Monday, December 23, 2024

ಪೇ-ಸಿಎಂ ಅಭಿಯಾನ; ಕೆಪಿಸಿಸಿ ಸಾಮಾಜಿಕ ಜಾಲತಾಣ ಮಾಜಿ ಅಧ್ಯಕ್ಷ ಬಂಧನ

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ ಪೇ-ಸಿಎಂ ಅಭಿಯಾನ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಸಾಮಾಜಿಕ ಜಾಲತಾಣ ರಾಜ್ಯ ಕಾರ್ಯದರ್ಶಿ ಬಿ. ಆರ್ ನಾಯ್ಡು ಅವರನ್ನ ಮಧ್ಯರಾತ್ರಿ ಅರೆಸ್ಟ್ ಮಾಡಲಾಗಿದೆ.

ಅರೆಸ್ಟ್ ಆದ ಕಾಂಗ್ರೆಸ್ ಯುವ ಮುಖಂಡ ಬಿ.ಆರ್ ನಾಯ್ಡು 40% ಕಮಿಷನ್ ವಿರುದ್ಧ ಪೇ-ಸಿಎಂ ಪೋಸ್ಟರ್ ಅಂಟಿಸಿದ್ದ ಆರೋಪ ಇದರ ವಿರುದ್ಧ ಕೆಂಡಾಮಂಡಲವಾಗಿದ್ದ ಸಿಎಂ ಬೊಮ್ಮಾಯಿ ಎಫ್ ಐ ಆರ್ ಕೂಡ ದಾಖಲಿಸಿದ್ದರು.

ಪೊಲೀಸರು ಪೇ ಸಿಎಂ ಪೋಸ್ಟರ್ ಕೇಸ್ ನಲ್ಲಿ ಬಿ.ಆರ್ ನಾಯ್ಡು ಅವರನ್ನ ಅರಸ್ಟೆ ಮಾಡಿ ಹೈಗ್ರೌಂಡ್ಸ್ ಪೊಲೀಸರಿಂದ ವಿಚಾರಣೆ ನಡೆಸಲು ಮುಂದಾಗಿದೆ.

ಇನ್ನು ಬಿ.ಆರ್​ ನಾಯ್ಡು ಬಂಧನಕ್ಕೆ ಅವರ ಕುಟುಂಬದವರು ಆತಂಕಕ್ಕೆ ಒಳಗಾಗಿದ್ದಾರೆ. ಹಾಗೇಯೇ ಕೆಪಿಸಿಸಿ ಸಾಮಾಜಿಕ ಜಾಲತಾಣದ ಗಗನ್ ಯಾದವ್ ರನ್ನ ಕೆ.ಆರ್​ಪುರದ ಅವರ ನಿವಾಸ ದೇವಸಂದ್ರ ದಿಂದ ಸದಾಶಿವ ನಗರ ಪೊಲೀಸ್ ನವರು ಅರೆಸ್ಟ್ ಮಾಡಿದ್ದರೆಂದು ಗಗನ್ ತಂದೆ ಗೋಪಾಲ್ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES