Monday, December 23, 2024

ಆಸ್ಕರ್​ ಅಂಗಳದಲ್ಲಿ ಕನ್ನಡಿಗನ ಕೈಚಳಕದ ‘ಚೆಲ್ಲೋ ಶೋ’

ಪ್ರಪಂಚದ ಪ್ರತಿಷ್ಟಿತ ಪ್ರಶಸ್ತಿಗಳಲ್ಲಿ ಆಸ್ಕರ್​ ಕೂಡ ಒಂದು. ಈ ಪ್ರಶಸ್ತಿಗೋಸ್ಕರ ಇಡೀ ಜೀವಮಾನವನ್ನೆ ಸವೆಸುವ ಚಿತ್ರಪ್ರೇಮಿಗಳಿದ್ದಾರೆ. ಸಿನಿಮಾ ರಂಗದ ಸಾಧನೆಯ ಹೆಮ್ಮೆಯ ಪ್ರತೀಕ ಆಸ್ಕರ್​​​. ಈ ಬಾರಿಯ ಆಸ್ಕರ್​​ಗೆ ಇಂಡಿಯಾದಿಂದ ವಿಭಿನ್ನ ಸಿನಿಮಾ ಆಯ್ಕೆಯಾಗಿ ಅಚ್ಚರಿ ಮೂಡಿಸಿದೆ. ಆರ್​ಆರ್​ಆರ್​​​, ಕಾಶ್ಮೀರಿ ಫೈಲ್ಸ್​​ ಸಿನಿಮಾಗಳನ್ನು ಹಿಂದಿಕ್ಕಿ ಈ ಸಾಧನೆ ಮಾಡಿದೆ. ಅರೆ..! ಆ ಸಿನಿಮಾ ಯಾವುದು..? ಸಿನಿಮಾದ ಸ್ಪೆಷಾಲಿಟಿಗಳೇನು..? ಹೀರೋ ಯಾರು ಅಂತೀರಾ..? ನೀವೇ ಓದಿ.

ರಾಜಮೌಳಿ ಆರ್​ಆರ್​ಆರ್​​​ ಹಿಂದಿಕ್ಕಿ ಗ್ರ್ಯಾಂಡ್​ ಎಂಟ್ರಿ

ಪ್ರತಿ ವರ್ಷವೂ ಸಿನಿಮಾ ಕ್ಷೇತ್ರದ ವಿಭಿನ್ನ ಕಥೆ, ನಿರ್ದೇಶನ, ಸಂಗೀತ ಸಾಧನೆಗೆ ಆಸ್ಕರ್​ ಪ್ರಶಸ್ತಿ ನೀಡಲಾಗುತ್ತೆ. ಈ ಅವಾರ್ಡ್​​ಗೆ ನಾಮಿನೇಟ್​ ಅಗೋದೆ ದೊಡ್ಡ ಸಾಹಸ ಹಾಗೂ ಸಾಧನೆಯ ಕೆಲಸ. ಪ್ರಪಂಚದ ನುರಿತ ತಾಂತ್ರಿಕ ಜಡ್ಜ್​​ಗಳ ಎದ್ರು ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಳ್ಳೋದು ದೊಡ್ಡ ಸವಾಲಿನ ಕೆಲಸ. ಇದೀಗ ಎಲ್ರೂ ಅಚ್ಚರಿ ಪಡುವಂತೆ ಗುಜರಾತಿ ಸಿನಿಮಾ ಭಾರತದಿಂದ ನೇರವಾಗಿ ಆಯ್ಕೆ ಆಗಿದೆ. ಆರ್​ಆರ್​ಆರ್​​, ಕಾಶ್ಮೀರಿ ಫೈಲ್ಸ್​​ ಸಿನಿಮಾಗಳನ್ನು ಹಿಂದಿಕ್ಕಿ ಈ ಸಾಧನೆ ಮಾಡಿದೆ.

ಫಿಲ್ಮ್​ ಫೆಡರೇಷನ್​ ಆಫ್​ ಇಂಡಿಯಾ ಪ್ರತಿ ಭಾರಿ ಒಂದು ಸಿನಿಮಾವನ್ನು ಆಸ್ಕರ್​ಗೆ ನಾಮಿನೇಟ್​ ಮಾಡಿ ಕಳುಹಿಸುತ್ತೆ. ಅಲ್ಲಿಗೆ ಸೆಲೆಕ್ಟ್​ ಆಗ್ಬೇಕು ಅಂದ್ರೆ ಸಿನಿಮಾ ಮೇಕಿಂಗ್​ ಹೇಗಿರಬೇಕು ಜಸ್ಟ್​ ಇಮ್ಯಾಜಿನ್​​​. ಈ ಬಾರಿ ರಾಜಮೌಳಿಯ ಆರ್​ಆರ್​ಆರ್​, ಕಾಶ್ಮೀರಿ ಫೈಲ್ಸ್​ ಸಿನಿಮಾ ಸೆಲೆಕ್ಟ್​ ಆಗಬಹುದು ಅನ್ಕೊಂಡಿದ್ರು. ಆದ್ರೆ ಎಲ್ಲರ ನಿರೀಕ್ಷೆ ಮೀರಿ ಗುಜರಾತಿ ಭಾಷೆಯ ಚೆಲ್ಲೋ ಶೋ ಅವಕಾಶ ಪಡೆದಿದೆ. ಒಂಬತ್ತನೇ ವಯಸ್ಸಿನ ಬಾಲಕನ ಬಾಲ್ಯದ ಕಥೆಯೇ ಚೆಲ್ಲೋ ಶೋ.

ಹಳ್ಳಿ, ರೈಲ್ವೆ ಜಂಕ್ಷನ್​ಗಳ ಮೇಲೆ ಲೋಕಲ್​ ಹುಡುಗರನ್ನೆ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಪ್ಯಾನ್​ ನಳಿನ್​​ ನಿರ್ದೇಶನದಲ್ಲಿ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದ್ದು ಪ್ರಶಸ್ತಿಯ ನಿರೀಕ್ಷೆ ಮೂಡಿಸಿದೆ. ಕನ್ನಡಿಗರು ಹೆಮ್ಮೆ ಪಡೋ ವಿಚಾರ ಅಂದ್ರೆ, ಈ ಸಿನಿಮಾಗೆ ಎಡಿಟರ್​ ಕೆಲಸ ಮಾಡಿದ್ದು,  ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಪ್ರತಿಭೆ ಪವನ್​ ಭಟ್​​. ಚೆಲ್ಲೋ ಶೋ ಸಿನಿಮಾದಲ್ಲಿ ಕೆಲಸ ಮಾಡಿದ ಏಕೈಕ ಕನ್ನಡಿಗ ಪವನ್​​. ಸ್ಪೇನ್​ ಸೇರಿ ಅನೇಕ ಫಿಲ್ಮ್​ ಫೆಸ್ಟಿವಲ್​ಗಳಲ್ಲಿ ಪ್ರಶಸ್ತಿ ಬಾಚಿರೋ ಚೆಲ್ಲೋ ಶೋ ಆಸ್ಕರ್​​  ಮೇಲೂ ಕಣ್ಣಿಟ್ಟಿರೋದು ಹೆಮ್ಮೆಯ ವಿಚಾರ.

ಅಕ್ಟೋಬರ್​ 14ರಂದು ‘ಚೆಲ್ಲೋ ಶೋ’ ಸಿನಿಮಾ ರಿಲೀಸ್​ ಅಗಲಿದೆ. 95ನೇ ಸಾಲಿನ ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಚಿತ್ರಕ್ಕೆ ಪ್ರಶಸ್ತಿ ಸಿಗಲಿ ಎಂದು ಎಲ್ಲರೂ ಬೇಡಿಕೊಳ್ತಿದ್ದಾರೆ. ವಿದೇಶಗಳಲ್ಲೂ ಈ ಸಿನಿಮಾ ರಿಲೀಸ್​ ಆಗಲಿದೆ. 9 ವರ್ಷದ ಬಾಲಕನಿಗೆ ಸಿನಿಮಾ ಮೇಲೆ ಉಂಟಾಗುವ ಪ್ರೀತಿಯ ಕಥೆಯನ್ನು ಸಖತ್​ ಡಿಫರೆಂಟ್​ ಆಗಿ ತೋರಿಸಲಾಗಿದೆ.  ಸಿನಿಮಾ ಆಸ್ಕರ್​ಗೆ ನಾಮಿನೇಟ್​ ಅಗ್ತಿದ್ದಂತೆ, ಇಡೀ ಚಿತ್ರತಂಡಕ್ಕೆ ಸರ್​ಪ್ರೈಸ್​ ಆಗಿದೆ. ವ್ಹಾವ್​..! ಇದೆಂತಾ ಶುಭ ಸುದ್ದಿ ಅಂತಾ ಸಂಭ್ರಮಿಸಿದೆ. ಎನಿವೇ ಶ್ರದ್ಧೆಯಿಂದ ಮಾಡಿದ ಚೆಲ್ಲೋ ಶೋಗೆ ಆಸ್ಕರ್​ ಸಿಗಲಿ.

ರಾಕೇಶ್​ ಆರುಂಡಿ, ಫಿಲ್ಮ್​​ ಬ್ಯುರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES