುಬೈ ಶೇಕ್​​ಗಳ ಜತೆ ಡಾಲಿ ಶೇಕ್​ ಹ್ಯಾಂಡ್​ ಕಹಾನಿ ಕೂಡ ಹೇಳ್ತೀವಿ. ನೀವೇ ಓದಿ.

  • ದುಬೈ ಏರ್​​​​​​ಪೋರ್ಟ್​​​​ನಲ್ಲಿ ಡಾಲಿಗೆ ಗುಲಾಬಿಯ ಸ್ವಾಗತ

ಭೂಗತ ಲೋಕದ ಕರಾಳ ಜಗತ್ತಿನ ಸುತ್ತ ಹೆಣೆದ ಕಥೆ ಹೆಡ್​​ ಬುಷ್​​​​. ಸದ್ಯ ಈ ಸಿನಿಮಾ ರಿಲೀಸ್​​​ ರಿಲೀಸ್​ ಹಂತದಲ್ಲಿದೆ. ಅಕ್ಟೋಬರ್​ 21ಕ್ಕೆ ಅಂಡರ್​​​​ ವರ್ಲ್ಡ್​​ ಡಾನ್​ ಆಗಿ ಮೆರೆದಿದ್ದ ಜಯರಾಜ್​​ ರೋಚಕ ಕಹಾನಿಯ ಪುಟಗಳನ್ನು ತೆರೆದಿಡೋಕೆ ನಿರ್ದೇಶಕ ಶೂನ್ಯ​ ಸಜ್ಜಾಗಿದ್ದಾರೆ. ರೌಡಿಗಳ ರುದ್ರನರ್ತನವನ್ನು ಕಣ್ಣಿಗೆ ಕಣ್ಣಿದಂತೆ ತೋರಿಸೋಕೆ ಸಖತ್​ ವರ್ಕ್​​ ಔಟ್​​ ಮಾಡಲಾಗಿದೆ. ಇದ್ರ ಜತೆಯಲ್ಲಿ ಬಂಡಿ ಮಾಕಾಳಮ್ಮ ಅಂಗಳದಿಂದ ಹೆಡ್​​ ಬುಷ್​ಗೆ ಕಿಕ್​ಸ್ಟಾರ್ಟ್​ ಸಿಕ್ಕಿದೆ.

ನಗರದ ಬಂಡೆ ಮಾಕಾಳಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಹೆಡ್​​ ಬುಷ್​​​​ ಚಿತ್ರದ ಪ್ರಮೋಷನ್​​ ಶುರು ಮಾಡಲಾಗಿದೆ.  ಅಗ್ನಿ ಶ್ರೀಧರ್​​ 1970 ರ ನಗ್ನ ಸತ್ಯಗಳನ್ನು ರಕ್ತದ ಲೇಖನಿಯಲ್ಲಿ ಇಳಿಸಿದ್ದಾರೆ. ರೌಡಿಗಳ ರೋಲ್​ನಲ್ಲಿ ನಟಿಸಿರುವ ಲೂಸ್​ ಮಾದ, ಟಗರು ಡಾಲಿ ಸೇರಿದಂತೆ ಇಡೀ ಟೀಮ್​ ಮಾದ್ಯಮದ ಎದ್ರು ಸಿನಿಮಾ ಡೈಲಾಗ್​​ ಹೊಡೆದು ಪ್ರಮೋಷನ್​ಗೆ​​ ಚಾಲನೆ ಕೊಟ್ಟಿದ್ದಾರೆ.

ಇತ್ತ ಹೆಡ್​​ ಬುಷ್ ಚಿತ್ರತಂಡ​​ ಪ್ರಮೋಷನ್​​​ ಸ್ಟಾರ್ಟ್​ ಮಾಡ್ತಿದ್ದಂತೆ, ಡಾಲಿ ದುಬೈ ಪ್ಲೈಟ್​ ಹತ್ತಿದ್ದಾರೆ. ಜಯರಾಜ್​ ಗೆಟಪ್​​​ನಲ್ಲಿ ಬೆಲ್​ ಬಾಟಂ ಪ್ಯಾಂಟ್​​ ತೊಟ್ಟು ದುಬೈನಲ್ಲಿ ಇಳಿದಿದ್ದಾರೆ. ಅಂತೂ ಮೊದಲ ದಿನವೇ ಹೆಡ್​​ಬುಷ್​​​ ಚಿತ್ರತಂಡ ದುಬೈ ಮಣ್ಣಿನಲ್ಲಿ ಪ್ರಚಾರ ಕಾರ್ಯ ಶುರು ಮಾಡಿದೆ. ಡಾನ್​ ಜಯರಾಜ್​ ದುಬೈ ಶೇಕ್ಸ್​ ಜತೆ ಹೆಡ್​​ ಬುಷ್​ ಆಡಲಿದ್ದಾರೆ.

ಯೆಸ್​​..ದುಬೈನಲ್ಲಿ ರಾಜ್ ಕಪ್ ಕ್ರಿಕೆಟ್​​​ ಟೂರ್ನಿ ನಡಿತಿದೆ. ಕ್ರಿಕೆಟ್​ ಜತೆಗೆ ಹೆಡ್​​ ಬುಷ್​ ಸಿನಿಮಾ ಪ್ರಚಾರವನ್ನು ವಿಭಿನ್ನವಾಗಿ ಮಾಡಿದೆ ಚಿತ್ರತಂಡ. ದುಬೈ ಏರ್​​ ಪೋರ್ಟ್​​​ನಲ್ಲಿ ಫ್ಲೈಟ್​​ ಇಳಿತಿದ್ದಂತೆ ಡಾನ್​ ಜಯರಾಜ್​ಗೆ ಗುಲಾಬಿ ಹೂವು ನೀಡಿ ಸ್ವಾಗತ ಮಾಡಲಾಗಿದೆ. ಅಂತೂ ವಿಶ್ವ ಪರ್ಯಟನೆ ಮೂಲಕ ಹೆಡ್​​ಬುಷ್​​​ಗೆ ಬೂಸ್ಟರ್​ ಡೋಸ್​ ಸಿಕ್ಕಿದೆ. ಚರಣ್​ ರಾಜ್​ ಸಂಗೀತ, ಡಾಲಿ ನಿರ್ಮಾಣ, ಸುನೋಜ್​ ಡಿಓಪಿ ಸಿನಿಮಾಗೆ ಶಕ್ತಿ ತುಂಬಿದೆ. ರೆಟ್ರೋ ರೌಡಿಸಂ  ದರ್ಬಾರ್​​ ಹೇಗಿರುತ್ತೆ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ.

ರಾಕೇಶ್​ ಆರುಂಡಿ, ಫಿಲ್ಮ್​​ ಬ್ಯುರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES