Monday, December 23, 2024

ಹತ್ತು ರೂಪಾಯಿಗೆ ‘ಅಪ್ಪಾಜಿ ಕ್ಯಾಂಟಿನ್’​ಲ್ಲಿ ಭರ್ಜರಿ ಊಟ

ಮೈಸೂರು: ಅಪ್ಪಾಜಿ ಕ್ಯಾಂಟೀನ್, ಹೆಚ್ ಡಿ ಕೋಟೆ ಜೆಡಿಎಸ್ ಮುಖಂಡ ಕೃಷ್ಣನಾಯಕ ಹಸಿದವರ ಆಶ್ರಯ ತಾಣ ಅನ್ನೋ ನಿಟ್ಟಿನಲ್ಲಿ ಎರಡು ತಿಂಗಳ ಹಿಂದಷ್ಟೇ ಅರಂಭ ಮಾಡಿರೋ ಕ್ಯಾಂಟಿನ್. ಆದ್ರೆ ನಿಜಕ್ಕೂ ಈ ಕ್ಯಾಂಟಿನ್ ಜನ್ರ ಸೇವೆ ಮಾಡೋ ಉದ್ದೇಶದಿಂದ ಆರಂಭವಾದ ಕ್ಯಾಂಟಿನ್ ಆಗಿದ್ಯ, ಅಥವಾ ರಾಜಕೀಯ ಲಾಭಕ್ಕಾಗಿ ಆರಂಭ ಮಾಡಲಾಗಿದ್ಯ, ಅಷ್ಟಕ್ಕೂ ಕ್ಯಾಂಟಿನ್ ನಲ್ಲಿ ಹೇಗಿದೆ ಊಟ, ತಿಂಡಿ. ಪವರ್ ಟಿವಿ ನಡೆಸಿದ ರಿಯಾಲಿಟಿ ಚೆಕ್ ಇಲ್ಲಿದೆ.

ಹೆಚ್ ಡಿ‌ ಕೋಟೆ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಎಡರು ತಿಂಗಳ ಹಿಂದಷ್ಟೇ ಆರಂಭ ಮಾಡಲಾಗಿರೋ ಅಪ್ಪಾಜಿ ಕ್ಯಾಂಟಿನ್. ಹಸಿದವರ ಆಶ್ರಯ ತಾಣ ಅನ್ನೋ ಹೆಸ್ರಲ್ಲಿ ಈ ಕ್ಯಾಂಟಿನ್ ನಿರ್ಮಾತೃ ಜೆಡಿಎಸ್ ಮುಖಂಡ ಕೃಷ್ಣನಾಯಕ್ ಆರಂಭ ಮಾಡಿದ್ದಾರೆ. ಪವರ್ ಟಿವಿ ನಡೆಸಿದ ರಿಯಾಲಿಟಿ ಚೆಕ್ ನಲ್ಲಿ ಕ್ಯಾಂಟಿನ್ ನಿಂದ ಆಗ್ತಿರೋ ಅನುಕೂಲದ ಬಗ್ಗೆ ಜನ್ರು ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ. ಕೇವಲ ಹತ್ತು ರೂಪಾಯಿಗೆ ಅಪ್ಪಾಜಿ ಕ್ಯಾಂಟಿನ್ ನಿಂದ ಸಿಗ್ತಿರೋ ಊಟ, ತಿಂಡಿ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

ಇನ್ನೂ, ತಾಲೂಕು ಕೇಂದ್ರದಲ್ಲಿ ಎರಡು ತಿಂಗಳ ಹಿಂದಷ್ಟೇ ಆರಂಭವಾಗಿರೋ ಈ ಕ್ಯಾಂಟಿನ್ ಅಪಾರ ಜನಮನ್ನಣೆಗೆ ಪಾತ್ರವಾಗಿದೆ. ಕಾಲೇಜು ವಿದ್ಯಾರ್ಥಿಗಳು, ಹಳ್ಳಿಗಳಿಂದ ತಾಲೂಕು ಕೇಂದ್ರಕ್ಕೆ ವಿವಿಧ ಕೆಲಸಗಳಿಗೆ ಬರೋ ರೈತರು, ಆಟೋ, ಟ್ಯಾಕ್ಸಿ ಚಾಲಕರ ಹಸಿವನ್ನ ಕಡಿಮೆ ಹಣದಲ್ಲಿ ಈ ಕ್ಯಾಂಟಿನ್ ನೀಗಿಸುತ್ತಿದೆ.

ಪ್ರತಿನಿತ್ಯ ಅಪ್ಪಾಜಿ ಕ್ಯಾಂಟಿನ್ ಸುಮಾರು 1600 ಮಂದಿಗೆ ಊಟ, ತಿಂಡಿ ಒದಗಿಸ್ತಿದೆ. ಬೆಳಿಗ್ಗೆ 8 ಗಂಟೆಯಿಂದ 10: 30 ರ ವರೆಗೆ ಇಡ್ಲಿ, ಕಾರಾಬಾತ್, ಬಾತ್ ಉಪಹಾರ ಕೇವಲ 10 ರೂಪಾಯಿಗೆ ದೊರೆಯುತ್ತಿದೆ. ಮಧ್ಯಾಹ್ನ 12: 30 ರಿಂದ 3 ಗಂಟೆ ವರೆಗೆ ಮುದ್ದೆ, ಅನ್ನ ಸಾರು, ಪಲ್ಯ, ಉಪ್ಪಿನ ಕಾಯಿ, ಅಪ್ಪಳ ಕೂಡ ಕೇವ 10 ರೂಪಾಯಿಗೆ ಸಿಗಲಿದೆ. ಕ್ಯಾಂಟಿನ್ ನಲ್ಲಿ ಮೂವರು ಮಹಿಳೆಯರು ಸೇರಿದಂತೆ 11 ಮಂದಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಶುಚಿತ್ವದ ಜೊತೆಗೆ ರುಚಿ ರುಚಿಯಾದ ಊಟದ ಮೂಲಕ ಬಡವರು, ಹಸಿದವ್ರು ಹೊಟ್ಟೆ ತುಂಬಿಸುತ್ತಿದೆ. ಇನ್ನೂ ಈ ಕ್ಯಾಂಟಿನ್ ರಾಜಕೀಯ ಲಾಭಕ್ಕಾಗಿ ಕ್ಯಾಂಟಿನ್ ಆರಂಭ ಮಾಡಿದ್ದಾರೆ ಅನ್ನೋರಿಗೆ ಕೃಷ್ಣ ನಾಯಕ್ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ.

ರಾಜಕೀಯ ಲಾಭಕ್ಕೆ ಕೆಲ ರಾಜಕಾರಣಿಗಳು ಸೇವಾ ಮನೋಭಾವದ ಮುಖವಾಡ ಹಾಕೊಂಡು ಸೇವೆ ಮಾಡ್ತೀವಿ ಅನ್ನೋರೆ ಹೆಚ್ಚು. ಆದ್ರೆ, ನಿಜವಾದ ಜನ್ರ ಸೇವೆ ಮಾಡೋರಿಗೆ ಯಾವ ಅಪೇಕ್ಷೆ ಇರೋದಿಲ್ಲ. ಹೆಚ್ ಡಿ ಕೋಟೆ ಅಪ್ಪಾಜಿ ಕ್ಯಾಂಟಿನ್ ಹಸಿದವರಿಗೆ ಆಶ್ರಯ ತಾಣ ಅನ್ನೋದು ನಿಜಕ್ಕೂ ಸಾಬೀತು ಆಗಿದೆ. ಆ ಮೂಲಕ ಸರ್ಕಾರವೇ ಮಾಡಲಾಗದ ಕೆಲ್ಸವನ್ನ ಜನಸಾಮನ್ಯನೊಬ್ಬ ಮಾಡ್ತಿರೋದು ನಿಜಕ್ಕೂ ಶ್ಲಾಘನೀಯ

ಸುರೇಶ್ ಬಿ, ಪವರ್ ಟಿವಿ. ಮೈಸೂರು

RELATED ARTICLES

Related Articles

TRENDING ARTICLES